Kannada News Now |  Kannada News | Karnataka News | India News |  Breking News |  Kannada Live News | Live news India | Sports News | Breaking News | Big Breakinge news |news in kannada | Breaking news kananda News |  Kannada News News |  Breaking News  |  Karnataka News  News |  Kannada Breaking News Latest News in Kannada | Cricket news | India | Kannada Breaking News | Breaking News | Big Breaking news | Gold |  Silver
    Facebook Twitter Instagram
    Kannada News Now |  Kannada News | Karnataka News | India News |  Breking News |  Kannada Live News | Live news India | Sports News | Breaking News | Big Breakinge news |news in kannada | Breaking news kananda News |  Kannada News News |  Breaking News  |  Karnataka News  News |  Kannada Breaking News Latest News in Kannada | Cricket news | India | Kannada Breaking News | Breaking News | Big Breaking news | Gold |  Silver Kannada News Now |  Kannada News | Karnataka News | India News |  Breking News |  Kannada Live News | Live news India | Sports News | Breaking News | Big Breakinge news |news in kannada | Breaking news kananda News |  Kannada News News |  Breaking News  |  Karnataka News  News |  Kannada Breaking News Latest News in Kannada | Cricket news | India | Kannada Breaking News | Breaking News | Big Breaking news | Gold |  Silver
    • STATE
    • KARNATAKA
    • INDIA
    • WORLD
    • SPORTS
      • CRICKET
      • OTHER SPORTS
    • FILM
      • SANDALWOOD
      • BOLLYWOOD
      • OTHER FILM
    • LIFE STYLE
      • BEAUTY TIPS
    • BUSINESS
    • JOBS
    • CORONA VIRUS
    • AUTOMOBILE
      • BIKE-REVIEWS
      • CAR-REVIEWS
    Kannada News Now |  Kannada News | Karnataka News | India News |  Breking News |  Kannada Live News | Live news India | Sports News | Breaking News | Big Breakinge news |news in kannada | Breaking news kananda News |  Kannada News News |  Breaking News  |  Karnataka News  News |  Kannada Breaking News Latest News in Kannada | Cricket news | India | Kannada Breaking News | Breaking News | Big Breaking news | Gold |  Silver
    Home»KARNATAKA»ಇಂದು ಕಾನ್ಸರ್ ತಡೆಗಟ್ಟುವ ದಿನ, ಇಲ್ಲಿದೆ ಮಹತ್ವದ ಮಾಹಿತಿ
    KARNATAKA

    ಇಂದು ಕಾನ್ಸರ್ ತಡೆಗಟ್ಟುವ ದಿನ, ಇಲ್ಲಿದೆ ಮಹತ್ವದ ಮಾಹಿತಿ

    By kanandanewsliveFebruary 04, 6:34 am

    ಬೆಂಗಳೂರು: ಯೋಜನೆ ಕಾರ್ಯ ಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯು – (E-JANMA) ಎಂಬ ಎನ್‍ಐಸಿ ಸಾಪ್ಟ್‍ವೇರ್ ಬಳಸಿ ರಾಜ್ಯದಲ್ಲಿ ಸಂಭವಿಸುವ ಪ್ರತಿ ಜನನ ಮತ್ತು ಮರಣ ದಾಖಲೆಯನ್ನು ಪೂರೈಸುತ್ತಿದ್ದು, ಗ್ರಾಮ ಲೆಕ್ಕಾಧಿಕಾರಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ತಹಶೀಲ್ದಾರರು ಮತ್ತು ಜಿಲ್ಲಾಧಿಕಾರಿಗಳನ್ನು ನೋಂದಣಾಧಿಕಾರಿಗಳಾಗಿ ನೇಮಿಸಲಾಗಿದೆ ಮತ್ತು ಜನನ ಮತ್ತು ಮರಣಗಳ ನೋಂದಣಿ ಕಾಯಿದೆಯಡಿ, ಜಿಲ್ಲಾಧಿಕಾರಿಗಳನ್ನು ರಿಜಿಸ್ಟ್ರಾರ್‍ಗಳಾಗಿ ನೇಮಿಸಲಾಗಿದ್ದು ಇಲಾಖೆಯ ಹೆಚ್ಚುವರಿ ನಿರ್ದೇಶಕರು ಮುಖ್ಯ ರಿಜಿಸ್ಟ್ರಾರ್ ಆಗಿರುತ್ತಾರೆ. ವಾರ್ಷಿಕವಾಗಿ ಸಂಗ್ರಹಿಸಿದ ದತ್ತಾಂಶವನ್ನು ಆಧರಿಸಿ, ಸಾವಿಗೆ ಕಾರಣಗಳ ಕುರಿತು ವಾರ್ಷಿಕ ವರದಿಯ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ ಇಲಾಖೆಯು ಪಕಟಿಸುತ್ತದೆ.

    ಕಳೆದ ಒಂದು ದಶಕದಲ್ಲಿ ಸಾಂಕ್ರಾಮಿಕವಲ್ಲದ ರೋಗಗಳಿಂದ ಸಾವನ್ನಪ್ಪುತಿತುವವರ ಸಂಖ್ಯೆ ಹೆಚ್ಚುತ್ತಿರುವುದು. ಆತಂಕಕಾರಿ ಸಂಗತಿಯಾಗಿದ WHO ವರದಿ 2022 ರ ಪ್ರಕಾರ, ಸಾಂಕ್ರಾಮಿಕವಲ್ಲದ ರೋಗಗಳು (NCD ಗಳು) ವಾರ್ಷಿಕವಾಗಿ 41 ಮಿಲಿಯನ್, ಸಾವುಗಳಿಗೆ ಕಾರಣವಾಗಿದ್ದು, ಇದು ಪ್ರಪಂಚದಾದ್ಯಂತ 74% ನಷ್ಟು ಸಾವುಗಳಿಗೆ ಸಮನಾಗಿದೆ. ಈ ಅಕಾಲಿಕ ಮರಣಗಳಲ್ಲಿ 86% ಮಧ್ಯಮ ಮತ್ತು ಕಡಿಮೆ ಆದಾಯ ಹೊಂದಿದ ದೇಶಗಳಲ್ಲಿ ಸಂಭವಿಸುತ್ತಿವೆ. ಹಾಗಾಗಿ, ನಮ್ಮ ದೇಶ/ರಾಜ್ಯದಲ್ಲಿ ಸಾಂಕ್ರಾಮಿಕವಲ್ಲದ ಕಾಯಿಲೆಗಳು ನಿರ್ದಿಷ್ಟವಾಗಿ ಕ್ಯಾನ್ಸರ್ ಕಾಯಿಲೆ ಹರಡುವುದನ್ನು ತಡೆಯಲು ಏನು ಮಾಡಬೇಕು?

    ಸಾರ್ವಜನಿಕರಿಗೆ ರೋಗಗಳ ಬಗ್ಗೆ ಸೂಕ್ತ ತಿಳುವಳಿಕೆ ನೀಡುವುದು ಮತ್ತು ಸೂಕ್ತ ಸಮಯಕ್ಕೆ ಸರಳವಾದ ಸರಿಪಡಿಸುವ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ವೆಚ್ಚ ಪರಿಣಾಮಕಾರಿ ರೀತಿಯಲ್ಲಿ ಅನೇಕ ಅಮೂಲ್ಯ ಜೀವಗಳನ್ನು ಉಳಿಸಬಹುದು ಎಂದು ಇತ್ತೀಚೆಗೆ ಕೋವಿಡ್ ನಿರ್ವಹಣೆಯಿಂದ ಸಾಬೀತಾಗಿದೆ.

    ಅರಿವಿರಲಿ (Be Aware) – ಮೊದಲನೆಯದಾಗಿ, ನಾವು ಇಂತಹ ಪ್ರಕರಣಗಳನ್ನು ಆಳವಾಗಿ ಅಧ್ಯಯನ ಮಾಡಿರುವ ಆಂಕೊಲಾಜಿಸ್ಟ್‍ಗಳು ಮತ್ತು ಇತರ ವೈದ್ಯಕೀಯ ವೃತ್ತಿಪರರಿಂದ ಸೂಕ್ತ ತಿಳುವಳಿಕೆಯನ್ನು ಪಡೆಯಬೇಕು ಮತ್ತು ಅದರಂತೆ ನಮ್ಮ ಆಹಾರ ಪದ್ಧತಿ ಹಾಗೂ ಜೀವನ ಶೈಲಿಯಲ್ಲಿ ಸರಳವಾದ ಬದಲಾವಣೆಗಳನ್ನು ಮಾಡುವ ಮೂಲಕ ಅಂತಹ ಕಾಯಿಲೆಗಳನ್ನು ಹೇಗೆ ತಡೆಯುವುದು ಎಂಬುದರ ಕುರಿತು ಸಲಹೆ ನೀಡಬಹುದಾಗಿದೆ.

