ಬೆಳಗಾವಿ: ನಿನ್ನೆ ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಸಿಡಿದೆದ್ದಿದೆ. ನಿನ್ನೆ ಕಾಮಗಾರಿಯ ಬಿಲ್ ಮಾಡೋದಕ್ಕೆ ಪರ್ಸಂಟೇಜ್ ತೆಗೆದುಕೊಳ್ಳುವಂತ ಸರ್ಕಾರದ ವಿರುದ್ಧ ಟ್ರ್ಯಾಕ್ಟರ್ Rally ನಡೆಸಿ, ಆಕ್ರೋಶ ವ್ಯಕ್ತ ಪಡಿಸಿದ್ದರು. ಇಂದು ಮತ್ತೆ ಪ್ರತಿಭಟನೆ ಮುಂದುವರೆಸಿರುವಂತ ಕಾಂಗ್ರೆಸ್ ಯುವ ನಾಯಕರು, ಜಾರಕಿಹೊಳಿ ಸಿಡಿ ಸೇರಿದಂತೆ ವಿವಿಧ ವಿಚಾರಗಳ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಲಿದೆ.
ಇಂದು ಕೂಡ ಕಾಂಗ್ರೆಸ್ ನಿಂದ ರಾಜ್ಯ ಸರ್ಕಾರ ವಿರುದ್ಧ ಬೃಹತ್ ಪ್ರತಿಭಟನೆ ಮುಂದುವರೆದಿದೆ. ಯಡಿಯೂರಪ್ಪ ಮಾರ್ಗದಿಂದ ಪಾದಯಾತ್ರೆ ಶುರು ಮಾಡಲಿರುವಂತ ಯುವ ಕಾಂಗ್ರೆಸ್ ಮುಖಂಡರು, ಬೆಳಗಾವಿಯ ಸುವರ್ಣ ಸೌಧದವರೆಗೆ ಬೃಹತ್ ಪಾದಯಾತ್ರೆಯನ್ನು ನಡೆಸಲಿದ್ದಾರೆ.
ಈ ಪ್ರತಿಭಟನೆಯಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷರಾದಂತ ರಕ್ಷಾ ರಾಮಯ್ಯ, ನಲಪಾಡ್ ಹ್ಯಾರಿಸ್ ಸೇರಿದಂತೆ ವಿವಿಧ ಮುಖಂಡರು ಭಾಗವಹಿಸಲಿದ್ದಾರೆ. ಜಾರಕಿಹೊಳಿ ಸಿಡಿ ಕೇಸ್, ಯುವಕರಿಗೆ ಉದ್ಯೋಗ ಆದ್ಯತೆ, ಬೆಲೆ ಏರಿಕೆ ಇಳಿಕೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು, ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಿದೆ.