ಮೇದಿನಿಪುರ : ಪಶ್ಚಿಮ ಬಂಗಾಳದ ಪೂರ್ವ ಮೇದಿನಿಪುರ ಜಿಲ್ಲೆಯಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕನಿಗೆ ಸೇರಿದ ಮನೆಯೊಂದರಲ್ಲಿ ಡಿಸೆಂಬರ್ 2ರ ತಡರಾತ್ರಿ ಸ್ಫೋಟ ಸಂಭವಿಸಿದ್ದು, ಇದ್ರಲ್ಲಿ ಸುಮಾರು ಇಬ್ಬರು ಮೃತಪಟ್ಟು, ಅನೇಕರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಫೋಟದ ನಂತರ, ಪೊಲೀಸರು ಮನೆಯಿಂದ 1.5 ಕಿ.ಮೀ ದೂರದಲ್ಲಿರುವ ಪ್ರತ್ಯೇಕ ಸ್ಥಳಗಳಿಂದ ತೀವ್ರ ಸುಟ್ಟ ಗಾಯಗಳೊಂದಿಗೆ ಎರಡು ಶವಗಳನ್ನ ವಶಪಡಿಸಿಕೊಂಡಿದ್ದಾರೆ.

ಮೃತರನ್ನು ಭೂಪತಿನಗರದ ಟಿಎಂಸಿಯ ಬೂತ್ ಮಟ್ಟದ ಅಧ್ಯಕ್ಷ ರಾಜ್ ಕುಮಾರ್ ಮನ್ನಾ ಮತ್ತು ಟಿಎಂಸಿ ಕಾರ್ಯಕರ್ತ ಬಿಸ್ವಜಿತ್ ಗಯೆನ್ ಎಂದು ಗುರುತಿಸಲಾಗಿದೆ.

“ಶುಕ್ರವಾರ ರಾತ್ರಿ 11 ಗಂಟೆ ಸುಮಾರಿಗೆ ಸ್ಫೋಟ ಸಂಭವಿಸಿದೆ. ಶನಿವಾರ ಬೆಳಿಗ್ಗೆ ದೂರದಲ್ಲಿ ಎರಡು ಶವಗಳು ಪತ್ತೆಯಾಗಿವೆ. ಸ್ಫೋಟದ ಕಾರಣವನ್ನ ಇನ್ನೂ ಕಂಡುಹಿಡಿಯಲಾಗಿಲ್ಲ ಮತ್ತು ಈ ವಿಷಯದ ಬಗ್ಗೆ ತನಿಖೆಯನ್ನು ಪ್ರಾರಂಭಿಸಲಾಗಿದೆ” ಎಂದು ಭೂಪತಿನಗರ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 

Meaning Of OK: ದೈನಂದಿನ ಜೀವನಲ್ಲಿ ಸಾಕಷ್ಟು ಬಾರಿ ಬಳಸುವ ‘OK’ ಪದದ ಅರ್ಥ, ಇತಿಹಾಸ ಗೊತ್ತಾ? ಇಲ್ಲಿದೆ ಇಂಟರೆಸ್ಟಿಂಗ್ ಮಾಹಿತಿ

ಸಮಸ್ತ ವೀರಶೈವ ಲಿಂಗಾಯತರಿಗೆ 2ಎ ಮೀಸಲಾತಿ – ಸಚಿವ ಮುರುಗೇಶ್ ನಿರಾಣಿ

SKIN CARE : ಆರೋಗ್ಯಕರ ಚರ್ಮಕ್ಕಾಗಿ ಹಣ್ಣಿಗಳಿಂದ ತಯಾರಿಸಿದ ಸ್ಮೂಥಿ ಪರಿಣಾಮಕಾರಿ, ಒಮ್ಮೆ ಟ್ತೈ ಮಾಡಿ | smoothie

Share.
Exit mobile version