ಉಡುಪಿ : ನಾಳೆ ಅ.25 ರಂದು ಸೂರ್ಯ ಗ್ರಹಣ ಇದ್ದರೂ ಕೂಡ ಉಡುಪಿಯ ಪ್ರಸಿದ್ಧ ಶ್ರೀ ಕೃಷ್ಣಮಠ ನಾಳೆ ಕೂಡ ಎಂದಿನಂತೆ ತೆರೆದಿರುತ್ತದೆ ಎಂದು ಆಡಳಿತ ಮಂಡಳಿ ಪ್ರಕಟಣೆ ಹೊರಡಿಸಿದೆ.

ದೇವರ ಮಧ್ಯಾಹ್ನ ಪೂಜೆ ನಂತರ ದರ್ಬೆ ಇಡಲಾಗುತ್ತೆ. ಗ್ರಹಣ ಮೋಕ್ಷ ಕಾಲದಲ್ಲಿ ದರ್ಬೆ ತೆಗೆದು ಪೂಜೆ ಮಾಡಲಾಗುತ್ತೆ. ಆದರೆ ಭಕ್ತರಿಗೆ ಊಟ ವ್ಯವಸ್ಥೆ ಇರುವುದಿಲ್ಲ ಎಂದು ಸೂಚನೆ ನೀಡಿದೆ.

ಅದೇ ರೀತಿ ಮಲೆ ಮಹದೇಶ್ವರ ಬೆಟ್ಟದಲ್ಲಿ ಭಕ್ತರಿಗೆ ಎಂದಿನಂತೆ ದರ್ಶನಾವಕಾಶ ಇರಲಿದೆ. ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟದಲ್ಲಿ ಭಕ್ತರಿಗೆ ಎಂದಿನಂತೆ ದರ್ಶನಾವಕಾಶ ಇರಲಿದೆ. ಜೊತೆಗೆ ಎಂದಿನಂತೆ ಪ್ರಸಾದ ವ್ಯವಸ್ಥೆಯು ಇರಲಿದೆ. ಸೂರ್ಯ ಗ್ರಹಣಕ್ಕೆ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಆಡಳಿತ ಮಂಡಳಿ ಮಾಹಿತಿ ನೀಡಿದೆ.

27 ವರ್ಷಗಳ ಬಳಿಕ ಖೇತು ಗ್ರಹ ಸೂರ್ಯಗ್ರಹಣದ ನಡುವೆಯೂ ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಐತಿಹಾಸಿಕ ದೇವಸ್ಥಾನ ಗೋಕರ್ಣದಲ್ಲಿ ನಾಳೆ ಭಕ್ತರಿಗೆ ಆತ್ಮಲಿಂಗ ಸ್ಪರ್ಶಕ್ಕೆ ವಿಶೇಷ ಅವಕಾಶ ನೀಡಲಾಗಿದೆ. ಗ್ರಹಣ ಕಾಲದಲ್ಲಿ ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ಆತ್ಮ ಲಿಂಗ ಸ್ಪರ್ಶಕ್ಕೆ ಭಕ್ತರು ಆಗಮಿಸಬಹುದು. ಗ್ರಹಣದ ಮಧ್ಯ ಕಾಲದಿಂದ ಮುಕ್ತಾಯದ ವರಗೆ ಭಕ್ತರಿಗೆ ವಿಶೇಷ ಅವಕಾಶ ನೀಡಲಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆ ಹೊರಡಿಸಿದೆ.

ಅದೇ ರೀತಿ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭಕ್ತರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ನಾಳೆ ಬೆಳಗ್ಗೆ ದರ್ಶನಕ್ಕೆ ಅವಕಾಶವಿದ್ದು ಮಧ್ಯಾಹ್ನ 1ರ ಬಳಿಕ ಚಾಮುಂಡಿ ಬೆಟ್ಟಕ್ಕೆ ಪ್ರವೇಶ ಬಂದ್ ಆಗಲಿದೆ. ಸೂರ್ಯ ಗ್ರಹಣದ ಸಮಯದಲ್ಲಿ ದೇಗುಲದಲ್ಲಿ ವಿಶೇಷ ಪೂಜೆ ನಡೆಯಲಿದೆ. ಈ ವೇಳೆ ಭಕ್ತರಿಗೆ ದರ್ಶನ ಇರುವುದಿಲ್ಲ ಎಂದು ಚಾಮುಂಡೇಶ್ವರಿ ದೇವಸ್ಥಾನ ಮಂಡಳಿ ಮಾಧ್ಯಮ ಪ್ರಕಟಣೆ ಹೊರಡಿಸಿದೆ. ಇಂದು ಹಾಸನಾಂಬೆ ದರ್ಶನೋತ್ಸವದ ಹನ್ನೊಂದನೇ ದಿನವಾಗಿದ್ದು ದರ್ಶನಕ್ಕೆ ಸಾಗರೋಪಾದಿಯಲ್ಲಿ ಭಕ್ತರ ದಂಡು ಹರಿದು ಬರುತ್ತಿದೆ. ಇಂದು ರಜೆ ದಿನವಾದ್ದರಿಂದ ಬೆಳಗ್ಗೆಯಿಂದಲೆ ಸಾವಿರಾರು ಭಕ್ತರ ಆಗಮಿಸುತ್ತಿದ್ದಾರೆ. ಆದ್ರೆ ನಾಳೆ ಸೂರ್ಯ ಗ್ರಹಣ ಹಿನ್ನಲೆ ದರ್ಶನಕ್ಕೆ ನಿರ್ಬಂಧ ಹೇರಲಾಗಿದೆ. ಇಂದು ಮತ್ತು ಬುಧವಾರ ಮಾತ್ರ ದರ್ಶನ ವ್ಯವಸ್ಥೆ ಮಾಡಲಾಗಿದೆ. ಗುರುವಾರ ಮಧ್ಯಾಹ್ನ 12 ಗಂಟೆಗೆ ಹಾಸನಾಂಬೆ ಗರ್ಭಗುಡಿ ಬಾಗಿಲು ಮುಚ್ಚಲಾಗುತ್ತೆ.

BIG BREAKING NEWS: ಬ್ರಿಟನ್‌ ಪ್ರಧಾನಿಯಾಗಿ ಭಾರತೀಯ ಮೂಲದ ರಿಷಿ ಸುನಕ್ ಆಯ್ಕೆ| Rishi Sunak becomes Prime Minister

BIGG NEWS : 28 ವರ್ಷಗಳ ಸುದೀರ್ಘ ಅವಧಿ ಬಳಿಕ ಭರ್ತಿಯಾದ ಬೆಂಗಳೂರಿನ ‘ಹೆಸರಘಟ್ಟ ಕೆರೆ’

ರಸ್ತೆ ಗುಂಡಿಯಿಂದಾದ ಸಾವುಗಳನ್ನು “ಸರ್ಕಾರಿ ಕೊಲೆ” ಎಂದೇ ಪರಿಗಣಿಸಬೇಕು – ಕಾಂಗ್ರೆಸ್ ಆಗ್ರಹ

Share.
Exit mobile version