ನವದೆಹಲಿ: ಭಾರತಕ್ಕೆ ಸ್ವಾತಂತ್ರ್ಯ ದೊರೆತ 75ನೇ ವರ್ಷಾಚರಣೆ ಸಂದರ್ಭದಲ್ಲಿ ಕೇಂದ್ರ ಸರ್ಕಾರ ‘ಹರ್ ಘರ್ ತ್ರಿವರ್ಣ’ ಅಭಿಯಾನಕ್ಕೆ ತೀವ್ರ ಸಿದ್ಧತೆ ನಡೆಸಿದೆ. ಈ ಸಂದರ್ಭದಲ್ಲಿ ಇಂದು ಸಂಸತ್ತಿನ ಸದಸ್ಯರು ಮೋಟಾರ್ ಸೈಕಲ್‌ಗಳಲ್ಲಿ ತ್ರಿವರ್ಣ ಯಾತ್ರೆಯನ್ನು ಕೈಗೊಂಡರು.

ಉಪ ರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಅವರು ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ ಮತ್ತು ಪಿಯೂಷ್ ಗೋಯಲ್ ಅವರೊಂದಿಗೆ ಕೆಂಪು ಕೋಟೆಯಿಂದ ಸಂಸದರಿಗೆ ತ್ರಿವರ್ಣ ಬೈಕ್ ರ್ಯಾಲಿಗೆ ಚಾಲನೆ ನೀಡಿದರು. ತ್ರಿವರ್ಣ ಯಾತ್ರೆಯಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಸ್ಕೂಟಿ ಓಡಿಸುತ್ತಿದ್ದ ದೃಶ್ಯ ಕಂಡುಬಂತು. ಈ ತ್ರಿವರ್ಣ ಯಾತ್ರೆಯು ವಿಜಯ್ ಚೌಕ್‌ನಲ್ಲಿ ಕೊನೆಗೊಳ್ಳಲಿದೆ.

ಮಂಗಳವಾರ ನಡೆದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸದೀಯ ಪಕ್ಷದ ಸಭೆಯ ನಂತರ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಜೋಶಿ, ಈ ಕಾರ್ಯಕ್ರಮವನ್ನು ಸಂಸ್ಕೃತಿ ಸಚಿವಾಲಯ ಆಯೋಜಿಸುತ್ತಿದೆಯೇ ಹೊರತು ಬಿಜೆಪಿಯಿಂದಲ್ಲ ಎಂದು ಹೇಳಿದ್ದಾರೆ. ಈ ಕಾರ್ಯಕ್ರಮದಲ್ಲಿ ಎಲ್ಲ ಪಕ್ಷಗಳ ಸಂಸದರು ಭಾಗವಹಿಸುವಂತೆ ಮನವಿ ಮಾಡಿದ ಅವರು, ಬೆಳಗ್ಗೆ 8.30ಕ್ಕೆ ಕೆಂಪುಕೋಟೆಗೆ ಆಗಮಿಸುವಂತೆ ತಿಳಿಸಿದರು.

ಸಂಸದೀಯ ಪಕ್ಷದ ಸಭೆಯಲ್ಲಿ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು ಆಗಸ್ಟ್ 9 ರಿಂದ ಆಗಸ್ಟ್ 15 ರ ನಡುವೆ ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಆಯೋಜಿಸುವ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಿದರು. ಅವರು “ಹರ್ ಘರ್ ತಿರಂಗ” ಅಭಿಯಾನಕ್ಕೆ ಹೆಚ್ಚಿನ ಒತ್ತು ನೀಡಿದರು.

ಮಂಗಳವಾರ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಧ್ಯಕ್ಷ ಜೆಪಿ ನಡ್ಡಾ ಮತ್ತು ಕೇಂದ್ರದ ಆಡಳಿತ ಪಕ್ಷದ ಇತರ ನಾಯಕರು ತಮ್ಮ ಸಾಮಾಜಿಕ ಮಾಧ್ಯಮ ಡಿಪಿಯಲ್ಲಿ”ತ್ರಿವರ್ಣ’ ಹಾಕಿ ಜನರಿಗೆ ಅದೇ ರೀತಿ ಮಾಡುವಂತೆ ಮನವಿಮಾಡಿದ್ದಾರೆ.

ʻಜನರಿಂದ ಚುನಾಯಿತರಾಗಲು ಚುನಾವಣಾ ಚಿಹ್ನೆಯ ಅಗತ್ಯವಿಲ್ಲʼ: ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ

BIGG NEWS : `CET RANKING’ ಗೊಂದಲದಲ್ಲಿದ್ದ ವಿದ್ಯಾರ್ಥಿಗಳಿಗೆ ಸಚಿವ ಅಶ್ವತ್ಥ್ ನಾರಾಯಣ ಮಹತ್ವದ ಮಾಹಿತಿ

BIGG NEWS:ನೀವು ವಿಷಭರಿತ ನೀರು ಕುಡಿಯುತ್ತಿದ್ದೀರಾ?… ಬಹುತೇಕ ಎಲ್ಲಾ ರಾಜ್ಯಗಳ ಅಂತರ್ಜಲದಲ್ಲಿ ‘ವಿಷಕಾರಿ ಲೋಹ ಪತ್ತೆ’ : ಸರ್ಕಾರದ ಅಂಕಿಅಂಶಗಳಿಂದ ಬಹಿರಂಗ | Toxic Metal Found in Groundwater

Share.
Exit mobile version