ನವದೆಹಲಿ: ವ್ಯಾಪಾರಿಗಳು ಸೇವೆ ನೀಡಲು ಗ್ರಾಹಕರ ವೈಯಕ್ತಿಕ ಮೊಬೈಲ್ ನಂಬರ್ ನೀಡುವಂತೆ ಒತ್ತಾಯಿಸುವಂತಿಲ್ಲ ಎಂಬುದಾಗಿ ಗ್ರಾಹಕರ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ಖಡಕ್ ಸೂಚನೆ ನೀಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವಂತ ಅವರು, ವೈಯಕ್ತಿಕ ವಿವರ ಸಲ್ಲಿಸದ ಹೊರತು ಬಿಲ್ ನೀಡಲು ಸಾಧ್ಯವಿಲ್ಲ ಎಂದು ಮಾರಾಟಗಾರರು ಹೇಳುತ್ತಾರೆ. ಇದು ಗ್ರಾಹಕರ ರಕ್ಷಣಾ ಕಾಯ್ದೆಯಡಿ ಅನ್ಯಾಯ ಮತ್ತು ನಿರ್ಬಂಧಿತ ವ್ಯಾಪಾರದ ಅಭ್ಯಾಸವಾಗಿದೆ. ಮಾಹಿತಿ ಕಲೆಹಾಕುವ ವಿಚಾರದ ಹಿಂದೆ ಯಾವುದೇ ರೀತಿಯ ತರ್ಕವಿಲ್ಲ ಎಂದು ತಿಳಿಸಿದ್ದಾರೆ.
ಗ್ರಾಹಕರು ಮೊಬೈಲ್ ಸಂಖ್ಯೆ ನೀಡಲು ನಿರಾಕರಸಿದರೇ ಚಿಲ್ಲರೆ ವ್ಯಾಪಾರಿಗಳು ಸೇವೆ ಒದಗಿಸುವುದಿಲ್ಲ ಎಂದು ಹಲವು ಗ್ರಾಹಕರು ದೂರು ನೀಡಿದ್ದರು. ಗ್ರಾಹಕರ ದೂರಿನ ಹಿನ್ನಲೆಯಲ್ಲಿ ಚಿಲ್ಲರೆ ಉದ್ಯಮ ಮತ್ತು ಉದ್ಯಮ ಚೇಂಬರ್ ಗಳಾದ ಸಿಸಿಐ, ಎಫ್ ಸಿಸಿಐಗೆ ಸಲಹೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಬ್ಯಾಂಕ್ ಗ್ರಾಹಕರೇ ಗಮನಿಸಿ : ಇಲ್ಲಿದೆ ಜೂನ್ ತಿಂಗಳ ಬ್ಯಾಂಕ್ ರಜೆ ದಿನಗಳ ಪಟ್ಟಿ
ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ರಜಾದಿನಗಳ ಪಟ್ಟಿಯ ಪ್ರಕಾರ ದೇಶದ ಹಲವಾರು ನಗರಗಳಲ್ಲಿ ಜೂನ್ ತಿಂಗಳಲ್ಲಿ ಕೆಲವು ದಿನಗಳಲ್ಲಿ ಬ್ಯಾಂಕ್ ಶಾಖೆಗಳು ಮುಚ್ಚಲ್ಪಡುತ್ತವೆ. ಭೌತಿಕ ಕಾರ್ಯಾಚರಣೆಗಳಿಗಾಗಿ ಶಾಖೆಗಳನ್ನು ಮುಚ್ಚಲಾಗಿದ್ದರೂ, ಆನ್ಲೈನ್ ಬ್ಯಾಂಕಿಂಗ್ ಚಟುವಟಿಕೆಗಳು ಕಾರ್ಯನಿರ್ವಹಿಸುತ್ತಲೇ ಇರುತ್ತವೆ.
ಆದ್ದರಿಂದ, ಮುಂದಿನ ತಿಂಗಳು ಯಾವುದೇ ಬ್ಯಾಂಕ್ ಸಂಬಂಧಿತ ಪ್ರಮುಖ ಕೆಲಸಕ್ಕಾಗಿ ನೀವು ನಿಮ್ಮ ಬ್ಯಾಂಕ್ ಶಾಖೆಗೆ ಭೇಟಿ ನೀಡಲು ಬಯಸಿದರೆ, ಜೂನ್ 2023 ತಿಂಗಳಲ್ಲಿ ವಿವಿಧ ನಗರಗಳಲ್ಲಿ ಶಾಖೆಗಳನ್ನು ಮುಚ್ಚುವ ದಿನಗಳ ಬಗ್ಗೆ ಗಮನಿಸಬೇಕು.
ಕೆಲವು ಬ್ಯಾಂಕ್ ರಜಾದಿನಗಳನ್ನು ರಾಷ್ಟ್ರವ್ಯಾಪಿ ಆಚರಿಸಿದರೆ, ಇನ್ನು ಕೆಲವು ಸ್ಥಳೀಯ ರಜಾದಿನಗಳಾಗಿರುತ್ತವೆ. ಈ ಹಬ್ಬಗಳಿಂದಾಗಿ ವಿವಿಧ ರಾಜ್ಯಗಳಲ್ಲಿ ಹಲವಾರು ಬ್ಯಾಂಕ್ ಶಾಖೆಗಳು ಮುಚ್ಚಲ್ಪಡುತ್ತವೆ. ಜೂನ್ ತಿಂಗಳಲ್ಲಿ ನಿಮ್ಮ ಬ್ಯಾಂಕ್ ಶಾಖೆಗೆ ಭೇಟಿ ನೀಡುವ ಮೊದಲು, ಬ್ಯಾಂಕುಗಳು ಮುಚ್ಚಲ್ಪಡುವ ಪ್ರಮುಖ ದಿನಗಳ ಪಟ್ಟಿಯನ್ನು ಗಮನಿಸಿ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ರಜಾ ಕ್ಯಾಲೆಂಡರ್ ಪಟ್ಟಿಯ ಪ್ರಕಾರ ಜೂನ್ ತಿಂಗಳಲ್ಲಿ ಒಟ್ಟು 12 ದಿನಗಳ ಕಾಲ ಬ್ಯಾಂಕುಗಳು ಮುಚ್ಚಲ್ಪಡುತ್ತವೆ ಮತ್ತು ಉಳಿದ ದಿನಗಳು ವಾರಾಂತ್ಯ ಮತ್ತು ರಾಜ್ಯ ಘೋಷಿತ ರಜಾದಿನಗಳಾಗಿವೆ. ಆದಾಗ್ಯೂ, ಎಲ್ಲಾ ರಾಜ್ಯಗಳು ಅಥವಾ ಪ್ರದೇಶಗಳಲ್ಲಿ ಬ್ಯಾಂಕುಗಳು 12 ದಿನಗಳವರೆಗೆ ಮುಚ್ಚಲ್ಪಡುವುದಿಲ್ಲ ಎಂಬುದನ್ನು ನೀವು ಗಮನಿಸಬೇಕು.
2023 ಜೂನ್ ತಿಂಗಳ ಬ್ಯಾಂಕ್ ರಜಾ ದಿನಗಳ ಪಟ್ಟಿ
ಜೂನ್ 04 -ಭಾರತದಾದ್ಯಂತ ಭಾನುವಾರ ವಾರಾಂತ್ಯದ ರಜೆ
ಜೂನ್ 10- ಭಾರತದಾದ್ಯಂತ ತಿಂಗಳ ಎರಡನೇ ಶನಿವಾರ
ಜೂನ್ 11- ಭಾರತದಾದ್ಯಂತ ಭಾನುವಾರ ವಾರಾಂತ್ಯದ ರಜೆ
ಜೂನ್ 15- ಗುರುವಾರ- ಸಂಕ್ರಾಂತಿ ಮಿಜೋರಾಂ ಮತ್ತು ಒಡಿಶಾ
ಜೂನ್ 18- ಭಾರತದಾದ್ಯಂತ ಭಾನುವಾರ ವಾರಾಂತ್ಯದ ರಜೆ
ಜೂನ್ 20- ಮಂಗಳವಾರ ಕಾಂಗ್ (ರಥಜಾತ್ರ)/ರಥಯಾತ್ರೆ ಒಡಿಶಾ ಮತ್ತು ಮಣಿಪುರ
ಜೂನ್ 24- ಭಾರತದಾದ್ಯಂತ ತಿಂಗಳ ನಾಲ್ಕನೇ ಶನಿವಾರ
ಜೂನ್ 25- ಭಾರತದಾದ್ಯಂತ ಭಾನುವಾರ ವಾರಾಂತ್ಯದ ರಜೆ
ಜೂನ್ 26- ಸೋಮವಾರ ಖಾರ್ಚಿ ಪೂಜಾ ತ್ರಿಪುರಾ
ಜೂನ್ 28- ಬುಧವಾರ ಈದ್-ಉಲ್-ಅಧಾ ಮಹಾರಾಷ್ಟ್ರ, ಜಮ್ಮು ಮತ್ತು ಕಾಶ್ಮೀರ ಮತ್ತು ಕೇರಳ
ಜೂನ್ 29- ಗುರುವಾರ ಈದ್-ಉಲ್-ಅಧಾ ದೇಶಾದ್ಯಂತ ಅನೇಕ ರಾಜ್ಯಗಳು
ಜೂನ್ 30- ಶುಕ್ರವಾರ ರೆಮ್ನಾ ನಿ / ಈದ್-ಉಲ್-ಅಧಾ