ತುಮಕೂರು: ಇಂದು ಮದುವೆ ಆಮಂತ್ರಣ ಪತ್ರಿಕೆ ( Marriage Invitation Card ) ವಿಶೇಷ ರೀತಿಯಲ್ಲಿ ಮಾಡೋದು ಹೊಸ ಫ್ಯಾಷನ್ ಆಗಿದೆ. ಕೆಲವರು ಸಾಹಿತ್ಯ ನುಡಿಗಳನ್ನೊಳಗೊಂಡ ಇನ್ವಟೇಷನ್ ಕಾರ್ಡ್ ಮಾಡಿಸ್ತಾರೆ. ಮತ್ತೆ ಕೆಲವರು ಪರಿಸರ ಪ್ರೇಮದೊಂದಿಗೆ ಪರಿಸರ ಜಾಗೃತಿಯ ಆಮಂತ್ರಣ ಪತ್ರಿಕೆ ಮಾಡಿಸಿರ್ತಾರೆ. ಮತ್ತೆ ಕೆಲವರು ಮಗದೊಂದು ರೀತಿಯಲ್ಲಿ ಮಾಡಿರ್ತಾರೆ. ಆದ್ರೇ.. ಇಲ್ಲೊಬ್ಬ ಅಪ್ಪಟ ಮಾಜಿ ಸಿಎಂ ಕುಮಾರಸ್ವಾಮಿ ( Ex CM HD Kumaraswamy ) ಅಭಿಮಾನಿಗಳ ಕುಟುಂಬವು, ಮದುವೆಗೆ ಬರೋರು ಉಡುಗೋರೆ ಏನ್ ಬೇಡ. 2023ರ ಚುನಾವಣೆಯಲ್ಲಿ ( 2023 Karnataka Assembly Election ) ಹೆಚ್ ಡಿ ಕುಮಾರಸ್ವಾಮಿಗೆ ಮತ ಹಾಕಿದ್ರೇ.. ಅದೇ ನೀವು ನೀಡೋ ಉಡುಗೋರೆ ಎಂಬುದಾಗಿ ಹಾಕಿಸಿ, ಗಮನ ಸೆಳೆದಿದ್ದಾರೆ.
Siddaramaiah: ಪ್ರಥಮ ಬಾರಿ ಪತ್ನಿಯೊಂದಿಗೆ ಕಾಣಿಸಿಕೊಂಡ ‘ಮಾಜಿ ಸಿಎಂ ಸಿದ್ಧರಾಮಯ್ಯ’
ತುಮಕೂರು ಜಿಲ್ಲೆಯ ಕುಣಗಲ್ ರಸ್ತೆಯಲ್ಲಿನ ಜಯನಗರದ ಕರಮ್ಮ ಮತ್ತು ದಿ.ಸಿದ್ಧಪ್ಪ ಹಾಗೂ ಶ್ರೀಮತಿ ಪುಟ್ಟಮ್ಮ ಮತ್ತು ದಿ.ನಾಗರಾಜಪ್ಪ ಅವರ ಕುಟುಂಬಸ್ಥರಿಗೆ ಜೆಡಿಎಸ್ ಪ್ರೇಮ ಹೆಚ್ಚೆ ಎನಬೇಕು. ಈ ಕಾರಣದಿಂದಾಗಿಯೇ, ಆಮಂತ್ರಣ ಪತ್ರಿಕೆಯಲ್ಲಿ ಶ್ರೀಮತಿ ಚೆನ್ನಮ್ಮ, ಹೆಚ್ ಡಿ ದೇವೇಗೌಡರು, ಅನಿತಾ, ಹೆಚ್ ಡಿ ಕುಮಾರಸ್ವಾಮಿಯವರ ಕೃಪಾಶೀರ್ವಾದಗಳೊಂದಿಗೆ ಅಂತ ಇನ್ವಟೇಷನ್ ಕಾರ್ಡ್ ನಲ್ಲಿಯೇ ಹಾಕಿಸಿದ್ದಾರೆ.
ಇದಷ್ಟೇ ಅಲ್ಲದೇ, ಪುಟ್ಟಮ್ಮ ಮತ್ತು ದಿ.ನಾಗರಾಜಪ್ಪನವರ ದ್ವಿತೀಯ ಪುತ್ರ ಎನ್ ಜಯಕುಮಾರ್, ಕದರಮ್ಮ ಮತ್ತು ದಿ.ಸಿದ್ಧಪ್ಪನವರ ಏಕೈಕ ಪುತ್ರಿ ಜ್ಯೋತಿಲಕ್ಷ್ಮೀಯವರ ಆಮಂತ್ರಣ ಪತ್ರಿಕೆಯ ಮುಖ ಪುಟದಲ್ಲಿಯೇ 2023ರ ಚುನಾವಣೆಯಲ್ಲಿ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ನೀಡುವ ಮತವೇ ನೀವು ನೀಡುವ ಉಡುಗೋರೆ ಎಂಬುದಾಗಿ ಹಾಕಿಸಿ, ಮತ್ತಷ್ಟು ಜೆಡಿಎಸ್ ಪಕ್ಷದ ಮೇಲಿನ ಅಭಿಮಾನ, ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಮೇಲಿನ ಪ್ರೀತಿಯನ್ನು ತೋರಿದ್ದಾರೆ. ಇದೀಗ ಈ ಆಮಂತ್ರಣ ಪತ್ರಿಕೆ, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿದೆ.