ಬೆಂಗಳೂರು: ವಿವಿಧ ಕಾರಣಗಳಿಂದಾಗಿ ನಮ್ಮ ಮೆಟ್ರೋ ಸಂಚಾರವು ( Namma Metro Service ) ಫೆಬ್ರವರಿ.11ರಂದು ಸ್ಥಗಿತಗೊಳ್ಳಲಿದೆ.  ಟ್ರಿನಿಟಿ ಮತ್ತು ಎಂ.ಜಿ  ರಸ್ತೆ ಮೆಟ್ರೋ ನಿಲ್ದಾಣಗಳ ನಡುವೆ ದಿನಾಂಕ 11.02.2024 ರಂದು ವಾಣಿಜ್ಯ ಸೇವೆ ಭಾಗಶಃ ಸ್ಥಗಿತಗೊಳ್ಳಲಿದೆ.

ಈ ಕುರಿತಂತೆ ಬಿಎಂಆರ್ ಸಿಎಲ್ ( BMRCL ) ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಬೆಂಗಳೂರು ಮೆಟ್ರೋ ರೈಲು ನಿಗಮವು ದಿನಾಂಕ 11.02.2024 ರಂದು (ಭಾನುವಾರ) ಟ್ರಿನಿಟಿ ಮತ್ತು ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣಗಳನಡುವೆ ನೇರಳೆ ಮಾರ್ಗದಲ್ಲಿ ನಿರ್ವಹಣೆ ಕಾಮಗಾರಿಯನ್ನು ಕೈಗೊಳ್ಳುತ್ತಿದೆ ಎಂದು ತಿಳಿಸಿದೆ.

ಈ ಕಾಮಗಾರಿಯನ್ನು ನಿರ್ವಹಿಸಲು ನೇರಳೆ ಮಾರ್ಗದ ಎಂ.ಜಿ.  ರಸ್ತೆ   ಮತ್ತು ಇಂದಿರಾನಗರ ಮೆಟ್ರೋ ನಿಲ್ದಾಣಗಳನಡುವೆ ವಾಣಿಜ್ಯ ಸೇವೆಯನ್ನು ಬೆಳಿಗ್ಗೆ 07.00 ಗಂಟೆಯಿಂದ 9.00 ಗಂಟೆಯವರೆಗೆ (ಎರಡು ಗಂಟೆಗಳ ಅವಧಿಗೆ) ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತಿದೆ. ಈ ಅವಧಿಯಲ್ಲಿ ರೈಲುಗಳು ಎಂ.ಜಿ ರಸ್ತೆ ಮತ್ತು ಚಲ್ಲಘಟ್ಟ ಹಾಗೂ ಇಂದಿರಾನಗರ ಮತ್ತು ವೈಟ್‌ಫೀಲ್ಡ್ (ಕಾಡುಗೋಡಿ) ನಡುವೆ ಮಾತ್ರ ಬೆಳಿಗ್ಗೆ 07.00 ಗಂಟೆಯಿಂದ ಚಲಿಸುತ್ತವೆ ಎಂದು ಹೇಳಿದೆ.

ಬೆಳಿಗ್ಗೆ 9.00 ಗಂಟೆಯ ನಂತರ ವೈಟ್‌ಫೀಲ್ಡ್ (ಕಾಡುಗೋಡಿ) ಮತ್ತು ಚಲ್ಲಘಟ್ಟ ಮೆಟ್ರೋ ನಿಲ್ದಾಣಗಳ ನಡುವಿನ ಸಂಪೂರ್ಣ ನೇರಳೆ ಮಾರ್ಗದಲ್ಲಿ ವೇಳಾಪಟ್ಟಿಯಂತೆ ಮೆಟ್ರೋ ರೈಲು ಸೇವೆಗಳು ಲಭ್ಯವಿರುತ್ತವೆ ಎಂದಿದೆ.

ಹಸಿರು ಮಾರ್ಗದಲ್ಲಿ ರೈಲುಗಳ ಸೇವೆ ಆಯಾ ಟರ್ಮಿನಲ್ ನಿಲ್ದಾಣಗಳಿಂದ ವೇಳಾಪಟ್ಟಿಯ ಪ್ರಕಾರ ಬೆಳಿಗ್ಗೆ 7.00 ಗಂಟೆಗೆ ಪ್ರಾರಂಭವಾಗಿ ಎಂದಿನಂತೆ ಚಲಿಸುತ್ತವೆ ಎಂದು ತಿಳಿಸಿದೆ.

ನಮ್ಮ ಮೆಟ್ರೋ ಪ್ರಯಾಣಿಕರು ಮೇಲಿನ ಬದಲಾವಣೆಯನ್ನು ಗಮನಿಸ ಬೇಕೆಂದು ಕೋರಿದೆ.  ಸಾರ್ವಜನಿಕರಿಗೆ ಇದರಿಂದಾಗುವ ಅನಾನುಕೂಲತೆಗೆ ವಿಷಾದಿಸಿದೆ.

‘ಮಂಡ್ಯ ಲೋಕಸಭಾ ಟಿಕೆಟ್’ಗಾಗಿ ‘ಸುಮಲತಾ’ ಸರ್ಕಸ್: ‘ಪ್ರಧಾನಿ ಮೋದಿ’ ಭೇಟಿ

ಭಾರತದಲ್ಲಿ Snapchat ಸರ್ವರ್ ಡೌನ್ : ಕಂಟೆಂಟ್ ‘ಅಪ್‌ಲೋಡ್’ ಸಮಸ್ಯೆ ಎದುರಿಸಿದ ಬಳಕೆದಾರರು

Share.
Exit mobile version