ಬೆಂಗಳೂರು : ಬೆಂಗಳೂರಲ್ಲಿ ವ್ಯಾಪಾರಿಗಳಿಗೆ ಕಮರ್ಷಿಯಲ್ ಟ್ಯಾಕ್ಸ್ ಬರೇ ಎಫೆಕ್ಟ್ ನಿಂದಾಗಿ ಸರ್ಕಾರದ ವಿರುದ್ಧ ಬೆಂಗಳೂರಿನ ವ್ಯಾಪಾರಿಗಳು ಸಿಡಿದೆದ್ದಿದ್ದು ಜುಲೈ 25 ರಂದು ಬಂದ್ ಮಾಡಲು ನಿರ್ಧಾರಿಸಿದ್ದು, ಇದೀಗ ಬಂದ್ ಗೆ ಬೆಂಬಲಿಸುವಂತೆ ಅಂಗಡಿ ಮಾಲೀಕರಿಗೆ ಮನವಿ ಮಾಡಲಾಗಿದೆ. Aಜುಲೈ 25 ರಂದು ನಡೆಯುವ ಬಂದ್ ಗೆ ಬೆಂಬಲಿಸುವಂತೆ ಬೇಕರಿ, ಕಂಡಿಮೆಂಟ್ಸ್, ಹಾಲಿನ ಅಂಗಡಿ ವ್ಯಾಪಾರಿಗಳಿಗೆ ಮನವಿ ಸಲ್ಲಿಸಲಾಗಿದೆ.
ಹೌದು ಅಂಗಡಿ ಮತ್ತು ಬೀದಿಬದಿಯ ವ್ಯಾಪಾರಿಗಳಿಗೆ ಕಮರ್ಷಿಯಲ್ ಅಧಿಕಾರಿಗಳು ಲಕ್ಷಗಟ್ಟಲೆ ಟ್ಯಾಕ್ಸ್ ಕಟ್ಟುವಂತೆ ನೋಟಿಸ್ ನೀಡಿದ್ದರ ಕುರಿತು ವ್ಯಾಪಾರಿಗಳು ಇದೀಗ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದು, ಜುಲೈ 25 ರಂದು ಎಲ್ಲ ಅಂಗಡಿಗಳನ್ನು ಬಂದ್ ಮಾಡಿ ಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿ ಪ್ರತಿಭಟನೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಲ್ಲದೆ ಇಂದು ಅಂಗಡಿಗಳಿಗೆ ತೆರಳಿ ಬಂದ್ ಗೆ ಬೆಂಬಲ ನೀಡುವಂತೆ ಮನವಿ ಸಹ ಸಲ್ಲಿಸಲಾಗುತ್ತಿದೆ. ಅಲ್ಲದೆ ಜುಲೈ 23ಕ್ಕೆ ಹಾಲು ಮಾರಾಟ ಬಂದ್ ಮಾಡಲು ವ್ಯಾಪಾರಿಗಳು ನಿರ್ಧರಿಸಿದ್ದಾರೆ.