ಬೆಳಗಾವಿ: ಇಂದು ವಿಧಾನಸಭೆಯಲ್ಲಿ ಗ್ರಾಮೀಣ ಭಾಗಗಳಲ್ಲಿ ಸರಿಯಾಗಿ ಸಾರಿಗೆ ಬಸ್ ಇಲ್ಲದೇ, ವಿದ್ಯಾರ್ಥಿಗಳು ಸೇರಿದಂತೆ ಜನಸಾಮಾನ್ಯರು ಸಮಸ್ಯೆಗೆ ಸಿಲುಕುವಂತೆ ಆಗಿದೆ. ಕೂಡಲೇ ಸಾರಿಗೆ ಬಸ್ ಸಮಸ್ಯೆಯನ್ನು ಸರಿಪಡಿಸಬೇಕು ಎಂಬುದಾಗಿ ವಿಪಕ್ಷದ ಸದಸ್ಯರು ಸೇರಿದಂತೆ ಹಲವು ಸದಸ್ಯರು ಒತ್ತಾಯಿಸಿದರು. ಸಾರಿಗೆ ಸಚಿವರ ಉತ್ತರದ ಬಳಿಕವೂ ತೃಪ್ತಿಗೊಳ್ಳದಂತ ಸದಸ್ಯರು ವಿಧಾನಸಭೆಯಲ್ಲಿ ಪ್ರತಿಭಟನೆ ನಡೆಸಿದರು. ಹೀಗಾಗಿ ಕೆಲ ಕಾಲ ಸದನವನ್ನು ಮುಂದೂಡಿಕೆ ಬಳಿಕ, ಮತ್ತೆ ಆರಂಭಿಸಿದಂತ ಘಟನೆಯೂ ನಡೆಯಿತು.
BIG NEWS: ರಾಜ್ಯದಲ್ಲಿ ಮತ್ತೆ ಬಹುಮತದಿಂದ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರುತ್ತೆ – ಮಾಜಿ ಸಿಎಂ ಕುಮಾರಸ್ವಾಮಿ ಭವಿಷ್ಯ
ಇಂದು ವಿಧಾನಸಭೆಯಲ್ಲಿ ಸಾರಿಗೆ ಬಸ್ ಗಳ ಸಮಸ್ಯೆ ಪ್ರತಿಧ್ವನಿಸಿತು. ಅಲ್ಲದೇ ಸಮರ್ಪಕ ಬಸ್ ವ್ಯವಸ್ಥೆಗಾಗಿ ಸದನದಲ್ಲಿ ಸದಸ್ಯರು ಒತ್ತಾಯಿಸಿದ್ದಲ್ಲೇ, ಪ್ರತಿಭಟನೆಯನ್ನು ನಡೆಸಿದರು. ಶಾಸಕ ಸಿದ್ದು ಸವದಿಯವರು ಎತ್ತಿದಂತ ಬಸ್ ಸಮಸ್ಯೆಗೆ, ಇತರೆ ಸದಸ್ಯರು ಕೂಡ ಧ್ವನಿಗೂಡಿಸಿದರು. ಆಗ ಸ್ಪೀಕರ್ ಸಚಿವರು ಸ್ಪಷ್ಟನೆಗೆ ಸೂಚಿಸಿದರು.
BIGG NEWS : ನೀರು ಹಂಚಿಕೆ ಬಂದ್ ಮಾಡಲು ಯಾರಿಗೂ ಅಧಿಕಾರ ಇಲ್ಲ : `ಮಹಾ’ ಶಾಸಕರಿಗೆ ಸಚಿವ ಗೋವಿಂದ ಕಾರಜೋಳ ತಿರುಗೇಟು
ಆಗ ಎದ್ದಂತ ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರು, ಬಹಳಶಷ್ಟು ಮಂದಿ ಸದಸ್ಯರು, ಗ್ರಾಮಾಂತರ ಪ್ರದೇಶದಲ್ಲಿ ಸಾರಿಗೆ ಬಸ್ ಸಮಸ್ಯೆ ಆಗುತ್ತಿದೆ. ಹೊಸ ಬಸ್ ಗಳನ್ನು ಒದಗಿಸಬೇಕು ಎಂದು ಕೇಳುತ್ತಿದ್ದಾರೆ. ಕೋವಿಡ್ ಮೊದಲು ಎಲ್ಲಾ ಪ್ರದೇಶಗಳಲ್ಲಿ ಬಸ್ ವ್ಯವಸ್ಥೆ ಇತ್ತು. ಆ ಬಳಿಕ ಕಡಿಮೆಯಾಗಿದೆ. ಕೆಲವೊಂದು ಕಡೆಗಳಲ್ಲಿ ರಸ್ತೆ ಸರಿಯಿಲ್ಲ. ಕೆಲವೆಡೆ ಬಸ್ ಹೋಗುತ್ತಿಲ್ಲ. ಆ ಎಲ್ಲಾ ಮಾಹಿತಿಯನ್ನು ಪಡೆದು, ಬಸ್ ವ್ಯವಸ್ಥೆ ಮಾಡಲಾಗುತ್ತದೆ ಎಂಬುದಾಗಿ ಸ್ಪಷ್ಟ ಪಡಿಸಿದರು.
BREAING NEWS : ವಿಧಾನ ಪರಿಷತ್ ಸಭಾಪತಿಯಾಗಿ `ಬಸವರಾಜ ಹೊರಟ್ಟಿ’ ಅವಿರೋಧ ಆಯ್ಕೆ : ಅಧಿಕೃತ ಘೋಷಣೆಯೊಂದೇ ಬಾಕಿ
ಇದಕ್ಕೆ ತೃಪ್ತಿಯಾಗದಂತ ಶಾಸಕ ಸಿದ್ದು ಸವದಿ ಅವರು, ಪ್ರಶ್ನೋತ್ತರದ ವೇಳೆಯಲ್ಲಿ ಹೀಗೆ ಬರುವುದು ಸರಿಯಲ್ಲ ಎಂಬುದಾಗಿ ಸ್ಪೀಕರ್ ಕುಮಾರ್ ಬಂಗಾರಪ್ಪ ಹೇಳಿದರೂ, ಸದನಸದ ಸದಸ್ಯರು ನಿಲ್ಲಿಸಲಿಲ್ಲ. ಹೀಗಾಗಿ ಸ್ಪೀಕರ್ ಕೆಲಕಾಲ ವಿಧಾನಸಭೆಯ ಕಲಾಪವನ್ನು ಮುಂದೂಡಿದರು. ಈ ಬಳಿಕ ಸ್ಪಲ್ಪ ಸಮಯದ ನಂತ್ರ ಸದನ ಆರಂಭಗೊಂಡಿತು.