ಯುಜಿಸಿಇಟಿ 25: ಆಪ್ಷನ್ ಎಂಟ್ರಿ ದಿನಾಂಕ ವಿಸ್ತರಣೆ, ಸರ್ವರ್ ಸಮಸ್ಯೆಗೆ ಆತಂಕ ಬೇಡವೆಂದ ಕೆಇಎ

ಬೆಂಗಳೂರು: ಸರ್ವರ್ ನಲ್ಲಿ ಕಾಣಿಸಿಕೊಂಡಿದ್ದ ಸಮಸ್ಯೆಯು ಸಹಜ ಸ್ಥಿತಿಗೆ ಮರಳುತ್ತಿದ್ದರೂ ಯುಜಿಸಿಇಟಿ-25 ಅಭ್ಯರ್ಥಿಗಳ ಹಿತದೃಷ್ಟಿಯಿಂದ ಆಪ್ಷನ್ ಎಂಟ್ರಿ ದಿನಾಂಕವನ್ನು ಜುಲೈ 15ರಿಂದ ಜುಲೈ 18ರವರೆಗೆ ವಿಸ್ತರಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಶುಕ್ರವಾರ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸರ್ವರ್ ಸಮಸ್ಯೆ ಕಾರಣಕ್ಕೆ ಲಾಗಿನ್ ಆಗಿ ಆಪ್ಷನ್ಸ್ ಎಂಟ್ರಿ ಮಾಡಲು ಕೊಂಚ ವಿಳಂಬವಾಗುತ್ತಿದ್ದುದನ್ನು ಪರಿಗಣಿಸಿ ಈ ವಿಸ್ತರಣೆ ಮಾಡಲಾಗಿದೆ. ಎಂಜಿನಿಯರಿಂಗ್, ಪಶು ವೈದ್ಯಕೀಯ ಮತ್ತು ಪಶುಸಂಗೋಪನೆ, ಕೃಷಿ ವಿಜ್ಞಾನ, ಬಿ.ಪಿ.ಟಿ. ಅಲೈಡ್ ಹೆಲ್ತ್ ಸೈನ್ಸ್ … Continue reading ಯುಜಿಸಿಇಟಿ 25: ಆಪ್ಷನ್ ಎಂಟ್ರಿ ದಿನಾಂಕ ವಿಸ್ತರಣೆ, ಸರ್ವರ್ ಸಮಸ್ಯೆಗೆ ಆತಂಕ ಬೇಡವೆಂದ ಕೆಇಎ