ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಆರಂಭದಿಂದಲೂ ವಿಭಿನ್ನ ಕಥಾನಕದ ಸುಳಿವು ನೀಡುವ ಮೂಲಕ ಚಿತ್ರಾಭಿಮಾನಿಗಳಲ್ಲಿ ನಿರೀಕ್ಷೆಯನ್ನು ನೂರ್ಮಡಿಗೊಳಿಸಿರುವ ಚೇಸ್ ಸಿನಿಮಾ ಬಿಡುಗಡೆ ಹೊಸ್ತಿಲಿನಲ್ಲಿ ನಿಂತಿದೆ. ಇದೇ ಜುಲೈ 15ರಂದು ರಾಜ್ಯಾದ್ಯಂತ ಸಸ್ಪೆನ್ಸ್ ಥ್ರಿಲ್ಲರ್ ಚೇಸ್ ಸಿನಿಮಾ ಮೆರವಣಿಗೆ ಹೊರಡಲಿದೆ. ವಿಲೋಕ್ ಶೆಟ್ಟಿ ಕನಸಿನ ಈ ಚಿತ್ರಕ್ಕೆ ನಿರ್ಮಾಪಕ ಮನೋಹರ್ ಸುವರ್ಣ ಜೀವ ಕೊಟ್ಟಿದ್ದು, ಪೋಸ್ಟರ್, ಟೀಸರ್, ಟ್ರೇಲರ್, ಹಾಡುಗಳು ಹೀಗೆ ಎಲ್ಲಾ ಬಗೆಯಲ್ಲಿಯೂ ಪ್ರೇಕ್ಷಕರನ್ನು ಚೇಸ್ ಆವರಿಸಿಕೊಂಡಿದೆ. ಥಿಯೇಟರ್ ಗೆ ಲಗ್ಗೆ ಇಡಲು ತಯಾರಾಗಿರುವ ಚೇಸ್ ಅಂಗಳದಿಂದ ಬಡಾ ಖಬರ್ ವೊಂದು ರಿವೀಲ್ ಆಗಿದೆ. ಇಂಡಿಯನ್ ಸಿನಿಮಾ ಇಂಡಸ್ಟ್ರೀಯಲ್ಲಿ ಸಿನಿಮಾ ವಿತರಣೆ ಹಾಗೂ ಸ್ಟ್ರೀಮಿಂಗ್ ಮೂಲಕ ಖ್ಯಾತಿ ಗಳಿಸಿರುವ ಯುಎಫ್ ಒ ಸಂಸ್ಥೆ ಇದೀಗ ಚೇಸ್ ಸಿನಿಮಾ ವಿತರಣೆ ಹಕ್ಕನ್ನು ಭಾರೀ ಮೊತ್ತ ಕೊಟ್ಟು ತನ್ನ ತೆಕ್ಕೆಗೆ ಹಾಕಿಕೊಂಡಿದೆ.

