ಬೇಸಿಗೆಯಲ್ಲಿ ಫಿಟ್ ಆಗಿರಲು. ಮನೆಯಲ್ಲಿಯೇ ಇದನ್ನ ಟ್ರೈ ಮಾಡಿ ನೋಡಿ.. – Kannada News Now


Lifestyle

ಬೇಸಿಗೆಯಲ್ಲಿ ಫಿಟ್ ಆಗಿರಲು. ಮನೆಯಲ್ಲಿಯೇ ಇದನ್ನ ಟ್ರೈ ಮಾಡಿ ನೋಡಿ..

ಸ್ಪೆಷಲ್ ಡೆಸ್ಕ್ : ಇದು ಬೇಸಿಗೆ ಕಾಲ, ತುಂಬಾನೇ ಬಿಸಿ ಏರುತ್ತಿದೆ. ಈ ಸಮಯದಲ್ಲಿ ಫಿಟ್ ಆಗಿರುವುದು ಸಹ ಮುಖ್ಯವಾಗಿದೆ. ಅದಕ್ಕಾಗಿ ಸಾಕಷ್ಟು ನೀರು, ಆಹಾರ ಜೊತೆಗೆ ಒಂದಷ್ಟು ಎಕ್ಸರ್ ಸೈಜ್ ಮುಖ್ಯ. ಇಲ್ಲವಾದರೆ ಬಿಸಿಲಿನಿಂದ ಹಲವಾರು ಸಮಸ್ಯೆಗಳು ಕಾಡೋದು ಖಂಡಿತಾ. ಹಾಗಾದರೆ ಏನು ಮಾಡಬಹುದು ನೋಡೋಣ..

ಪವರ್ ಯೋಗ : ಜಗತ್ತಿನಲ್ಲೆಲ್ಲಾ ಪ್ರಸಿದ್ಧಿ ಹೊ೦ದಿದ ಪವರ್ ಯೋಗವನ್ನು ಮಾಡಿ. ಇದು ನಿಮ್ಮ ಹೃದಯಕ್ಕೆ ಒಳ್ಳೆಯದು ಮತ್ತು ನಿಮ್ಮ ದೇಹ ಉತ್ತಮ ಆಕಾರವನ್ನು ಪಡೆದುಕೊಳ್ಳಲು ನೆರವಾಗುತ್ತದೆ. ನಿಮ್ಮ ಬಾಹುಗಳು ಹಾಗೂ ಉದರದ ಸ್ನಾಯುಗಳೂ ಒಳ್ಳೆಯ ಆಕಾರ ಪಡೆಯುತ್ತದೆ.

ಝು೦ಬಾ : ಇದರಲ್ಲಿ ಕಾರ್ಡಿಯೋ ಮಸ್ಕುಲರ್ ಚಟುವಟಿಕೆ ಇದ್ದು ವಿವಿಧ ಭ೦ಗಿಯ ಡ್ಯಾನ್ಸ್ ಶೈಲಿಗಳಿವೆ. ಈ ವ್ಯಾಯಾಮದಿ೦ದ ತು೦ಬಾ ಕ್ಯಾಲೊರಿಗಳು ಕರಗುತ್ತವೆ. ಡ್ಯಾನ್ಸ್, ಮ್ಯೂಸಿಕ್ ಆಸಕ್ತರಿಗೆ ಈ ವ್ಯಾಯಾಮ ವರದಾನವಾಗಿದೆ.

ನೀರು ಕುಡಿಯಿರಿ : ಎಷ್ಟು ಸಾಧ್ಯವಾಗುತ್ತದೆಯೋ ಅಷ್ಟು ನೀರು ಕುಡಿಯಲು ಪ್ರಯತ್ನಿಸಿ. ಯಾಕೆಂದರೆ ಬಿಸಿಲಿನಿಂದ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುತ್ತ ಬರುತ್ತದೆ. ಇದರಿಂದ ಡೀಹೈಡ್ರೈಶನ್‌ ಉಂಟಾಗಿ ಹಲವಾರು ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ.

ಆರೋಗ್ಯಯುತ ಆಹಾರ : ರಸ್ತೆ ಬದಿಯ ತಿಂಡಿ, ತಿನಿಸುಗಳ ಸೇವಿಸಬೇಡಿ. ಇದರಿಂದ ಆರೋಗ್ಯದ ಮೇಲೆ ಹಾನಿಯಾಗುವ ಸಾಧ್ಯತೆ ಹೆಚ್ಚಿದೆ. ಸಾಧ್ಯವಾದಷ್ಟು ಮನೆಯಲ್ಲಿ ಮಾಡಿದ ಆಹಾರ ಪದಾರ್ಥಗಳನ್ನು ಸೇವನೆ ಮಾಡಿ. ಎಣ್ಣೆಯ ಅಂಶಗಳನ್ನು ಕಡಿಮೆ ಸೇವಿಸಿ. ಹಸಿರು ತರಕಾರಿಗಳನ್ನು ಯಥೇಚ್ಛವಾಗಿ ಸೇವನೆ ಮಾಡಿ.
error: Content is protected !!