ಕೆಎನ್‌ಎನ್‌ಡಿಜಿಟಲ್ ಡೆಸ್ಕ್ : ಕ್ರಿಶ್ಚಿಯನ್ನರ ಸರ್ವೋಚ್ಚ ದೇವಮಾನವ ಪೋಪ್ ಫ್ರಾನ್ಸಿಸ್ ತಮ್ಮ ಹೇಳಿಕೆಗಳಿಂದ ನಿರಂತರವಾಗಿ ಸುದ್ದಿಯಲ್ಲಿದ್ದಾರೆ. 85 ವರ್ಷದ ಪೋಪ್ ಫ್ರಾನ್ಸಿಸ್ ಮತ್ತೊಮ್ಮೆ ಹೇಳಿಕೆಯೊಂದನ್ನ ನೀಡಿದ್ದು, ಅದು ವೇಗವಾಗಿ ವೈರಲ್ ಆಗುತ್ತಿದೆ. ಪೋಪ್ ಫ್ರಾನ್ಸಿಸ್ ಮದುವೆಗೆ ಮೊದಲು ಲೈಂಗಿಕ ಕ್ರಿಯೆ ನಡೆಸಲು ನಿರಾಕರಿಸುವುದು ನಿಜವಾದ ಪ್ರೀತಿಯ ಸಂಕೇತವಾಗಿದೆ ಎಂದು ಹೇಳಿದ್ದಾರೆ. ಅದು ಪರಿಶುದ್ಧತೆ, ಪವಿತ್ರತೆ, ಪ್ರೀತಿಸುವುದನ್ನ ಕಲಿಸುತ್ತದೆ ಎಂದು ಹೇಳಿದರು.
ಸಂಬಂಧವನ್ನು ಸುರಕ್ಷಿತವಾಗಿಡಲು ಉತ್ತಮ ಮಾರ್ಗ..!
ಪೋಪ್ ಫ್ರಾನ್ಸಿಸ್, ಮದುವೆಗೆ ಮೊದಲು ಲೈಂಗಿಕ ಕ್ರಿಯೆಯಿಂದ ದೂರವಿರುವ ಕ್ರಮವನ್ನ ಉತ್ತಮ ನಿರ್ಧಾರ ಎಂದು ಬಣ್ಣಿಸಿದರು. ಈ ಪವಿತ್ರ ಸಂಬಂಧವನ್ನ ಸುರಕ್ಷಿತವಾಗಿಡಲು ಮದುವೆಯವರೆಗೆ ಲೈಂಗಿಕತೆಯನ್ನು ನಿರಾಕರಿಸುವುದು ಸೂಕ್ತ ಮಾರ್ಗವಾಗಿದೆ ಎಂದು ಹೇಳಿದರು. ಲೈಂಗಿಕ ಒತ್ತಡದಿಂದಾಗಿ ಇಂದಿನ ಸಂಬಂಧಗಳು ಬೇಗನೆ ಮುರಿದು ಬೀಳುತ್ತವೆ ಎಂದು ಪೋಪ್ ಫ್ರಾನ್ಸಿಸ್ ಹೇಳಿದ್ದಾರೆ.
ಹೆಚ್ಚು ಮಕ್ಕಳನ್ನ ಹೊಂದಲು ಒತ್ತಾಯ..!
ಪಾಶ್ಚಿಮಾತ್ಯ ದೇಶಗಳಲ್ಲಿ ಜನಸಂಖ್ಯಾ ಬದಲಾವಣೆಯ ಸಮಸ್ಯೆಗೆ ಪರಿಹಾರವಾಗಿ ಜನರಿಂದ ಹೆಚ್ಚಿನ ಮಕ್ಕಳನ್ನ ಪಡೆಯುವ ಬಗ್ಗೆ ಮಾತನಾಡುವಾಗ ಪೋಪ್ ಫ್ರಾನ್ಸಿಸ್ ಲೈಂಗಿಕತೆಯ ಬಗ್ಗೆ ತಮ್ಮ ಹೇಳಿಕೆಗಳನ್ನ ನೀಡಿದರು. ವ್ಯಾಟಿಕನ್ ಸಿಟಿಯಲ್ಲಿ ಪಿತೃತ್ವದ ಬಗ್ಗೆ ನೀಡಿದ ಹೇಳಿಕೆಯಲ್ಲಿ ಪೋಪ್, ಮಕ್ಕಳನ್ನ ಹೊಂದಲು ಭಯಪಡಬೇಡಿ ಎಂದು ಜನರನ್ನ ಒತ್ತಾಯಿಸಿದರು. ಮಗುವನ್ನ ಹೊಂದುವುದು ಯಾವಾಗಲೂ ಅಪಾಯವಾಗಿದೆ. ಆದ್ರೆ, ಮಗುವನ್ನ ಹೊಂದದಿರುವುದು ಅದಕ್ಕಿಂತ ಹೆಚ್ಚು ಅಪಾಯ ಎಂದು ಪೋಪ್ ಹೇಳಿದರು.
ಆದಾಗ್ಯೂ, ಪೋಪ್ ಅವರ ಹೇಳಿಕೆಗಳಿಗೆ ಜನರು ವಿಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ. ಅನೇಕ ಜನರು ಪೋಪ್ ಹೇಳಿಕೆಯನ್ನ ಇಷ್ಟ ಪಟ್ಟಿದ್ರೆ, ಇನ್ನು ಅನೇಕರು ಅದನ್ನ ಬೆಂಬಲಿಸಿದರು. ಕೆಲವು ದಿನಗಳ ಹಿಂದೆ, ಮಕ್ಕಳಿಗಿಂತ ಸಾಕುಪ್ರಾಣಿಗಳನ್ನು ಹೆಚ್ಚು ಪ್ರೀತಿಸುವವರನ್ನ ಸ್ವಾರ್ಥಿಗಳು ಎಂದು ಪೋಪ್ ಹೇಳಿದ್ದರು. ಮಕ್ಕಳಿಗಿಂತ ಸಾಕುಪ್ರಾಣಿಗಳನ್ನ ಪ್ರೀತಿಸುವುದು ನಮ್ಮ ಮಾನವೀಯತೆಯನ್ನ ಕಸಿದುಕೊಳ್ಳುತ್ತದೆ ಎಂದು ಹೇಳಿದ್ದರು.