ಸುಭಾಷಿತ :

Monday, March 30 , 2020 12:55 AM

ಬಿಗ್ ನ್ಯೂಸ್ : ರಾಜಸ್ಥಾನದ ರಥಂಬೋರ್ ರಾಷ್ಟ್ರೀಯ ಉದ್ಯಾನದಿಂದ 26 ಹುಲಿಗಳು ನಾಪತ್ತೆ.!


Friday, February 21st, 2020 8:48 pm

ಜೈಪುರ್ : ರಾಜಸ್ಥಾನದ ರಥಂಬೋರ್ ರಾಷ್ಟ್ರೀಯ ಉದ್ಯಾನದಿಂದ 26 ಹುಲಿಗಳು ಕಾಣೆಯಾಗಿರುವುದಾಗಿ ಕೇಂದ್ರ ಸರ್ಕಾರಕ್ಕೆ ನ್ಯಾಷನಲ್ ಟೈಗರ್ ಕನ್ಸರ್ ವೇಟಿವ್ ಅಥಾರಿಟಿ(ಎನ್ ಟಿ ಸಿ ಎ) ಪತ್ರದ ಮೂಲಕ ತಿಳಿಸಿದೆ. ಅಲ್ಲದೇ ಈ ಘಟನೆ ಬಗ್ಗೆ ಉನ್ನತ ತನಿಖೆ ನಡೆಸುವಂತೆ ಎನ್ ಟಿ ಸಿ ಎ ಸದಸ್ಯೆ ದಿಯಾ ಕುಮಾರಿ ಅವರು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಅಂದಹಾಗೇ ನ್ಯಾಷನಲ್ ಟೈಗರ್ ಕನ್ಸರ್ ವೇಟಿವ್ ಅಥಾರಿಟಿ ( ಎನ್ ಟಿ ಸಿ ಎ) ಸದಸ್ಯೆ ದಿಯಾ ಕುಮಾರಿ ಕೇಂದ್ರ ಸರ್ಕಾರಕ್ಕೆ ಬರೆದಿರುವ ಪತ್ರದಲ್ಲಿ, 26 ಹುಲಿಗಳು ರಾಜಸ್ಥಾನದ ರಥಂಬೋರ್ ರಾಷ್ಟ್ರೀಯ ಉದ್ಯಾನ ವನದಿಂದ ಕಾಣೆಯಾಗಿದ್ದಾವೆ. ಇದಕ್ಕೆ ಉದ್ಯನಾನದ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂಬುದಾಗಿ ಆರೋಪಿಸಿದ್ದಾರೆ.

ಇನ್ನೂ ಮುಂದುವರೆದು ಕೇಂದ್ರ ಸರ್ಕಾರಕ್ಕೆ ಬರೆದಿರುವ ಪತ್ರದಲ್ಲಿ, ಪ್ರತಿ ಉದ್ಯಾನವನದಲ್ಲಿ ಅಧಿಕಾರಿಗಳು ಪ್ರಾಣಿಗಳ ಹೆಚ್ಚಳದ ಬಗ್ಗೆ ಗಮನ ಕೊಟ್ರೇ, ಈ ಉದ್ಯಾನವನದಲ್ಲಿ ಮಾತ್ರವೇ ಪ್ರಾಣಿಗಳನ್ನು ಕಡಿಮೆ ಗೊಳಿಸುವತ್ತ ನಡೆದಿದೆ. ಇದು ಆಘಾತಕಾರಿ ಘಟನೆ ಎಂಬುದಾಗಿ ಪತ್ರದಲ್ಲಿ ತಿಳಿಸಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions