ಬೆಂಗಳೂರು : ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನಸಾಮಾನ್ಯರಿಗೆ ಇದೀಗ ಟೊಮೆಟೊ ಬೆಲೆ ಗಗನಕ್ಕೇರಿದೆ. ಶೀಘ್ರವೇ ಕೆಜಿ ಟೊಮೆಟೊ ಬೆಲೆ 100ರೂ. ಗಡಿ ದಾಟುವ ಸಾಧ್ಯತೆ ಇದೆ.

ಹೌದು, ಮಾರುಕಟ್ಟೆಯಲ್ಲಿ ಟೊಮಟೋ ಬೆಲೆಯಲ್ಲಿ ಭಾರೀ ಹೆಚ್ಚಳವಾಗಿದ್ದು, ಮಾರುಕಟ್ಟೆಯಲ್ಲಿ ಕೆಜಿ ಟೊಮೆಟೊ ಬೆಲೆ ಗರಿಷ್ಠ 80 ರೂ. ನಂತೆ ಮಾರಾಟವಾಗಿದೆ. ಶೀಘ್ರವೇ 100-120 ರೂ.ಗೆ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ವರ್ತಕರು ತಿಳಿಸಿದ್ದಾರೆ.

ಮಳೆ ಹಾಗೂ ರೋಗಬಾಧ ಕಾರಣದಿಂದ ಮಾರುಕಟ್ಟೆಗೆ ಪೂರೈಕೆ ಗಣನೀಯವಾಗಿ ಕುಸಿದಿರುವುದು ಬೆಲೆ ಏರಿಕೆಗೆ ಕಾರಣವಾಗಿದೆ. ಕಳೆದ ನಾಲ್ಕೈದು ದಿನಗಳ ಹಿಂದೆ ಬೆಂಗಳೂರಿನ ಚಿಲ್ಲರೆ ಮಾರುಕಟ್ಟೆಗಳಲ್ಲಿ ಟೊಮೇಟೊ ಬೆಲೆ ಕೆಜಿಗೆ 40ರೂ. ಇತ್ತು. ಆದರೆ ಈಗ 80 ರೂ.ಗೆ ಏರಿಕೆಯಾಗಿದ್ದು, ಶೀಘ್ರವೇ 100 ರೂ.ಗಡಿ ದಾಟುವ ಸಾಧ್ಯತೆ ಇದೆ.

Share.
Exit mobile version