Chase
Chase

ದೇಶಾದ್ಯಂತ ಮೂವೀ ಸ್ಟ್ರೀಮಿಂಗ್ ನಲ್ಲಿ ತನ್ನದೇ ಸ್ಥಾನ ಪಡೆದುಕೊಂಡಿರುವ ಯುಎಫ್ ಒ ಸಂಸ್ಥೆ ಇತ್ತೀಚೆಗೆ ಸಿನಿಮಾ ವಿತರಣಾ ವಲಯಕ್ಕೂ ಎಂಟ್ರಿ ಕೊಟ್ಟಿದೆ. ವಿಶೇಷ ಅಂದ್ರೆ ಇದೇ ಮೊದಲ ಬಾರಿಗೆ ರಾಜ್ಯಕ್ಕೂ ಈ ಸಂಸ್ಥೆ ಕಾಲಿಟ್ಟಿದ್ದು, ಇದೀಗ ಯುಎಫ್ ಒ ಬಹುನಿರೀಕ್ಷಿತ ಚೇಸ್ ಸಿನಿಮಾ ವಿತರಣೆಯನ್ನು ತನ್ನದಾಗಿಸಿಕೊಂಡಿದೆ. ಭಾರತದ್ಯಾಂತ ಚೇಸ್ ಸಿನಿಮಾವನ್ನು ಈ ಸಂಸ್ಥೆ ವಿತರಣೆ ಮಾಡುತ್ತಿದ್ದು, ಈ ಮೂಲಕ ಕನ್ನಡ ಸಿನಿಮವೊಂದು ಅಂತರಾಷ್ಟ್ರೀಯ ಸಿನಿ ಮಾರುಕಟ್ಟೆಯಲ್ಲಿಯೂ ಗುರುತಿಸಿಕೊಳ್ಳುತ್ತಿದೆ. ಇದು ಕನ್ನಡ ಚಿತ್ರರಂಗದ ಮಂದಿ ಹಿರಿ ಹಿರಿ ಹಿಗ್ಗುವ ವಿಷ್ಯವಾಗಿದೆ.

ರಾಧಿಕಾ ನಾರಾಯಣ್, ಅವಿನಾಶ್ ನರಸಿಂಹರಾಜು, ಶೀತಲ್ ಶೆಟ್ಟಿ, ಪ್ರಮೋದ್ ಶೆಟ್ಟಿ, ಅರವಿಂದ ಬೋಳಾರ್, ರೆಹಮಾನ್ ಹಸನ್, ಅರ್ಜುನ್ ಯೋಗಿ, ಶ್ವೇತಾ ಸಂಜೀವುಲು, ಅರವಿಂದ್ ರಾವ್, ರಾಜೇಶ್ ನಟರಂಗ, ವೀಣಾ ಸುಂದರ್, ಸುಧಾ ಬೆಳವಾಡಿ, ಉಷಾ ಭಂಡಾರಿ ಮೊದಲಾದವರು ನಟಿಸಿರುವ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಚೇಸ್ ಸೆನ್ಸಾರ್ ಮಂಡಳಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೀಗ ಯುಎಫ್ ಒ ಅಧಿಕಾರಿಗಳು ಚಿತ್ರಕ್ಕೆ ಶಹಬ್ಬಾಸ್ ಗಿರಿ ಕೊಟ್ಟಿದ್ದಾರೆ. ಮೂವೀ ಸ್ಟ್ರೀಮಿಂಗ್ ಹಾಗೂ ಡಿಸ್ಟ್ಟಿಬ್ಯೂಷನ್ ನಲ್ಲಿ ತನ್ನದೇ ಹೆಸರು ಮಾಡಿರುವ ಯುಎಫ್ ಒ ಸಂಸ್ಥೆ ಕೆಜಿಎಫ್ ಸರಣಿ ಸಿನಿಮಾ ಹಾಗೂ ಚಾರ್ಲಿ ಬಳಿಕ ಚೇಸ್ ಸಿನಿಮಾವನ್ನು ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಗುರುತಿಸುವಂತೆ ಮಾಡಿದೆ. ಇದು ಚೇಸ್ ಚಿತ್ರಕ್ಕೆ ಸಿಕ್ಕಿರುವ ಆರಂಭಿಕ ಗೆಲುವು ಅಂದ್ರು ತಪ್ಪಾಗಲಿಕ್ಕಿಲ್ಲ. ಸಿಂಪ್ಲಿಫನ್ ಮೀಡಿಯಾ ನೆಟ್‌ವರ್ಕ್ ಬ್ಯಾನರ್‌ನಲ್ಲಿ ತಯಾರಾಗಿರುವ ಚೇಸ್ ಸಿನಿಮಾ ಇದೇ ಜುಲೈ 15ರಂದು ಬೆಳ್ಳಿತೆರೆಯಲ್ಲಿ ಅನಾವರಣಗೊಳ್ಳಲಿದೆ.

Share.
Exit mobile version