    ನಾವೆಲ್ಲಿ ತಪ್ಪು ಮಾಡುತ್ತಿದ್ದೇವೆ? ಮಾನವನ ಜೀವಕೋಶಗಳಲ್ಲಿ, ಕೃತಕ ರಾಸಾಯನಿಕಗಳು, ಪ್ರತಿಕ್ರಿಯೆಯನ್ನು ಉಂಟುಮಾಡುವುದರ ಮೂಲಕ ಅನುವಂಶಿಕ ರೂಪಾಂತರಗಳಿಗೆ ಮುಖ್ಯ ಕಾರಣವಾಗಿದ್ದು, ಕ್ಯಾನ್ಸರ್ ಕೋಶಗಳನ್ನು ಉಂಟುಮಾಡುತ್ತವೆ. ಹಾಗಾದರೆ ಏನು ತಪ್ಪಿಸಬೇಕು?

    ಹೆಚ್ಚಿನ ದೇಹದ ದ್ರವ್ಯರಾಶಿ ಸೂಚಿ, ಕಡಿಮೆ ಹಣ್ಣು ಮತ್ತು ತರಕಾರಿ ಸೇವನೆ, ದೈಹಿಕ ಚಟುವಟಿಕೆಯ ಕೊರತೆ, ತಂಬಾಕು ಸೇವನೆ ಮತ್ತು ಮದ್ಯಪಾನ ಸೇರಿದಂತೆ 5 ಪುಮುಖ ವರ್ತನೆಯಿಂದ ಸುಮಾರು ಮೂರನೇ ಒಂದು ಭಾಗದಷ್ಟು ಕ್ಯಾನ್ಸರ್ ಸಾವುಗಳು ಉಂಟಾಗುತ್ತಿವೆ.

    ತಂಬಾಕು ಏಕೆ? ತಂಬಾಕು ಕ್ಯಾನ್ಸರ್‍ಗೆ ಪ್ರಮುಖ ಅಪಾಯಕಾರಿ ಅಂಶವಾಗಿದೆ. ಕ್ಯಾನ್ಸರ್ ತಡೆಗಟ್ಟಲು ಉತ್ತಮ ಮಾರ್ಗವೆಂದರೆ ತಂಬಾಕಿನಿಂದ ದೂರವಿರುವುದು, ಅಥವಾ ಅದನ್ನು ಬಳಸುವುದನ್ನು ನಿಲ್ಲಿಸುವುದು. ಯುವಕರು ಕಿಕ್ ಹೊಂದುವ ಕುತೂಹಲದಿಂದ ಸ್ನೇಹಿತರ ಪ್ರಭಾವದಿಂದ ತಂಬಾಕು ತೆಗೆದುಕೊಳ್ಳಲು ಪ್ರಾರಂಭಿಸುತ್ತಾರೆ. ಆದರೆ ನಂತರ ಅದನ್ನು ತ್ಯಜಿಸಲು ಕಷ್ಟವಾಗುತ್ತದೆ. ದುವ್ರ್ಯಸನ ಮುಕ್ತರಾಗಲು ತಮಗೆ ಸಹಾಯ ಮಾಡಿಕೊಳ್ಳ ಬಯಸುವವರಿಗೆ ಸಹಾಯ ಮಾಡಲು ಸರ್ಕಾರದಿಂದ ವ್ಯಸನ ಮುಕ್ತ ಸೆಂಟರ್‍ಗಳನ್ನು ಸಾಪಿಸಲಾಗಿದೆ. ಅವರಿಗೆ ಸಹಾಯ ಮಾಡಿ. ಸಹಾಯವಾಣಿ ಸಂಖ್ಯೆ. 155265.

    ಮದ್ಯಪಾನ ಸೇವನೆಯು ಸಹ ಸ್ತನ ಕಲೋನ್, ಶ್ಯಾಸಕೋಶ, ಮೂತ್ರಪಿಂಡ ಮತ್ತು ಯಕೃತ್ತಿನ ಕಾನ್ಸರ್ ಸೇರಿದಂತೆ ವಿವಿಧ ರೀತಿಯ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ.

    ಆರೋಗ್ಯಕರವಾದ ಆಹಾರ : ಆರೋಗ್ಯಕರ ಆಹಾರದಿಂದ ಕಾನ್ಸರ್ ತಡೆಗಟ್ಟಲು ಸಾಧ್ಯ ವಿಲ್ಲದಿದ್ದರೂ ಇದು ಖಂಡಿತವಾಗಿ ಅದರ ಅಪಾಯವನ್ನು ಕಡಿಮೆ ಮಾಡುತ್ತದೆ. ತಾಜಾ ಹಣ್ಣುಗಳು, ಸ್ಥಳೀಯ ತರಕಾರಿಗಳು ಮತ್ತು ಇತರ ಸಸ್ಯ ಮೂಲಗಳ ಆಹಾರ ಸೇವನೆ ಮೇಲೆ ನಿಮ್ಮ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳಿರಿ. ಕಡಿಮೆ ಕ್ಯಾಲೋರಿ ಹೊಂದಿರುವ ಆಹಾರವನ್ನ ಆರಿಸುವುದರಿಂದ ನೀವು ಹಗುರವಾದ ತೂಕವನ್ನು ಹೊಂದಲು ಮತ್ತು ತೆಳ್ಳಗಾಗಲು ಸಹಾಯ ಮಾಡುತ್ತದೆ. ಪ್ರಾಣಿ ಮೂಲಗಳ ಸಂಸ್ಕರಿಸಿದ ಸಕ್ಕರೆ ಮತ್ತು ಕೊಬ್ಬನ್ನು ಮಿತಿಗೊಳಿಸಿ.

    ದೇಹದ ಆರೋಗ್ಯಕರ ತೂಕದ ನಿರ್ವಹಣೆಯಿಂದಾಗಿ ದೈಹಿಕವಾಗಿ ಸಕ್ರಿಯರಾಗಿರಿ : ದೈಹಿಕ ಚಟುವಟಿಕೆಯು ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಹಾಗೂ ಸ್ತನ ಕ್ಯಾನ್ಸರ್ ಮತ್ತು ಕರುಳಿನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದ್ದರಿಂದ ಪ್ರತಿದಿನ ನಡೆಯಲು ಹೋಗಿ ಹಾಗೂ ಯೋಗ ಮತ್ತು ಪ್ರಾಣಾಯಾಮವನ್ನು ನಿಯಮಿತವಾಗಿ ಮಾಡಿ.

    ವಿಕಿರಣ : ಚರ್ಮದ ಕ್ಯಾನ್ಸರ್ ಒಂದು ಅತ್ಯಂತ ಸಾಮಾನ್ಯ ರೀತಿಯ ಕ್ಯಾನ್ಸರ್ ಆಗಿದ್ದು ಅದನ್ನು ತಡೆಗಟ್ಟಬಹುದಾಗಿದೆ. ಚರ್ಮವು ಎಲ್ಲಾ ವಿಧದ ಅಯಾನೀಕರಿಸುವ (ionozing) ವಿಕಿರಣಗಳಿಗೆ ಒಡ್ಡಿಕೊಳ್ಳುವುದರಿಂದ ಲ್ಯೂಕೇಮಿಯಾ ಮತ್ತು ವಿವಿಧ ಘನ ಗೆಡ್ಡೆಗಳು ಸೇರಿದಂತೆ ವಿವಿಧ ಕ್ಯಾನ್ಸರ್‍ಗಳ ಅಪಾಯವನ್ನು ಹೆಚ್ಚಿಸುತ್ತದೆ. ನಡು ಮಧ್ಯಾಹ್ನದ ಸೂರ್ಯನ ಕಿರಣಗಳಿಂದ ದೂರವಿರಿ.

    ಪರಿಸರ ಮಾಲಿನ : ಅಂದಾಜಿನ ಪ್ರಕಾರ, ಹೊರಾಂಗಣ ವಾಯು ಮಾಲಿನ್ಯವು 2016 ರಲ್ಲಿ ವಿಶ್ವಾದ್ಯಂತ 4.2 ಮಿಲಿಯನ್ ಅಕಾಲಿಕ ಮರಣಗಳಿಗೆ ಕಾರಣವಾಗಿದ್ದು, ಅದರಲ್ಲಿ 6% ಶಾಸಕೋಶದ ಕ್ಯಾನ್ಸರ್ ಸಾವುಗಳಾಗಿವೆ. ಹೆಚ್ಚುವರಿಯಾಗಿ, ಘನ ಇಂಧನಗಳು ಮತ್ತು ಸೀಮೆ ಎಣ್ಣೆಗಳಿಂದ ಅಡುಗೆ ಮಾಡುವುದರಿಂದ ಉಂಟಾಗುವ ಒಳಾಂಗಣ ಮನ ವಾಯು ಮಾಲಿನ್ಯದಿಂದ ಸುಮಾರು 4 ಮಿಲಿಯನ್ ಜನರು ಅನಾರೋಗ್ಯಕ್ಕೆ ತುತ್ತಾಗಿ ಸಾವನ್ನಪ್ಪುತ್ತಿದ್ದಾರ ಅಕಾಲಿಕವಾಗಿ

    ಲಸಿಕೆ ಹಾಕಿಸಿಕೊಳ್ಳಿರಿ : ಕೆಲವು ವೈರಲ್ ಸೋಂಕುಗಳಿಂದ ರಕ್ಷಿಸುವ ಮೂಲಕ ಕ್ಯಾನ್ಸರ್ ಅನ್ನು ತಡೆಯಬಹುದು. ಇದರ ವಿರುದ್ಧ ಲಸಿಕೆ ಪಡೆಯುವುದರ ಕುರಿತು ವೈದ್ಯಕೀಯ ವೃತ್ತಿಪರರನ್ನು ಸಂಪರ್ಕಿಸಿ. ಹೆಪಟೈಟಿಸ್ ಬಿ, ಹೆಪಟೈಟಿಸ್ ಬಿ ಯಕೃತ್ತಿನ ಕ್ಯಾನ್ಸರ್ ಬೆಳವಣಿಗೆಯ ಅಪಾಯವನ್ನು ಹೆಚ್ಚಿಸಬಹುದು.

    ಹ್ಯೂಮನ್ ಪ್ಯಾಪಿಲೋಮವೈರಸ್ (HPV), HPV ಒಂದು ಲೈಂಗಿಕವಾಗಿ ಹರಡುವ ವೈರಸ್ ಆಗಿದ್ದು, ಇದು ಗರ್ಭಕಂಠದ ಕ್ಯಾನ್ಸರ್ ಮತ್ತು ಇತರ ಜನನಾಂಗದ ಕ್ಯಾನ್ಸರ್‍ಗಳಿಗೆ ಮತ್ತು ತಲೆ ಮತ್ತು ಕತ್ತಿನ ಸ್ಕ್ಯಾಮಸ್ ಸೆಲ್ ಕ್ಯಾನ್ಸರ್‍ಗಳಿಗೆ ಕಾರಣವಾಗಬಹುದು.

    ಸ್ಕ್ರೀನಿಂಗ್ ಪರೀಕ್ಷೆಗಳು (Screening Tests)

    ಸ್ತನ ಕ್ಯಾನ್ಸರ್, ಗರ್ಭಕಂಠದ ಕ್ಯಾನ್ಸರ್ ಮತ್ತು ಬಾಯಿಯ ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲಿ ಕಂಡುಹಿಡಿಯಬಹುದು. 21 ರಿಂದ 65 ವರ್ಷ ವಯಸ್ಸಿನ ವಿವಾಹಿತ ಮಹಿಳೆಯರು ಪ್ರತಿ ಮೂರು ವರ್ಷಗಳಿಗೊಮ್ಮೆ ಪ್ರಾಪ್ ಪರೀಕ್ಷೆಯನ್ನು ಮಾಡಬಹುದು. 40 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ಪ್ರತಿ 3 ವರ್ಷಗಳಿಗೊಮ್ಮೆ ಮಾಮೊಗ್ರಫಿಗೆ ಒಳಗಾಗಬಹುದು. ಯಾವುದೇ ಮೌಖಿಕ ಗಾಯಗಳು ಅಥವಾ ತೇಪೆಗಳನ್ನು ನೋಡಲು ಸ್ವಯಂ ಮೌಖಿಕ ಪರೀಕ್ಷೆಯನ್ನು ಮಾಡಬಹುದು.

    ಮಾಹಿತಿ ಕೃಪೆ: ರಾಜ್ಯ ವಾರ್ತಾ ಇಲಾಖೆ

     


    best web service company
    Share. Facebook Twitter LinkedIn WhatsApp Email

    Related Posts

    ಮನೆಯಲ್ಲಿ ಪದೇ ಪದೇ ಹಣಕಾಸಿನ ಸಮಸ್ಯೆ ಎದುರಾಗುತ್ತಿದ್ದರೆ ಪವಿತ್ರವಾದ ಸಾಲಿಗ್ರಾಮವನ್ನು ಇಟ್ಟು ಪೂಜೆ ಮಾಡಿ ನೋಡಿ!

    April 02, 7:29 am

    BIGG NEWS : ಬಿಸಿಲಿನ ತಾಪಮಾನ ಹೆಚ್ಚಳ : ಸಾರ್ವಜನಿಕರಿಗೆ ಇಲ್ಲಿದೆ ಮಹತ್ವದ ಮಾಹಿತಿ

    April 02, 7:14 am

    BIGG NEWS : ಚಿಕ್ಕಬಳ್ಳಾಪುರದಲ್ಲಿ ಘೋರ ದುರಂತ : ಫೋಟೋ ಶೂಟ್ ಮಾಡುವಾಗ ಮೂವರು ವಿದ್ಯಾರ್ಥಿಗಳು ನೀರುಪಾಲು

    April 02, 6:54 am
    Recent News

    ಮನೆಯಲ್ಲಿ ಪದೇ ಪದೇ ಹಣಕಾಸಿನ ಸಮಸ್ಯೆ ಎದುರಾಗುತ್ತಿದ್ದರೆ ಪವಿತ್ರವಾದ ಸಾಲಿಗ್ರಾಮವನ್ನು ಇಟ್ಟು ಪೂಜೆ ಮಾಡಿ ನೋಡಿ!

    April 02, 7:29 am

    BREAKING NEWS : ಬಿಹಾರದಲ್ಲಿ ಮುಂದುವರೆದ ಹಿಂಸಾಚಾರ: ಬಾಂಬ್ ಸ್ಫೋಟಗೊಂಡು ಐವರಿಗೆ ಗಾಯ | Bomb Blast In Bihar

    April 02, 7:21 am

    BIGG NEWS : ಬಿಸಿಲಿನ ತಾಪಮಾನ ಹೆಚ್ಚಳ : ಸಾರ್ವಜನಿಕರಿಗೆ ಇಲ್ಲಿದೆ ಮಹತ್ವದ ಮಾಹಿತಿ

    April 02, 7:14 am

    IPL 2023: ʻಪುಷ್ಪಾʼ ಸಿನಿಮಾದ ʻಸಾಮಿ ಸಾಮಿʼ ಹಾಡಿಗೆ ಡ್ಯಾನ್ಸ್ ಮಾಡಿದ ʻಸುನಿಲ್ ಗವಾಸ್ಕರ್ʼ | WATCH VIDEO

    April 02, 7:10 am
    State News
    KARNATAKA

    ಮನೆಯಲ್ಲಿ ಪದೇ ಪದೇ ಹಣಕಾಸಿನ ಸಮಸ್ಯೆ ಎದುರಾಗುತ್ತಿದ್ದರೆ ಪವಿತ್ರವಾದ ಸಾಲಿಗ್ರಾಮವನ್ನು ಇಟ್ಟು ಪೂಜೆ ಮಾಡಿ ನೋಡಿ!

    By kannadanewsliveApril 02, 7:29 am0

    ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559 ಸಾಲಿಗ್ರಾಮ…

    BIGG NEWS : ಬಿಸಿಲಿನ ತಾಪಮಾನ ಹೆಚ್ಚಳ : ಸಾರ್ವಜನಿಕರಿಗೆ ಇಲ್ಲಿದೆ ಮಹತ್ವದ ಮಾಹಿತಿ

    April 02, 7:14 am

    BIGG NEWS : ಚಿಕ್ಕಬಳ್ಳಾಪುರದಲ್ಲಿ ಘೋರ ದುರಂತ : ಫೋಟೋ ಶೂಟ್ ಮಾಡುವಾಗ ಮೂವರು ವಿದ್ಯಾರ್ಥಿಗಳು ನೀರುಪಾಲು

    April 02, 6:54 am

    BIGG NEWS : ಬೆಂಗಳೂರಿನಲ್ಲಿ `IPL’ ಪಂದ್ಯಾವಳಿ : ರಾತ್ರಿ 1 ಗಂಟೆವರೆಗೆ ಮೆಟ್ರೋ ಸಂಚಾರ ವಿಸ್ತರಣೆ

    April 02, 6:43 am

    kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

    Quick Links
    • State
    • Karnataka
    • India
    • World
    • Sports
    • Film
    • Lifestyle
    • Business
    • Jobs
    • Corona Virus
    • Automobile
    contact us

    kannadanewsnow@gmail.com

    FOLLOW US

    breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

    • Home
    • Lifestyle
    • Buy Now
    Copyright © 2023 | All Right Reserved | kannadanewsnow.com
    Digital Partner Blueline Computers

    Type above and press Enter to search. Press Esc to cancel.