ಸುಭಾಷಿತ :

Wednesday, January 22 , 2020 12:11 PM

2 ರೈಲುಗಳ ನಡುವೆ ಮುಖಾಮುಖಿ ಡಿಕ್ಕಿ : 18 ಸಾವು, 50 ಕ್ಕೂ ಹೆಚ್ಚು ಜನರಿಗೆ ಗಾಯ!


Tuesday, November 12th, 2019 1:12 pm

ಢಾಕಾ : ಬಾಂಗ್ಲಾದೇಶದ ಬ್ರಹ್ಮನ್ ಬರಿಯಾ ಜಿಲ್ಲೆಯಲ್ಲಿ ಎರಡು ರೈಲುಗಳ ನಡುವೆ ಮುಖಾಮಖಿ ಡಿಕ್ಕಿಯಾಗಿ ಕನಿಷ್ಠ 18 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಸಿಲ್ ಹೆಟ್ ನಿಂದ ಚಿಟ್ಟಗಾಂಗ್ ಗೆ ತೆರಳುತ್ತಿದ್ದ ಉದಯನ್ ಎಕ್ಸ್ ಪ್ರೆಸ್ ಮತ್ತು ಢಾಕಾದತ್ತ ಚಲಿಸುತ್ತಿದ್ದ ತುರ್ನಾ ನಿಶ್ಚಿತ ಎಕ್ಸ್ ಪ್ರೆಸ್ ರೈಲುಗಳು ಮೊಂಡೊಭಾಗ್ ರೈಲ್ವೆ ನಿಲ್ದಾಣದ ಬಳಿ ಇಂದು ಮುಂಜಾನೆ ಡಿಕ್ಕಿ ಹೊಡೆದಿವೆ. ಡಿಕ್ಕಿಯ ಪರಿಣಾಮ 18 ಮಂದಿ ಮೃತಪಟ್ಟಿದ್ದು, 50 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಸಿಗ್ನಲ್ ಸಮಸ್ಯೆಯಿಂದಾಗಿ ಎರಡು ರೈಲುಗಳು ಮುಖಾಮುಖಿ ಡಿಕ್ಕಿಯಾಗಲು ಕಾರಣ ಎನ್ನಲಾಗಿದ್ದು, ದುರಂತದ ಬಗ್ಗೆ ತನಿಖೆ ನಡೆಸಲು ತನಿಖಾ ಸಂಸ್ಥೆಗಳನ್ನು ರಚಿಸಲಾಗಿದೆ ಎಂದು ಬರಿಯಾ ಡೆಪ್ಯೂಟಿ ಕಮಿಷನರ್ ಹಯಾತ್ ಉದ್ ದೊವ್ಲಾ ಖಾನ್ ತಿಳಿಸಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Bollywood
Birthday Wishes
BELIEVE IT OR NOT
Astrology
Cricket Score
Poll Questions