ಕೆಎನ್‌ಎನ್‌ಡಿಜಿಟಲ್‌ ಡೆಸ್ಕ್‌ : ದ್ವಿಚಕ್ರ ವಾಹನವನ್ನ ಚಲಾಯಿಸುವಾಗ ಹೆಲ್ಮೆಟ್ ಧರಿಸುವುದು ಅತ್ಯಂತ ಮುಖ್ಯ. ಇದು ನಿಮ್ಮನ್ನ ರಕ್ಷಿಸುವುದಲ್ಲದೇ, ಹೆಚ್ಚಿನ ಸಂದರ್ಭಗಳಲ್ಲಿ ಟ್ರಾಫಿಕ್ ಚಲನ್ʼಗಳನ್ನ ಸಹ ತಪ್ಪಿಸುತ್ತದೆ. ಸಾಮಾನ್ಯವಾಗಿ ಹೆಲ್ಮೆಟ್ ಧರಿಸಿದ ವ್ಯಕ್ತಿಯನ್ನ ಸಂಚಾರ ಪೊಲೀಸರು ತಡೆಯುತ್ತಾರೆ. ಹಾಗಂತ, ಕೇವಲ ಹೆಲ್ಮೆಟ್ ಧರಿಸಿದ್ರೆ ಸಾಲದು. ಹೆಲ್ಮೆಟ್ʼಗಳಿಗೆ ಸಂಬಂಧಿಸಿದ ಕೆಲವು ನಿಯಮಗಳು ಸಹ ಅನ್ವಯವಾಗುತ್ವೆ. ಇದನ್ನ ಅನುಸರಿಸದಿದ್ರೆ ನಿಮಗೆ ದಂಡ ವಿಧಿಸಬಹುದು. ಅಂದ್ರೆ, ನಿಮ್ಮ ಹೆಲ್ಮೆಟ್ ಹೇಗಿರಬೇಕು? ಎಂಬುದಕ್ಕೆ ಸರ್ಕಾರವು ಕೆಲವು ನಿಯಮಗಳನ್ನು ನಿಗದಿಪಡಿಸಿದೆ. ನೀವು ಈ ರೀತಿಯ ಹೆಲ್ಮೆಟ್ ಧರಿಸಿದ್ರೆ ದಂಡ ತೆರವುದ್ರಿಂದ ಪರಾಗಬೋದು.

ಹೆಲ್ಮೆಟ್ ಧರಿಸುವುದು ಹೇಗೆ?

1. ನಿಯಮಗಳ ಪ್ರಕಾರ, ಅಪಘಾತದ ಸಂದರ್ಭದಲ್ಲಿ ಗಾಯದಿಂದ ಗರಿಷ್ಠ ರಕ್ಷಣೆಯನ್ನ ಒದಗಿಸುವಂತಹ ಹೆಲ್ಮೆಟ್ ಧರಿಸಬೇಕು.

2. ಹೆಲ್ಮೆಟ್ ಚಾಲಕನ ತಲೆಗೆ ಸರಿಯಾಗಿ ಹೊಂದಿಕೊಳ್ಳುವಂತಿರಬೇಕು. ಅದರ ಪಟ್ಟಿಯನ್ನ ಸಹ ಕಟ್ಟಬೇಕು. ಅಂದ್ರೆ, ಹೆಲ್ಮೆಟ್ʼನ್ನ ಕೇವಲ ತಲೆಯ ಮೇಲೆ ಇಟ್ಟುಕೊಂಡರೆ ಸಾಲದು.

ನಿಯಮಗಳ ಪ್ರಕಾರ, ಇದು ನಿಮ್ಮ ಹೆಲ್ಮೆಟ್ ಆಗಿರಬೇಕು?
1. ಹೆಲ್ಮೆಟ್ʼನ ತೂಕವು 1.2 ಕೆ.ಜಿ.ವರೆಗೆ ಇರಬೇಕು.

2. ಹೆಲ್ಮೆಟ್‌ನಲ್ಲಿ ಉತ್ತಮ ಗುಣಮಟ್ಟದ ಫೋಮ್ ಬಳಸಬೇಕು ಮತ್ತು ಅದರ ಕನಿಷ್ಠ ದಪ್ಪವು 20-25 ಮಿಮೀ ಇರಬೇಕು.

3. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (MORTH) ಪ್ರಕಾರ, ಎಲ್ಲಾ ಹೆಲ್ಮೆಟ್‌ಗಳ ಮೇಲೆ ಐಎಸ್ಐ ಗುರುತು ಹೊಂದಿರುವುದು ಕಡ್ಡಾಯವಾಗಿದೆ. ಐಎಸ್ಐ ಮಾರ್ಕ್ ಇಲ್ಲದೆ ಹೆಲ್ಮೆಟ್ ಧರಿಸುವುದು ಮತ್ತು ಮಾರಾಟ ಮಾಡುವುದು ಕಾನೂನು ಅಪರಾಧವಾಗಿದೆ.

4. ಹೆಲ್ಮೆಟ್ʼನಲ್ಲಿರುವ ಕಣ್ಣುಗಳಿಗೆ ಪಾರದರ್ಶಕ ಹೊದಿಕೆಯನ್ನ ಬಳಸಬೇಕು.

5. ಹೆಲ್ಮೆಟ್‌ಳಿಗಾಗಿ ಬಿಐಎಸ್ ಪ್ರಮಾಣಪತ್ರವನ್ನ ಹೊಂದಿರುವುದು ಸಹ ಬಹಳ ಮುಖ್ಯ.

6. ನೀವು ಅಕ್ರಮ ಹೆಲ್ಮೆಟ್ ಬಳಸಿ ಸಿಕ್ಕಿಬಿದ್ದರೆ ಮತ್ತು ಯಾವುದೇ ಸೂಚನೆಗಳನ್ನ ಪಾಲಿಸಲು ವಿಫಲವಾದರೆ, ನಿಮ್ಮ ಹೆಲ್ಮೆಟ್ ಮುಟ್ಟುಗೋಲು ಹಾಕಿಕೊಳ್ಳಬಹುದು.

Share.
Exit mobile version