ಸುಭಾಷಿತ :

Friday, February 28 , 2020 7:54 PM

‘ಸ್ಮಾರ್ಟ್ ಸಿಟಿ’ ಯೋಜನೆ ಕಾಮಗಾರಿ ಆರಂಭ ಹಿನ್ನಲೆ : ‘ತುಮಕೂರು KSRTC ಬಸ್ ನಿಲ್ದಾಣ’ ತಾತ್ಕಾಲಿಕವಾಗಿ ಸ್ಥಳಾಂತರ


Wednesday, January 8th, 2020 4:42 pm

ತುಮಕೂರು : ಸ್ಮಾರ್ಟ್ ಸಿಟಿ ಯೋಜನೆಯಡಿ ರಾಜ್ಯ ರಸ್ತೆ ಸಾರಿಗೆ ನಿಗಮದ ತುಮಕೂರು ಬಸ್ ನಿಲ್ದಾಣವನ್ನು ಹೈಟೆಕ್ ಬಸ್ ನಿಲ್ದಾಣವನ್ನಾಗಿ ಮಾರ್ಪಾಡು ಮಾಡಲು ಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಹಾಲಿ ಇರುವ ಬಸ್ ನಿಲ್ದಾಣವನ್ನು ಬಸವೇಶ್ವರ ರಸ್ತೆಯಲ್ಲಿರುವ ನಿಗಮದ ತುಮಕೂರು ಘಟಕ-1ರ ಸ್ಥಳಕ್ಕೆ ತಾತ್ಕಾಲಿಕವಾಗಿ ಸ್ಥಳಾಂತರಗೊಳಿಸಿದೆ. ಇಂದಿನಿಂದ ಇಲ್ಲಿಂದಲೇ ಕಾರ್ಯಾಚರಣೆ ಮಾಡಲಾಗುವುದು ಎಂದು ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ಗಜೇಂದ್ರ ತಿಳಿಸಿದ್ದಾರೆ. 

ಈ ಕುರಿತಂತೆ ಮಾಹಿತಿ ನೀಡಿದ ತುಮಕೂರು ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ಗಜೇಂದ್ರ, ಹಳೆಯ ನಿಲ್ದಾಣವನ್ನು ನೂತನ ಹೈಟೆಕ್ ಬಸ್ ನಿಲ್ದಾಣವನ್ನಾಗಿ ಮಾರ್ಪಾಡು ಮಾಡಲು ಕಾಮಗಾರಿ ಕೆಲಸಗಳನ್ನು ಪ್ರಾರಂಭಿಸುವ ಸಲುವಾಗಿ ತಾತ್ಕಾಲಿಕವಾಗಿ ಸ್ಥಳಾಂತರ ಮಾಡಲಾಗುತ್ತಿದೆ.

ಈ ತಾತ್ಕಾಲಿಕ ಬಸ್ ನಿಲ್ದಾಣವು 3 ಎಕರೆ 20 ಗುಂಟೆ ವಿಸ್ತೀರ್ಣವಿದ್ದು, ಸದರಿ ನಿಲ್ದಾಣದಿಂದ ಪ್ರತಿನಿತ್ಯ 2989 ಸುತ್ತುವಳಿಗಳು (ಆಗಮನ/ನಿರ್ಗಮನ) ಇರುತ್ತವೆ. ಸಾರ್ವಜನಿಕ ಪ್ರಯಾಣಿಕರಿಗೆ ಯಾವುದೇ ವ್ಯತ್ಯಯವಾಗದಂತೆ ಸಾರಿಗೆ ಕಾರ್ಯಾಚರಣೆಯಲ್ಲಿ ಅನುಕೂಲವಾಗುವಂತೆ ತಾತ್ಕಾಲಿಕ ಬಸ್ ನಿಲ್ದಾಣದಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಬಸ್ ನಿಲ್ದಾಣದಲ್ಲಿರುವ ಮೂಲಭೂತ ಸೌಕರ್ಯಗಳು

 • 10 ಅಂಕಣಗಳು ಇರುತ್ತದೆ.
 • ಪ್ರಯಾಣಿಕರು ಕುಳಿತುಕೊಳ್ಳಲು ಆಸನಗಳು
 • ಪ್ರತ್ಯೇಕವಾಗಿ 3 ಮಹಿಳಾ ಹಾಗೂ 3 ಪುರುಷರ ಶೌಚಾಲಯ ವ್ಯವಸ್ಥೆ
 • ಉಪಹಾರ ಗೃಹ, ವಿದ್ಯಾರ್ಥಿ/ಮಾಸಿಕ ಬಸ್ಪಾಸು ವಿತರಣಾ ಕೊಠಡಿ
 • ಚಾಲನಾ ಸಿಬ್ಬಂದಿಗಳ ವಿಶ್ರಾಂತಿ ಗೃಹ
 • ವಿಚಾರಣಾ ಕೊಠಡಿ
 • ಮುಂಗಡ ಆಸನ ಕಾಯ್ದಿರಿಸುವ ಕೇಂದ್ರ(ಅವತಾರ್ ಕೌಂಟರ್)
 • ವಾಣಿಜ್ಯ ಮಳಿಗೆಗಳು
 • 2 ಕಡೆ ಕುಡಿಯುವ ನೀರಿನ ವ್ಯವಸ್ಥೆ
 • 1 ಮಹಿಳಾ ವಿಶ್ರಾಂತಿ ಕೊಠಡಿ ಮತ್ತು ಮಕ್ಕಳ ಪೋಷಣೆಗಾಗಿ ತಾಯಂದಿರ ಕೊಠಡಿ
 • 1 ಪೊಲೀಸ್ ಉಪಠಾಣೆ
 • ಐ.ಟಿ.ಎಸ್. ಮಾನಿಟರಿಂಗ್ ನಿಯಂತ್ರಣಾ ಕೊಠಡಿ
 • ದ್ವಿಚಕ್ರ ವಾಹನ ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ಮತ್ತಿತರ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

ವೇಗದೂತ ವಾಹನ ಸಂಚಾರ ಮಾರ್ಗಾಚರಣೆಯ ವಿವರ

ಬೆಂಗಳೂರು ಕಡೆಯಿಂದ ಹಾಗೂ ಬೆಂಗಳೂರು ಕಡೆಗೆ ಸಂಚರಿಸುವ ವಾಹನಗಳು ಭದ್ರಮ್ಮ ಛತ್ರ-ಬಿ.ಜಿ.ಎಸ್.ಸರ್ಕಲ್/ಟೌನ್ಹಾಲ್ ವೃತ್ತ-ಅಶೋಕರಸ್ತೆ-ಬಸವೇಶ್ವರ ರಸ್ತೆ(ಉದ್ದೇಶಿತ ಬಸ್ನಿಲ್ದಾಣದ ರಸ್ತೆ ಮೂಲಕ ಪ್ರವೇಶಿಸಿ ಗುಬ್ಬಿ ವೀರಣ್ಣ ಕಲಾಕ್ಷೇತ್ರ ರಸ್ತೆಯ ನಿರ್ಗಮನ ದ್ವಾರದಿಂದ ಚರ್ಚ್ವೃತ್ತ-ಕೋಡಿಬಸವೇಶ್ವರ ವೃತ್ತ-ಜಿಲ್ಲಾಧಿಕಾರಿಗಳ ಕಚೇರಿ ವೃತ್ತ-ಕೋತಿತೋಪು-ಶಿವಕುಮಾರ ಸ್ವಾಮೀಜಿ ವೃತ್ತ-ತುಮಕೂರು ವಿಶ್ವವಿದ್ಯಾನಿಲಯದ ಮೂಲಕ ನಿರ್ಗಮಿಸಲಿವೆ.

ಮೈಸೂರು/ಕುಣಿಗಲ್/ಹೊಸದುರ್ಗ/ತಿಪಟೂರು/ತುರುವೇಕೆರೆ/ಶಿವಮೊಗ್ಗ ಮಾರ್ಗದಲ್ಲಿ ಸಂಚರಿಸುವ ವಾಹನಗಳು ಲಕ್ಕಪ್ಪ ವೃತ್ತ/ಕಾಲ್ಟೆಕ್ಸ್ ವೃತ್ತ-ಜೆ.ಸಿ.ರಸ್ತೆ-ಬಸವೇಶ್ವರ ರಸ್ತೆ ಮೂಲಕ ಪ್ರವೇಶಿಸಿ ಗುಬ್ಬಿ ವೀರಣ್ಣ ಕಲಾಕ್ಷೇತ್ರ ರಸ್ತೆಯ ನಿರ್ಗಮನ ದ್ವಾರದಿಂದ ಜೆ.ಸಿ.ರಸ್ತೆ-ಲಕ್ಕಪ್ಪವೃತ್ತ/ಕಾಲ್ಟೆಕ್ಸ್ ವೃತ್ತ ಮೂಲಕ ವಿವಿಧ ಕಡೆಗೆ ಸಂಚರಿಸಲಿವೆ.

ಶಿರಾ/ಮಧುಗಿರಿ/ಗೌರಿಬಿದನೂರು/ಪಾವಗಡ ಮಾರ್ಗದಲ್ಲಿ ಸಂಚರಿಸುವ ವಾಹನಗಳು ಕೋಡಿಬಸವೇಶ್ವರ ವೃತ್ತ-ಚರ್ಚ್ ವೃತ್ತ-ಅಶೋಕ ರಸ್ತೆ-ಬಸವೇಶ್ವರ ರಸ್ತೆ ಮೂಲಕ ಪ್ರವೇಶಿಸಿ ಗುಬ್ಬಿ ವೀರಣ್ಣ ಕಲಾಕ್ಷೇತ್ರ ರಸ್ತೆಯ ನಿರ್ಗಮನ ದ್ವಾರದಿಂದ ಚರ್ಚ್ವೃತ್ತ-ಕೋಡಿಬಸವೇಶ್ವರ ವೃತ್ತದ ಮೂಲಕ ವಿವಿಧ ಕಡೆಗೆ ಸಂಚರಿಸಲಿವೆ.

