ಕೆಎನ್‌ಎನ್‌ಸಿನಿಮಾಡೆಸ್ಕ್: ಕಿರುತೆರೆಯಲ್ಲೇ ಸಾಕಷ್ಟು ಅಭಿಮಾನಿಗಳನ್ನ ಸಂಪಾದಿಸುತ್ತಿರುವ ಈ ಹೊತ್ತಿನಲ್ಲಿ ಸಿನಿರಂಗದಲ್ಲಿ ಹಿರಿತೆರೆ,ಕಿರುತೆರೆ ಎಂಬ ವ್ಯತ್ಯಾಸ ಈಗ ಕಡಿಮೆಯಾಗಿದೆ.ಯಾಕಂದ್ರೆ ಈಗಾಗಲೇ ಸಾಕಷ್ಟು ಕಿರುತೆರೆ ಕಲಾವಿದರು ಹಿರಿತೆರೆಗೂ ಎಂಟ್ರಿ ಕೊಟ್ಟು ಸ್ಟಾರ್ ಪಟ್ಟ ಗಿಟ್ಟಿಸಿಕೊಂಡ ಉದಾಹರಣೆಗಳು ನಮ್ಮ ಕಣ್ಮುಂದಿದೆ. ಈಗ ಈ ಸಾಲಿಗೆ ನಟಿ ಅಮೂಲ್ಯ ಗೌಡ ಸೇರಲು ಹೊರಟಿದ್ದಾರೆ.

ಸುಂದರಿ ದಾರಾವಾಹಿಯ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದ ಸುಂದರಿ ಅಮೂಲ್ಯ ಗೌಡ ಈಗ ಹಿರಿತೆರೆಯ ಮೇಲೆ ಮಿಂಚಲು ರೆಡಿಯಾಗಿದ್ದಾರೆ.ಸೀರಿಯಲ್ ಗಳ ಮೂಲ ಅಭಿಮಾನಿಗಳನ್ನ ಸಂಪಾದಿಸಿಕೊಂಡಿದ್ದ ಈ ಚೆಲುವೆ ಇದೀಗ ಕುರುಡು ಕಾಂಚಾಣ ಚಿತ್ರಕ್ಕೆ ನಾಯಕಿಯಾಗಿ ಬಣ್ಣ ಹಚ್ಚಿದ್ದು, ಈ ಮೂಲಕ ಸ್ಯಾಂಡಲ್ ವುಡ್ ನಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ.

2016 ರಲ್ಲಿ ‘ಸುಂದರಿ’ ಧಾರಾವಾಹಿ ಮೂಲಕ ಮನೆ ಮನೆಗೆ ಬಂದು ಅಭಿಮಾನಿಗಳ ಹೃದಯದಲ್ಲಿ ನೆಲೆಸತೊಡಗಿದ್ದ ಅಮೂಲ್ಯ ಗೌಡರಿಗೆ ನಂತರ ಅಪರಂಜಿ, ಅಗ್ನಿಸಾಕ್ಷಿ, ನನ್ನರಸಿ ರಾಧೆ ಸೀರಿಯಲ್ ಗಳಲ್ಲಿ ಅವಕಾಶ ಸಿಕ್ಕಿ ಅಚ್ಚುಕಟ್ಟಾದ ಅಭಿನಯದ ಮೂಲಕ ಗಮನ ಸೆಳೆದರು. ಅಷ್ಟೇ ಅಲ್ಲ ಮಾಡೆಲ್ ಲೋಕದಲ್ಲೂ ಹೆಸರು ಮಾಡಿರುವ ಅಮೂಲ್ಯ, ಹಲವು ಜಾಹಿರಾತುಗಳಲ್ಲಿ ನಟನೆ ಹಾಗು 2016ರ `Princess Karnataka’ ವಿನ್ನರ್ ಕೂಡ ಆಗಿದ್ದಾರೆ. 2020ರಲ್ಲಿ ಶಮಂತ್ ಗೌಡ ಜೊತೆ ‘ಮರೆಯಲಾರೆ’ ಎಂಬ ಬ್ರೇಕಪ್ ಸಾಂಗ್ ನಲ್ಲಿ ನಟಿಸಿದ್ದರು.

ಅರಳು ಹುರಿದಂತೆ ಪಟ ಪಟ ಮಾತಾನಾಡುವ ಈ ಅಂದಗಾತಿ ಹೊಸ ಬಗೆಯ ಚಿತ್ರದ ಕಥೆಯ ನಿರೀಕ್ಷೆ ಯಲ್ಲಿದ್ದಾಗ ದೊರಕಿದ್ದು ಈ ಕುರುಡು ಕಾಂಚಾಣ ಸಿನೆಮಾ. ಹೌದು ಎಸ್ . ಪ್ರದೀಪ್ ವರ್ಮಾ ನಿರ್ದೇಶನವಿರುವ ಈ ಚಿತ್ರಕ್ಕೆ‘ಒನ್ ವೇ’ ಚಿತ್ರದ ನಟ ಕಿರಣ್ ರಾಜ್‌ಗೆ ‘ ನಾಯಕ. ಇವರಿಗೆ ನಾಯಕಿಯಾಗಿ ಕೊಂಚ ಭಿನ್ನ ಮತ್ತು ಪಾತ್ರ ಹಾಗು ನಟನೆಗೆ ಹೆಚ್ಚು ಆಧ್ಯತೆ ಇರುವ ಜೆನ್ನಿ ಎನ್ನುವ ಪಾತ್ರಕ್ಕೆ ಅಮೂಲ್ಯ ಬಣ್ಣ ಹಚ್ಚಿದ್ದಾರೆ. ಈ ಸಿನಿಮಾ ಒಟಿಟಿಯಲ್ಲಿ ಕನ್ನಡ, ತೆಲುಗು, ತಮಿಳು, ಮತ್ತು ಹಿಂದಿ ಭಾಷೆಗಳಲ್ಲಿ ಸಧ್ಯದಲ್ಲೇ ಮೂಡಿ ಬರಲಿದೆ.

ಇನ್ನು ಸಾಕಷ್ಟು ಕಥೆಗಳು ಅರಸಿ ಬರ್ತಿರುವ ಈ ಬರ್ತಿರುವ ಈ ಚೆಲುವೆಗೆ ಹೊಸ ಬಗೆಯ ಕಥೆಗಳ ನಿರೀಕ್ಷೆಯಲ್ಲಿ ದ್ದಾರೆ. ಈಗಾಗಲೇ ಕಿರುತೆರೆಯಲ್ಲಿ ಇವರ ನಟನೆ ನೋಡಿ ಫಿದಾ ಆದ ಬಳಗವಿದೆ. ಆದ್ರೆ ಇಷ್ಟು ದಿನ ತೆರೆ ಮರೆಯಲ್ಲಿ ಅಮೂಲ್ಯ ನಟನೆಯೊಂದಿಗೆ ನಿರ್ದೇಶನ ದ ಕಡೆಗೂ ಗಮನ ಹರಿಸಿದ್ದು ಮುಂದಿನ ದಿನಗಳಲ್ಲಿ ನಿರ್ದೇಶಕಿಯಾಗಿ ಕೂಡ ನಮ್ಮ ಮುಂದೆ ಬರಲಿದ್ದಾರೆ. ಅದಕ್ಕಾಗಿ ತೆರೆಮರೆಯಲ್ಲಿ ಸಕಲ ತಯಾರಿಯನ್ನೂ ಮಾಡಿಕೊಂಡಿದ್ದು ಸದ್ಯದಲ್ಲಿಯೇ ಹೊಸ ಪ್ರಾಜೆಕ್ಟ್‌ಗಳ ಬಗ್ಗೆ ಮಾಹಿತಿ ನೀಡಲಿದ್ದಾರಂತೆ.

ಸೀರಿಯಲ್ ಲೋಕದಲ್ಲಿ ಮಿಂಚಿ ಅಭಿಮಾನಿಗಳನ್ನ ಸಂಪಾದಿಸಿಕೊಂಡಿರುವ ಅಮೂಲ್ಯ ಗೌಡ ಕುರುಡು ಕಾಂಚಾಣ ಚಿತ್ರದ ಮೂಲಕ ಆರಂಭಿಸಿರೋ ಡೊಡ್ಡ ಪರದೆ ಜರ್ನಿಗೂ ಆಲ್ ದಿ ಬೆಸ್ಟ್. ಅಂಡ್ ಅವರ ಮುಂದಿನ ಪ್ರಾಜೆಕ್ಟ್ ಗಳ ಜೊತೆಗೆ ನಾಯಕಿ , ನಿರ್ದೇಶಕಿಯೂ ಆಗಿ ಚಿತ್ರರಂಗದಲ್ಲಿ ಅಮೂಲ್ಯ ಮಿಂಚುವ ತಾರೆಯಾಗಲಿ ಎಂಬುದೇ ಅಭಿಮಾನಿಗಳ ಆಸೆಯೂ ಕೂಡ
