ಸುಭಾಷಿತ :

Saturday, December 7 , 2019 7:01 PM

ಪ್ರಯಾಣ ಮಾಡುವಾಗ ವಾಂತಿ ಬರುತ್ತಾ..?ಹೀಗ್ ಮಾಡಿದ್ರೆ ವಾಂತಿ ಬರಲ್ಲ..!


Sunday, December 1st, 2019 4:49 pm


ಸ್ಪೆಷಲ್‌ಡೆಸ್ಕ್‌: ನೀವು ಬಸ್, ಕಾರಿನಲ್ಲಿ ಪ್ರಯಾಣ ಮಾಡುವಾಗಲೋ, ನಡೆದಾಡುವಾಗಲೋ ವಾಂತಿ ಬರುತ್ತಾ..? ಇದರಿಂದ ತುಂಬಾ ನೊಂದುಕೊಂಡಿದ್ದೀರಾ..? ಹಾಗಾದರೆ ಇನ್ನು ಮುಂದೆ ಚಿಂತೆ ಮಾಡಬೇಡಿ. ನೀವು ಹೀಗ್ ಮಾಡಿದ್ರೆ ವಾಂತಿ ಬರೋದೇ ಇಲ್ಲ.

ಹೌದು. ನೀವು ಪ್ರಯಾಣ ಮಾಡುವ ಅಥವಾ ನಡೆದಾಡುವ ಮುಂಚೆ ಈ ರೀತಿ ಮಾಡಿ. ನೀವು ಪ್ರಯಾಣಕ್ಕೂ ಮೊದಲು ಫ್ರೈ ಮಾಡಿದ ಆಹಾರವನ್ನು ಯಾವುದೇ ಕಾರಣಕ್ಕೂ ತಿನ್ನಬೇಡಿ. ಕೂಲ್ ಡ್ರಿಂಕ್ಸ್ ಸಹ ಕುಡಿಯಬೇಡಿ. ಯಾಕೆಂದರೆ ಇವನ್ನ ತೆಗೆದು ಕೊಂಡರೇ ಗ್ಯಾಸ್ಟ್ರಿಕ್ ಸಮಸ್ಯೆಗಳು ಉಂಟಾಗುತ್ತವೆ. ಅದೇ ರೀತಿ ಚೀಸ್ ಮತ್ತು ಮಾಂಸಾಹಾರ ಪದಾರ್ಥಗಳಿಂದಲೂ ದೂರ ಇರಬೇಕು. ಹಾಲು ಮತ್ತು ಹಾಲಿನ ಪದಾರ್ಥಗಳನ್ನೂ ಸಹ ತಿನ್ನಬೇಡಿ, ಕುಡಿಯಬೇಡಿ.

ಪ್ರಯಾಣ ಮಾಡುವಾಗ ಜತೆಗೆ ನಿಂಬೆಹಣ್ಣೊಂದನ್ನು ಇಟ್ಟುಕೊಂಡು ಹೋಗಿ. ಯಾಕೆಂದರೆ ಪ್ರಯಾಣ ಮಾಡುವಾಗ ನಿಂಬೆಹಣ್ಣಿನ ವಾಸನೆ ನೋಡುತ್ತಿದ್ದರೆ ವಾಂತಿ ಆಗಲ್ಲ. ವಾಂತಿ ಆಗುತ್ತದೆ ಎಂದು ಭಾವಿಸಬೇಡಿ. ವಾಂತಿ ಆಗುತ್ತದೆ ಎಂಬ ಆಲೋಚನೆಯನ್ನು ಪಕ್ಕಕ್ಕಿಟ್ಟು ಪುಸ್ತಕ ಓದಲು ಪ್ರಯತ್ನಿಸಿ. ಅಥವಾ ನಿಮ್ಮ ಸಹ ಪ್ರಯಾಣಿಕರ ಜತೆಗೆ ಮಾತನಾಡಿ. ಇದರಿಂದ ನಿಮ್ಮ ಪ್ರಯಾಣ ಸುಖಮಯವಾಗರುತ್ತದೆ. ಹಾಗೆಯೇ ಪ್ರಯಾಣದಲ್ಲಿ ವಾಂತಿ ಮಾಡುವ ಸಮಸ್ಯೆ ಇರುವವರು ಪ್ರತಿನಿತ್ಯ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಸ್ಪೂನ್ ಜೇನುತುಪ್ಪ ಸೇವಿಸಿ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions