ಟರ್ಕಿ : ಟರ್ಕಿಯ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಅವರು ಭಾರೀ ಭೂಕಂಪಗಳಿಂದ ಹಾನಿಗೊಳಗಾದ 10 ಪ್ರಾಂತ್ಯಗಳಲ್ಲಿ ಮೂರು ತಿಂಗಳ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ.
ಇದುವರೆಗೆ ದೇಶವು 3,549 ಸಾವುಗಳನ್ನು ದೃಢಪಡಿಸಿದ್ದು, ಪ್ರಸ್ತುತ ಭೂಕಂಪ ವಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ 53,317 ಶೋಧ ಮತ್ತು ರಕ್ಷಣಾ ಸಿಬ್ಬಂದಿ ಮತ್ತು ಸಹಾಯಕ ಸಿಬ್ಬಂದಿಯಿಂದ 8,000 ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಸೋಮವಾರದಿಂದ ಟರ್ಕಿ, ಸಿರಿಯಾದದಲ್ಲಿ 5 ಭೂಕಂಪಗಳು ಸಂಭವಿಸಿದ್ದು, ಅಪಾರ ಪ್ರಮಾಣದ ಪ್ರಾಣ-ಆಸ್ತಿ ಹಾಸಿ ಸಂಭವಿಸಿದೆ. 5 ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಸಾವಿರಾರು ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಭೂಕಂಪನದಿಂ ಬಹುಮಾಡಿ ಕಟ್ಟಡಗಳು ಧರೆಗುರುಳಿದ್ದು, ಜನ ಜೀವವ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
BREAKING NEWS : ಬ್ರಾಹ್ಮಣರ ಅವಹೇಳನ ಆರೋಪ ; RSS ಮುಖ್ಯಸ್ಥ ‘ಮೋಹನ್ ಭಾಗವತ್’ ವಿರುದ್ಧ ‘ಕ್ರಿಮಿನಲ್ ಪ್ರಕರಣ’ ದಾಖಲು