ನವದೆಹಲಿ : ಜೈಲಿನಲ್ಲಿರುವ ಸುಕೇಶ್ ಚಂದ್ರಶೇಖರ್‌ಗೆ ಸಹಾಯ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ದೆಹಲಿಯ ತಿಹಾರ್ ಜೈಲಿನ ಡೈರೆಕ್ಟರೇಟ್ ಜನರಲ್ ಸಂದೀಪ್ ಗೋಯಲ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಜೈಲಿನಲ್ಲಿ ಐಷಾರಾಮಿ ಜೀವನ ನಡೆಸಲು ಸುಕೇಶ್ ಇತ್ತೀಚೆಗೆ ಸಂದೀಪ್ ಗೋಯಲ್ ಅವರಿಗೆ 12.50 ಕೋಟಿ ರೂ. ನೀಡಿದ್ದನ್ನು ಎನ್ನಲಾಗುತ್ತಿದೆ.

BIGG NEWS: ತುಮಕೂರು ಘಟನೆ ಬೆನ್ನಲ್ಲೇ ಎಚ್ಚೆತ್ತ ಆರೋಗ್ಯ ಇಲಾಖೆ: ಸರ್ಕಾರಿ ಆಸ್ಪತ್ರೆಗಳಿಗೆ ಹೊಸ ಮಾರ್ಗಸೂಚಿ ಪ್ರಕಟ

ಡಿಜಿ ಸಂದೀಪ್ ಗೋಯಲ್ ಅವರ ಬದಲಿಗೆ ವಿಶೇಷ ಪೊಲೀಸ್ ಆಯುಕ್ತ ಸಂಜಯ್ ಬೇನಿವಾಲ್ ಅವರನ್ನು ತಿಹಾರ್‌ ಜೈಲಿನ ಹೊಸ ಡಿಜಿಯನ್ನಾಗಿ ನೇಮಿಸಲಾಗಿದೆ. ದೆಹಲಿಯ ಲೆಫ್ಟಿನೆಂಟ್-ಗವರ್ನರ್ ವಿಕೆ ಸಕ್ಸೇನಾ ಅವರು ಈ ಆದೇಶಗಳನ್ನು ಹೊರಡಿಸಿದ್ದಾರೆ.

ಗೋಯಲ್ ಅವರ ಕಣ್ಗಾವಲಿನಲ್ಲಿ ಸುಕೇಶ್ ಚಂದ್ರಶೇಖರ್ ತಿಹಾರ್ ಜೈಲಿನಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದರು ಎಂದು ಆರೋಪಿಸಲಾಗಿದೆ. ಸುಕೇಶ್ ಚಂದ್ರಶೇಖರ್‌ಗೆ ಸಹಾಯ ಮಾಡಿದ ಆರೋಪದ ಮೇಲೆ ಮತ್ತು ಅವರಿಂದ ಲಂಚ ಪಡೆದ ಆರೋಪದ ಮೇಲೆ 81 ಕ್ಕೂ ಹೆಚ್ಚು ಜೈಲು ಅಧಿಕಾರಿಗಳನ್ನು ದೆಹಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅವರು ಜೈಲಿನೊಳಗೆ ಇದ್ದಾಗ, ಅವರಿಗೆ ಮೊಬೈಲ್ ಫೋನ್‌ಗಳು, ಟಿವಿ ಮತ್ತು ಫ್ರಿಡ್ಜ್‌ನ ವ್ಯವಸ್ಥೆ ಮಾಡಲಾಗಿತ್ತು ಎನ್ನಲಾಗುತ್ತಿದೆ.

ಯಾವುದೇ ಅನುಮತಿ ಅಥವಾ ಪ್ರವೇಶದ ದಾಖಲೆ ಇಲ್ಲದೆ ಜೈಲಿನೊಳಗೆ ಸುಕೇಶ್ ಅವರನ್ನು ಭೇಟಿಯಾಗಲು ಮಹಿಳಾ ಸೆಲೆಬ್ರಿಟಿಗಳಿಗೂ ಜೈಲಿನೊಳಗೆ ಅವಕಾಶ ನೀಡಲಾಗಿದೆ ಎಂದು ಆರೋಪಿಸಲಾಗಿದೆ.

ಈ ವಾರದ ಆರಂಭದಲ್ಲಿ, ಸುಕೇಶ್ ಚಂದ್ರಶೇಖರ್ ಅವರು ದೆಹಲಿಯ ಎಲ್-ಜಿ ವಿಕೆ ಸಕ್ಸೇನಾ ಅವರಿಗೆ ಪತ್ರ ಬರೆದು ಬಂಧಿತ ಆಮ್ ಆದ್ಮಿ ಪಕ್ಷದ (ಎಎಪಿ) ಸಚಿವ ಸತ್ಯೇಂದ್ರ ಜೈನ್ ಅವರಿಗೆ ರಕ್ಷಣೆಗಾಗಿ 10 ಕೋಟಿ ಹಣ ನೀಡಲಾಗಿದೆ ಎಂದು ಆರೋಪಿಸಿದ್ದಾನೆ.

ಎಎಪಿ ನಾಯಕನನ್ನು 2015 ರಿಂದ ತಿಳಿದಿದ್ದೇನೆ ಮತ್ತು ದಕ್ಷಿಣ ಭಾರತದಲ್ಲಿ ಪಕ್ಷದ ಪ್ರಮುಖ ಸ್ಥಾನದ ಭರವಸೆ ನೀಡಿದ ನಂತರ ಆಪ್‌ಗೆ ಒಟ್ಟು 50 ಕೋಟಿ ರೂ. ಪಾವತಿಸಲಾಗಿದೆ ಎಂದು ಪತ್ರದಲ್ಲಿ ಸುಕೇಶ್ ಬರೆದಿದ್ದಾರೆ.

BIGG NEWS: ವಿನಯ್‌ ಗುರೂಜಿ ಅವರ ಆಶ್ರಮಕ್ಕೆ ಚಂದ್ರು ಬಂದಿದ್ದರು;ಈ ಹೊತ್ತಿನಲ್ಲಿ ಯಾಕೋ ಬಂದಿದ್ದೀಯಾ ಎಂದು ಪ್ರಶ್ನೆಸಿದ್ರು: ಆಶ್ರಮದ ಸಿಬ್ಬಂದಿ

Share.
Exit mobile version