ದಾವಣಗೆರೆ: ಪ್ರತಿ ವರ್ಷ ಜನವರಿ ಅಥವಾ ಫೆಬ್ರವರಿ 2024ನೇ ಮಾಹೆಯಲ್ಲಿ ಎಲ್ಲಾ ಇಲಾಖಾ ನೌಕರರಿಂದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ವಾರ್ಷಿಕ ಸದಸ್ಯತ್ವ ಶುಲ್ಕ ರೂ.200/- (ಎರಡು ನೂರು ರೂಪಾಯಿ) ಗಳನ್ನು ಕಟಾಯಿಸಿರುವ ನೌಕರರ ವಿವರವನ್ನು ನೀಡಲು ತಿಳಿಸಿರುತ್ತಾರೆ.

ಜಿಲ್ಲಾ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚರ್ಚಿಸಿ ಚುನಾವಣೆ ನಡೆಸಲು ಅರ್ಹ ಮತದಾರರನ್ನು ನಿಗಧಿತ ನಮೂನೆಯಲ್ಲಿ ತಮ್ಮ ಇಲಾಖೆ ಹಾಗೂ ಆಧೀನ ಕಛೇರಿಗಳಲ್ಲಿ (ದಾವಣಗೆರೆ ತಾಲ್ಲೂಕು ವ್ಯಾಪ್ತಿಗೆ ಸಂಬಂಧಿಸಿದಂತೆ ಅರ್ಹ ಮತದಾರರ ಪಟ್ಟಿ ತಯಾರಿಸಲು ವಿವರವಾದ ಮಾಹಿತಿಯನ್ನು) ಭರ್ತಿ ಮಾಡಿ ಪ್ರತಿಯನ್ನು ಜಿಲ್ಲಾ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಮುದಾಯ ಭವನ, ನಿಜಲಿಂಗಪ್ಪ ಬಡಾವಣೆ, ರಿಂಗ್ ರೋಡ್ ಸರ್ಕಲ್, ದಾವಣಗೆರೆ ಜೂನ್ 21 ರೊಳÀಗಾಗಿ ಕಳುಹಿಸಬೇಕೆಂದು ಕ.ರಾ.ಸ.ನೌ.ಸಂಘದ ಜಿಲ್ಲಾಧ್ಯಕ್ಷರದ ವಿರೇಶ್.ಎಸ್.ಒಡೆಯನಪುರ ತಿಳಿಸಿದ್ದಾರೆ.

Share.
Exit mobile version