ಮಂಡ್ಯ: ಕೆಆರ್‌ ಎಸ್‌ ಡ್ಯಾಂ ಬಳಿ ಚಿರತೆ ಪ್ರತ್ಯಕ್ಷವಾಗುತಿರುವ ಹಿನ್ನೆಲೆ ವಿಶ್ವ ಪ್ರಸಿದ್ಧ ಬೃಂದಾವನಕ್ಕೆ ಪ್ರವಾಸಿಗರ ನಿರ್ಬಂಧ ಹೇರಲಾಗಿದೆ.

BIGG NEWS: ಹಾಸನಾಂಬೆ ದರ್ಶನಕ್ಕೆ ಹರಿದು ಬರುತ್ತಿದೆ ಜನ ಸಾಗರ; ಗಂಟೆಗಟ್ಟಲೆ ಕಾದು ಕಾದು ಸುಸ್ತಾಗಿ ಧಿಕ್ಕಾರ ಕೂಗಿ ಅಸಮಾಧಾನ

 

ನಿನ್ನೆ ಮಧ್ಯಾಹ್ನ 12 ಗಂಟೆ ಸುಮಾರಿಗೆ ಇಲ್ಲಿನ ಸಿಬ್ಬಂದಿ ಡ್ಯಾಂನ ಮೆಟ್ಟಿಲು ಬಳಿ ಗಿಡದ ಗಂಟೆಗಳನ್ನು ಕೀಳುವ ಸಂದರ್ಭದಲ್ಲಿ ಚಿರತೆಯೊಂದು ಕಾಣಿಸಿಕೊಂಡಿದೆ. ಇದರಿಂದ ಗಾಬರಿಗೊಂಡ ಸಿಬ್ಬಂದಿ ಅಲ್ಲಿಂದ ಬಂದು ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ನಿನ್ನೆ ಒಂದು ದಿನ ತಾತ್ಕಾಲಿಕವಾಗಿ ಚಿರತೆಯ ಭಯದಿಂದ ಪ್ರವಾಸಿಗರಿಗೆ ಬೃಂದಾವನಕ್ಕೆ ನಿರ್ಬಂಧ ಹೇರಿದ್ರು.

BIGG NEWS: ಹಾಸನಾಂಬೆ ದರ್ಶನಕ್ಕೆ ಹರಿದು ಬರುತ್ತಿದೆ ಜನ ಸಾಗರ; ಗಂಟೆಗಟ್ಟಲೆ ಕಾದು ಕಾದು ಸುಸ್ತಾಗಿ ಧಿಕ್ಕಾರ ಕೂಗಿ ಅಸಮಾಧಾನ

 

ಆದ್ರೆ ಕಳೆದ ರಾತ್ರಿಯೂ ಅದೇ ಚಿರತೆ ಡ್ಯಾಂನ ಪಕ್ಕದಲ್ಲಿ ಓಡಾಡುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹೀಗಾಗಿ ಇಂದು ಸಹ ಪ್ರವಾಸಿಗರಿಗೆ ನಿಷೇಧಿಸಲಾಗಿದೆ. ಭಾನುವಾರ ಪ್ರವಾಸಿಗರಿಂದ ತುಂಬಿ-ತುಳಕಬೇಕಿದ್ದ ಬೃಂದಾವನ, ಪ್ರವಾಸಿಗರೇ ಇಲ್ಲದೇ ಬಣಗುಡುತ್ತಿದೆ.

Share.
Exit mobile version