ಬೆಂಗಳೂರು: ಇಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ತಜ್ಞರ ಸಭೆ, ಅಂತ್ಯಗೊಂಡಿದೆ. ಈ ಸಭೆಯ ಬಳಿಕ ರಾಜ್ಯದಲ್ಲಿ ಕೋವಿಡ್ ಕಂಟ್ರೋಲ್ ಬಗ್ಗೆ ಮಹತ್ವದ ನಿರ್ಧಾರಗಳ ಕುರಿತಂತೆ ನಾಳಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ( CM Basavaraj Bommai ) ತಿಳಿಸಿದ್ದಾರೆ.
BIG NEWS: ಬೆಂಗಳೂರಿನ ಸಂಚಾರಿ ಜಂಟಿ ಪೊಲೀಸ್ ಆಯುಕ್ತರ ಮನೆಯಲ್ಲೇ ಕಳ್ಳತನ: ಮನೆ ಕೆಲಸದಾಕೆ ವಿರುದ್ಧ ದೂರುದಾಖಲು
ಈ ಸಭೆಯ ಬಳಿಕ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಒಮಿಕ್ರಾನ್ ಚಿಕಿತ್ಸೆಯ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದೆ. ರಾಜ್ಯದಲ್ಲಿ ಕೊರೋನಾ ಜಿಲ್ಲಾವಾರು ಸೋಂಕಿನ ಪ್ರಕರಣಗಳ ಬಗ್ಗೆ ಮಾಹಿತಿಯನ್ನು ಪಡೆಯಲಾಗಿದೆ. ಕೊರೋನಾ ಸ್ಥಿತಿಗತಿಯ ಬಗ್ಗೆ ಮಾಹಿತಿ ಪಡೆದಿದ್ದೇನೆ ಎಂದರು.
ನಾಳೆ ಸಚಿವ ಸಂಪುಟ ಸಭೆ ನಡೆಸಲಿದ್ದು, ಆ ಸಭೆಯಲ್ಲಿ ಒಮಿಕ್ರಾನ್ ವೈರಸ್ ಸೋಂಕಿಗೆ ವಿದೇಶಗಳಲ್ಲಿ ಹೇಗೆಲ್ಲಾ ಚಿಕಿತ್ಸೆ ನೀಡಲಾಗುತ್ತಿದೆ ಎನ್ನುವ ಬಗ್ಗೆ ಚರ್ಚೆ ನಡೆಸಿ, ಅಂತಿಮ ತೀರ್ಮಾನವನ್ನು ಕೈಗೊಳ್ಳಲಾಗುತ್ತದೆ. ಮಾರ್ಗಸೂಚಿ ಸಂಬಂಧವೂ ಚರ್ಚಿಸಿ, ಅಂತಿಮ ನಿರ್ಧಾರವನ್ನು ನಾಳೆ ಪ್ರಕಟಿಸೋದಾಗಿ ತಿಳಿಸಿದರು.
‘ಜಕ್ಕೂರು ವೈಮಾನಿಕ ತರಬೇತಿ ಶಾಲೆ’ಯಲ್ಲಿ ‘ಟ್ವಿನ್ ಎಂಜಿನ್ ವಿಮಾನ’ ಪರೀಕ್ಷಾರ್ಥ ಹಾರಾಟ ಯಶಸ್ವಿ- ಸಚಿವ ಡಾ.ನಾರಾಯಣಗೌಡ