ಕೆಎನ್​ಎನ್​ ಡಿಜಿಟಲ್​ ಡೆಸ್ಕ್ : ಭಾರತದಲ್ಲಿ ತುಳಸಿ ಗಿಡ ಧಾರ್ಮಿಕ ಮಹತ್ವವನ್ನು ಹೊಂದಿದೆ. ಅದರ ಬ್ಯಾಕ್ಟೀರಿಯಾ ವಿರೋಧಿ ಮತ್ತು ನಂಜುನಿರೋಧಕ ಗುಣಲಕ್ಷಣಗಳಿಂದಾಗಿ ಅನೇಕ ಔಷಧಿಗಳಲ್ಲಿ ಸೇರಿಸಲಾಗಿದೆ. ಇದೇ ಕಾರಣಕ್ಕಾಗಿ ಪ್ರಾಚೀನ ಕಾಲದಿಂದಲೂ ಮನೆಯ ಅಂಗಳದಲ್ಲಿ ತಳಸಿ ಗಿಡವನ್ನು ನೆಟ್ಟ ಪೂಜಿಸಲಾಗುತ್ತಿದೆ.

BIG NEWS: ರಾಜ್ಯ ಸರ್ಕಾರದ ವಿರುದ್ಧ ಸಿಡಿದೆದ್ದ ಆರೋಗ್ಯ ಇಲಾಖೆ ಗುತ್ತಿಗೆ ನೌಕರರು: ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ

ಇದನ್ನು ಮನೆ ಅಂಗಳದಲ್ಲಿ ನೆಡುವುದರಿಂದ ನಕಾರಾತ್ಮಕತೆ ದೂರವಾಗಿ ಮನೆಯಲ್ಲಿ ನೆಮ್ಮದಿ ತುಂಬಿರುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ತುಳಿಸಿ ಗಿಡ ಕಣ್ಮರೆಯಾಗುತ್ತಿದೆ. ತುಳಸಿಯೂ ಅನೇಕ ಚರ್ಮದ ಸಮಸ್ಯೆಯನ್ನು ನಿವಾರಿಸುತ್ತದೆ. ಇದರಿಂದ ಅನೇಕ ಪರಿಣಾಮಕಾರಿ ಪ್ರಯೋಜನಗಳಿವೆ.

ತ್ವಚೆಯ ಆರೈಕೆಗಾಗಿ ತುಳಸಿಯ ಪ್ರಯೋಜನಗಳು

-ತುಳಸಿಯನ್ನು ಬಳಸುವುದರಿಂದ ಮೊಡವೆಗಳನ್ನು ಹೋಗಲಾಡಿಸಬಹುದು.ಇದರಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಮೊಡವೆಗೆ ಕಾರಣವಾಗುವ ಬ್ಯಾಕ್ಟೀರಿಯಾವನ್ನು ನಾಶಪಡಿಸುತ್ತದೆ.
-ಮುಖದಲ್ಲಿರುವ ಮಚ್ಚೆಗಳಿಂದ ನೀವು ಸಮಸ್ಯೆ ಎದುರಿಸುತ್ತಿದ್ದರೆ ಅವರ ಶಮನಕ್ಕೂ ತುಳಸಿಯನ್ನು ಬಳಸಬಹುದು. ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ಆಕ್ಸಿಡೇಟಿವ್ ಒತ್ತಡದಿಂದ ರಕ್ಷಿಸಲು ಸಹಾಯ ಮಾಡುತ್ತದೆ.
-ಚಿಕ್ಕವಯಸ್ಸಿನಲ್ಲಿಯೇ ಮುಖದಲ್ಲಿ ಸುಕ್ಕುಗಳು, ಸಡಿಲವಾದ ತ್ವಚೆ ಮುಂತಾದವುಗಳು ಉಂಟಾಗುವುದು. ಆದರೆ ತುಳಸಿಯಲ್ಲಿರುವ ಉತ್ಕರ್ಷಣ ನಿರೋಧಕಗಳು ನಿಮ್ಮನ್ನು ದೀರ್ಘಕಾಲ ಯುವಕರನ್ನಾಗಿ ಮಾಡುತ್ತದೆ.
-ತುಳಸಿಯನ್ನು ತ್ವಚೆಯ ಮೇಲೆ ಹಚ್ಚುವುದರಿಂದ ತ್ವಚೆಯ ಸಮಸ್ಯೆಗಳೂ ಹೋಗುತ್ತವೆ.

ಮುಖಕ್ಕೆ ತುಳಸಿಯನ್ನು ಬಳಸುವುದು ಹೇಗೆ?

ಒಣ ಚರ್ಮಕ್ಕಾಗಿ ತುಳಸಿಯ ಬಳಕೆ
ತುಳಸಿ ಪುಡಿಯೊಂದಿಗೆ ಮೊಸರನ್ನು ಬೆರೆಸಿ ಪೇಸ್ಟ್ ತಯಾರಿಸಬೇಕು. ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ, ಸ್ವಲ್ಪ ಸಮಯ ಒಣಗಲು ಬಿಡಿ ಮತ್ತು ನಂತರ ಉಗುರು ಬೆಚ್ಚಗಿನ ನೀರಿನಿಂದ ಸ್ವಚ್ಛಗೊಳಿಸಬೇಕು

ಎಣ್ಣೆಯುಕ್ತ ಚರ್ಮಕ್ಕೆ ಸಹಾಯಕ
ತುಳಸಿ ಪುಡಿಯೊಂದಿಗೆ ರೋಸ್ ವಾಟರ್ ಮತ್ತು ಮುಲ್ತಾನಿ ಮಿಟ್ಟಿಯನ್ನು ಬೆರೆಸಿ ಪೇಸ್ಟ್ ಮಾಡಬೇಕು. ಬಳಿಕ ಅದನ್ನು ಈ ಪೇಸ್ಟ್ ಅನ್ನು ಮುಖದ ಮೇಲೆ ಹಚ್ಚಿ ಮತ್ತು ಸ್ವಲ್ಪ ಸಮಯ ಒಣಗಿದ ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಬೇಕು. ಇದನ್ನು ವಾರಕ್ಕೆ ಒಮ್ಮೆ ಟ್ರೈ ಮಾಡಿ ನೋಡಿ.

Share.
Exit mobile version