ಸಾಮಾನ್ಯ/ ನಗರ ಸಾರಿಗೆ ವಾಹನಗಳ ಸಂಚಾರ ಮಾರ್ಗಾಚರಣೆ ವಿವರ

ಕ್ಯಾತ್ಸಂದ್ರ/ಸಿದ್ದಗಂಗಾ ಮಠ/ಬಡ್ಡಿಹಳ್ಳಿ/ದೇವರಾಯಪಟ್ಟಣ/ದಾಬಸ್ಪೇಟೆ/ನೆಲಮಂಗಲ ಮತ್ತು ಗೂಳರಿವೆ/ಶೆಟ್ಟಿಹಳ್ಳಿ ಮಾರ್ಗದಲ್ಲಿ ಸಂಚರಿಸುವ ವಾಹನಗಳು ಭದ್ರಮ್ಮ ಛತ್ರ/ ಬಿ.ಜಿ.ಎಸ್.ಸರ್ಕಲ್/ ಟೌನ್ಹಾಲ್ ವೃತ್ತ-ಅಶೋಕರಸ್ತೆ-ಬಸವೇಶ್ವರ ರಸ್ತೆ ಮೂಲಕ ಪ್ರವೇಶಿಸಿ ಗುಬ್ಬಿ ವೀರಣ್ಣ ಕಲಾಕ್ಷೇತ್ರ ರಸ್ತೆಯ ನಿರ್ಗಮನ ದ್ವಾರದಿಂದ ಚರ್ಚ್ವೃತ್ತ-ಅಶೋಕ ರಸ್ತೆ-ಬಿ.ಜಿ.ಎಸ್.ಸರ್ಕಲ್/ ಟೌನ್ಹಾಲ್ ವೃತ್ತ-ಭದ್ರಮ್ಮ ಛತ್ರದ ಮೂಲಕ ವಿವಿಧ ಕಡೆಗೆ ಸಂಚರಿಸಲಿವೆ.

ಗುಬ್ಬಿ/ಮರಳೂರುದಿಣ್ಣೆ/ಗೂಳೂರು ಮಾರ್ಗದಲ್ಲಿ ಸಂಚರಿಸುವ ವಾಹನಗಳು ಲಕ್ಕಪ್ಪ ವೃತ್ತ/ಕಾಲ್ಟೆಕ್ಸ್ ವೃತ್ತ-ಜೆ.ಸಿ.ರಸ್ತೆ-ಬಸವೇಶ್ವರ ರಸ್ತೆ ಮೂಲಕ ಪ್ರವೇಶಿಸಿ ಗುಬ್ಬಿ ವೀರಣ್ಣ ಕಲಾಕ್ಷೇತ್ರ ರಸ್ತೆಯ ನಿರ್ಗಮನ ದ್ವಾರದಿಂದ ಜೆ.ಸಿ.ರಸ್ತೆ-ಲಕ್ಕಪ್ಪವೃತ್ತ/ಕಾಲ್ಟೆಕ್ಸ್ ವೃತ್ತ ಮೂಲಕ ವಿವಿಧ ಕಡೆಗೆ ಸಂಚರಿಸಲಿವೆ.

ಊರುಕೆರೆ/ಯಲ್ಲಾಪುರ/ಬೆಳಗುಂಬ ಮಾರ್ಗದ ವಾಹನಗಳು ಕೋಡಿಬಸವೇಶ್ವರ ವೃತ್ತ-ಚರ್ಚ್ ವೃತ್ತ-ಅಶೋಕ ರಸ್ತೆ-ಬಸವೇಶ್ವರ ರಸ್ತೆ ಮೂಲಕ ಪ್ರವೇಶಿಸಿ ಗುಬ್ಬಿ ವೀರಣ್ಣ ಕಲಾಕ್ಷೇತ್ರ ರಸ್ತೆಯ ನಿರ್ಗಮನ ದ್ವಾರದಿಂದ ಚರ್ಚ್ವೃತ್ತ-ಕೋಡಿಬಸವೇಶ್ವರ ವೃತ್ತದ ಮೂಲಕ ವಿವಿಧ ಕಡೆಗೆ ಸಂಚರಿಸಲಿವೆ.

ನಗರದ ಹೆಲ್ತ್ ಕ್ಯಾಂಟೀನ್ ರಸ್ತೆ ಮತ್ತು ಗುಬ್ಬಿ ವೀರಣ್ಣ ಕಲಾಕ್ಷೇತ್ರದ ರಸ್ತೆಗಳನ್ನು ನೋಪಾರ್ಕಿಂಗ್ ರಸ್ತೆಗಳೆಂದು ಘೋಷಿಸಿ ಜಿಲ್ಲಾಧಿಕಾರಿಗಳು ಈಗಾಗಲೇ ನವೆಂಬರ್ ೨೫ರಂದು ಅಧಿಸೂಚನೆ ಹೊರಡಿಸಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions