ರಾಜ್ಯದಲ್ಲಿ ಅಕ್ರಮ ಮರಳು ದಂಧೆಗೆ ಯುವಕರಿಬ್ಬರು ಬಲಿ: ಟಿಪ್ಪರ್ ಹರಿದು ಸ್ಥಳದಲ್ಲೇ ಬೈಕ್ ಸವಾರರು ಸಾವು

ಕೊಪ್ಪಳ: ರಾಜ್ಯದಲ್ಲಿ ಅಕ್ರಮ ಮರಳು ದಂಧೆಗೆ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿರುವಂತ ಘಟನೆ ಕೊಪ್ಪಳದ ಕನಕಗಿರಿಯಲ್ಲಿ ನಡೆದಿದೆ. ಕೊಪ್ಪಳದ ಕನಕಗಿರಿಯ ನವಲಿ ಬಳಿಯಲ್ಲಿ ಮರಳು ತುಂಬಿದ್ದಂತ ಟಿಪ್ಪರ್ ಲಾರಿ ಹರಿದು ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನು ರಮೇಶ್ ಜವಳಗೇರಿ (27) ಹಾಗೂ ಸಿದ್ದಪ್ಪ ಪ್ಯಾಟ್ಯಾಳ್ (34) ಎಂಬುದಾಗಿ ಗುರುತಿಸಲಾಗಿದೆ. ಯುವಕರು ಕನಕಗಿರಿ ತಾಲ್ಲೂಕಿನ ಗುಡೂರಿನ ನಿವಾಸಿಗಳು. ಅಕ್ರಮ ಮರಳು ದಂಧೆಯಲ್ಲಿ ತೊಡಗಿದ್ದಂತ ಟಿಪ್ಪರ್ ಲಾರಿಯಿಂದಲೇ ಇಬ್ಬರು ಯುವಕರು ಬಲಿಯಾಗುವಂತೆ ಆಗಿದೆ ಎಂಬುದಾಗಿ ಸಾರ್ವಜನಿಕರು ಆರೋಪಿಸಿದ್ದಾರೆ. … Continue reading ರಾಜ್ಯದಲ್ಲಿ ಅಕ್ರಮ ಮರಳು ದಂಧೆಗೆ ಯುವಕರಿಬ್ಬರು ಬಲಿ: ಟಿಪ್ಪರ್ ಹರಿದು ಸ್ಥಳದಲ್ಲೇ ಬೈಕ್ ಸವಾರರು ಸಾವು