ಕೆಎನ್​ಎನ್​ ಡಿಜಿಟಲ್​ ಡೆಸ್ಕ್ : ರಸ್ತೆಯಲ್ಲಿ ಬಸ್ಸಿನಡಿ ಸಿಲುಕಿಕೊಳ್ಳುತ್ತಿದ್ದ ಪುಟ್ಟ ಕಂದಮ್ಮನನ್ನು ಟ್ರಾಫಿಕ್​ ಪೊಲೀಸ್​ ಅಧಿಕಾರಿಯೋರ್ವರು ರಕ್ಷಿಸಿದ್ದಾರೆ. ಈ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗ್ತಿದೆ.

ವೈರಲ್ ಆಗಿರುವ ವೀಡಿಯೊದಲ್ಲಿ, ಜನನಿಬಿಡ ರಸ್ತೆಯಲ್ಲಿ ಕಾರೊಂದು ಎಲೆಕ್ಟ್ರಿಕ್ ರಿಕ್ಷಾದತ್ತ ಬರುತ್ತಿರುವುದನ್ನು ಕಾಣಬಹುದು. ಆಗ ರಿಕ್ಷಾ ತಿರುವು ಪಡೆಯುತ್ತದೆ. ಈ ವೇಳೆ ರಿಕ್ಷಾದೊಳಗೆ ತನ್ನ ತಾಯಿಯೊಂದಿಗೆ ಕುಳಿತಿದ್ದ ಮಗು ರಸ್ತೆಯ ಮೇಲೆ ಬೀಳುತ್ತದೆ. ಅದೇ ವೇಳೆ ರಸ್ತೆಯಲ್ಲಿ ಬಸ್​​​ ಬರುವುದನ್ನು ಗಮನಿಸಿದ ಪೊಲೀಸ್​ ಅಧಿಕಾರಿ ತಕ್ಷಣ ಮಗುವಿನ ಬಳಿ ತೆರಳಿ ರಕ್ಷಿಸಿದ್ದಾರೆ.

ವಿಡಿಯೋವನ್ನು ಐಎಎಸ್ ಅಧಿಕಾರಿ ಅವನೀಶ್ ಶರಣ್ ಟ್ವಿಟ್ಟರ್​ನಲ್ಲಿ ಹೊಂಚಿಕೊಂಡಿದ್ದು, ಇದು 1.7 ಮಿಲಿಯನ್ ವೀಕ್ಷಣೆ ಪಡೆದಿದೆ. ಯಾವ ಪ್ರದೇಶದಲ್ಲಿ ಘಟನೆ ನಡೆದಿದೆ ಎಂಬುದರ ಕುರಿತಂತೆ ಮಾಹಿತಿ ಲಭ್ಯವಿಲ್ಲ. ಆದರೆ  ಪೊಲೀಸ್​ ಅಧಿಕಾರಿ ಕಾರ್ಯವನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ.

Share.
Exit mobile version