ನವದೆಹಲಿ :  ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಬಣಕ್ಕೆ ಚುನಾವಣಾ ಆಯೋಗವು ಸೋಮವಾರ ‘ಉರಿಯುವ ಟಾರ್ಚ್’ (Mashaal) ಅನ್ನು ಚುನಾವಣಾ ಚಿಹ್ನೆಯಾಗಿ ಹಂಚಿಕೆ ಮಾಡಿದೆ. ಆದರೆ ಠಾಕ್ರೆ ಬಣಕ್ಕೆ ನೀಡಿರುವ ಚಿಹ್ನೆಯಿಂದ ಅಸಮಾಧಾನಗೊಂಡಿದ್ದಾರೆ.

ಇದೀಗ ಈ ಕುರಿತು ಚುನಾವಣಾ ಆಯೋಗಕ್ಕೆ ಠಾಕ್ರೆ ಪತ್ರ ಬರೆದು ಅಸಮಾಧಾಹೊರ ಹಾಕಿದ್ದಾರೆ.  ಚುನಾವಣಾ ಆಯೋಗಕ್ಕೆ ಪತ್ರ ಬರೆದಿರುವ ಠಾಕ್ರೆ ಪಕ್ಷದ ಹೆಸರು, ಚಿಹ್ನೆಗಳ ಹಂಚಿಕೆಯಲ್ಲಿ ಪಕ್ಷಪಾತ ನಡೆದಿದೆ ಉದ್ಧವ್ ಠಾಕ್ರೆ ಗಂಭೀರ ಆರೋಪ ಮಾಡಿದ್ದಾರೆ.

ಮಹಾರಾಷ್ಟ್ರ ರಾಜಕೀಯದಲ್ಲಿ ಹೊಸ ವಿವಾದವೊಂದು ಹುಟ್ಟಿಕೊಳ್ಳುತ್ತಿರುವಂತೆ ಕಾಣುತ್ತಿದೆ. ಈಗ ಉದ್ಧವ್ ಠಾಕ್ರೆ ನೇತೃತ್ವದ ಬಣವು ಭಾರತದ ಚುನಾವಣಾ ಆಯೋಗವನ್ನೇ ಪ್ರಶ್ನಿಸಿದೆ. ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ನೀಡುವಲ್ಲಿ ಪಕ್ಷಪಾತವಿದೆ ಎಂದು ಠಾಕ್ರೆ ಬಣ ಆರೋಪಿಸಿದೆ. ಇತ್ತೀಚೆಗೆ, ಚುನಾವಣಾ ಆಯೋಗವು ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಠಾಕ್ರೆ ಬಣದ ಬೆಂಬಲಿತ ಬಣಕ್ಕೆ ಹೊಸ ಹೆಸರುಗಳು ಮತ್ತು ಚಿಹ್ನೆಗಳನ್ನು ಹಂಚಿಕೆ ಮಾಡಿದೆ.

ಠಾಕ್ರೆ ‘ಸೇನಾ’ ಪರವಾಗಿ ಚುನಾವಣಾ ಆಯೋಗಕ್ಕೆ 12 ಅಂಶಗಳ ಪತ್ರ ಬರೆಯಲಾಗಿದೆ ಎಂದು ವರದಿಯಾಗಿದೆ. ಈ ಪತ್ರದಲ್ಲಿ, ಪ್ರತಿಸ್ಪರ್ಧಿ ಶಿಂಧೆ ಅವರ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂಬ ಆರೋಪಗಳನ್ನು ಮಾಡಲಾಗಿದೆ. ವರದಿಗಳ ಪ್ರಕಾರ, ಠಾಕ್ರೆ ಗುಂಪು ನೀಡಿದ ಸಲಹೆಗಳಿಗೆ ಶಿಂಧೆ ಗುಂಪನ್ನು ನಕಲು ಮಾಡಲು ಅವಕಾಶ ಸಿಕ್ಕಿದೆ ಎಂದು ಹೇಳುತ್ತದೆ. ಇದಕ್ಕೆ ಅವರು ಚುನಾವಣಾ ಆಯೋಗವನ್ನು ದೂಷಿಸಿದ್ದಾರೆ. ಶಿಂಧೆ ಬಣವು ಪಟ್ಟಿಯನ್ನು ಸಲ್ಲಿಸುವ ಮೊದಲೇ ಚುನಾವಣಾ ಆಯೋಗವು ಠಾಕ್ರೆ ಗುಂಪಿನ ಆಯ್ಕೆ ಹೆಸರು ಮತ್ತು ಚಿಹ್ನೆಯನ್ನು ವೆಬ್ ಸೈಟ್ ನಲ್ಲಿ “ಸಂಭಾವ್ಯವಾಗಿ” ಅಪ್ಲೋಡ್ ಮಾಡಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ,

ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಬಣಕ್ಕೆ ಚುನಾವಣಾ ಆಯೋಗವು ಸೋಮವಾರ ‘ಉರಿಯುವ ಟಾರ್ಚ್’ (Mashaal) ಅನ್ನು ಚುನಾವಣಾ ಚಿಹ್ನೆಯಾಗಿ ಹಂಚಿಕೆ ಮಾಡಿದೆಅಕ್ಟೋಬರ್ 8 ರಂದು ಶಿವಸೇನೆಯ ‘ಬಿಲ್ಲು ಮತ್ತು ಬಾಣ’ ಚಿಹ್ನೆಯನ್ನ ಚುನಾವಣಾ ಆಯೋಗವು ಸ್ಥಗಿತಗೊಳಿಸಿತ್ತು ಮತ್ತು ಠಾಕ್ರೆ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಗುಂಪುಗಳು ನವೆಂಬರ್ 3 ರಂದು ಮುಂಬೈನಲ್ಲಿ ನಡೆಯಲಿರುವ ಅಂಧೇರಿ (ಪೂರ್ವ) ಉಪಚುನಾವಣೆಯಲ್ಲಿ ಪಕ್ಷದ ಹೆಸರನ್ನ ಬಳಸದಂತೆ ನಿರ್ಬಂಧಿಸಿತ್ತು.

ED Action: ಅಕ್ರಮವಾಗಿ ಹಣ ಸಂಗ್ರಹಿಸಿದ್ದಕ್ಕಾಗಿ ರಾಣಾ ಅಯೂಬ್ ವಿರುದ್ಧ ಪಿಎಂಎಲ್ಎ ಅಡಿಯಲ್ಲಿ ಪ್ರಕರಣ ದಾಖಲು

ವಿಡಿಯೋ ಕಾಲ್‌ ಮಾಡಿ ನಗ್ನ ದರ್ಶನ ಮಾಡಿಸಿದಕ್ಕೆ 20 ಲಕ್ಷ ಕಳ್ಕೊಂಡ ನಿವೃತ್ತ ಪ್ರಾಧ್ಯಾಪಕ

Share.
Exit mobile version