ಮೈಸೂರು: ಚೀನಾ ಸೇರಿದಂತೆ ಹಲವು ವಿದೇಶಗಳಲ್ಲಿ ಕೊರೊನಾ ಸೋಂಕು ಹೆಚ್ಚಳವಾಗಿದೆ. ಹೀಗಾಗಿ ಕರ್ನಾಟಕದಲ್ಲೂ ಆತಂಕ ಶುರುವಾಗಿದ್ದು, ಮುಂಜಾಗ್ರತ ಕ್ರಮ ಕೈಗೊಳ್ಳಲಾಗಿದೆ.

BIGG NEWS: ಬೀದರ್‌ ನಲ್ಲಿ ಘೋರ ದುರಂತ; ಮಾನಸಿಕ ಕಿರುಕುಳಕ್ಕೆ ಬೇಸತ್ತು ವಿವಾಹಿತ ಮಹಿಳೆ ಆತ್ಮಹತ್ಯೆ

 

ಈಗಾಗಲೇ ನಗರದಲ್ಲಿ ಮಾಸ್ಕ್‌ ಕಡ್ಡಾಯಗೊಳಿಸಿದ್ದು, ಕೋವಿಡ್‌ ಮಾರ್ಗಸೂಚಿ ಬಿಡುಗಡೆಗೊಳಿಸಿದ್ದಾರೆ. ಇದೀಗ ಕೊರೊನಾ ಆತಂಕದ ನಡುವೆಯೂ ಪ್ರವಾಸಿ ತಾಣಗಳಲ್ಲಿ ಜನರು ತುಂಬಿ ತುಳುಕುತ್ತಿದ್ದಾರೆ. ಸಾಲು ಸಾಲು ರಜೆಗಳಿಂದ್ದರಿಂದ ಮೈಸೂರಿಗೆ ಪ್ರವಾಸಕ್ಕೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಮೈಸೂರು ಮೃಗಾಲಯದಲ್ಲಿ ಜನ ಜಂಗುಳಿ ಇದ್ದು, ಮಾಸ್ಕ್‌ ಹಾಕದೆ ಜನರು ನಿರ್ಲಕ್ಷ್ಯ ತೋರಿದ್ದಾರೆ.

BIGG NEWS: ಬೀದರ್‌ ನಲ್ಲಿ ಘೋರ ದುರಂತ; ಮಾನಸಿಕ ಕಿರುಕುಳಕ್ಕೆ ಬೇಸತ್ತು ವಿವಾಹಿತ ಮಹಿಳೆ ಆತ್ಮಹತ್ಯೆ

ಆದರೆ ಸಿಬ್ಬಂದಿಗಳು ಪ್ರವಾಸಿಗರಿಗೆ ಮಾಸ್ಕ್‌ ಧರಿಸುವಂತೆ ಸೂಚಿಸಿದ್ರೂ ಡೋಂಟ್‌ ಕೇರ್‌ ಅನ್ನುತ್ತಿದ್ದಾರೆ. ಮೈಸೂರು ಮೃಗಾಲಯದಲ್ಲಿ ಟಿಕೆಟ್‌ ಸೆಂಟರ್‌ ನಲ್ಲಿ ದೈಹಿಕ ಅಂತರವಿಲ್ಲದೆ ಪ್ರವಾಸಿಗರು ನುಗ್ಗುತ್ತಿದ್ದಾರೆ.ಇತ್ತ, ಬೆಂಗಳೂರಿನಲ್ಲಿ ಕೊರೊನಾ ಆತಂಕದ ನಡುವೆ ಅಂತಾರಾಜ್ಯ ವಿದೇಶಿ ಪ್ರವಾಸ ಕೈಗೊಂಡಿದ್ದಾರೆ. ಬೆಂಗಳೂರು ಏರ್‌ ಪೋರ್ಟ್‌ ನಲ್ಲಿ ಇಂದು 80 ಸಾವಿರಕ್ಕೂ ಹೆಚ್ಚು ಜನರು ವಿದೇಶ ಪ್ರಯಾಣ ಬೆಳಸಲಿದ್ದಾರೆ. ಹೊರ ರಾಜ್ಯ ವಿದೇಶದಿಂದ ಬರಲು 40, 158. ಜನ ಟಿಕೆಟ್‌ ಬುಕಿಂಗ್‌ ಆಗಿದೆ.

Share.
Exit mobile version