ಮದ್ಯ ನೀಡಲು ನಕಾರ : ಬಾರ್ ಮಾಲೀಕನ ಮೇಲೆ ಮೂವರಿಂದ ಮಾರಣಾಂತಿಕ ಹಲ್ಲೆ – Kannada News Now


State

ಮದ್ಯ ನೀಡಲು ನಕಾರ : ಬಾರ್ ಮಾಲೀಕನ ಮೇಲೆ ಮೂವರಿಂದ ಮಾರಣಾಂತಿಕ ಹಲ್ಲೆ

ರಾಯಚೂರು : ಕುಡಿಯಲು ಮದ್ಯ ನೀಡಲು ನಿರಾಕರಿಸಿದ ಬಾರ್ ಮಾಲೀಕನ ಮೇಲೆ ಮೂವರು ಕಿಡಿಗೇಡಿಗಳು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ದೇವದುರ್ಗದಲ್ಲಿ ನಡೆದಿದೆ. ಇಲ್ಲಿನ ಜಾಲಹಳ್ಳಿ ರಸ್ತೆಯಲ್ಲಿರುವ ಕ್ಷೀರಸಾಗರ ಬಾರ್ ಮತ್ತು ರೆಸ್ಟೋರೆಂಟ್ ಮಾಲೀಕ ರವೀಂದ್ರ ಅವರ ಮೇಲೆ ಮೂವರು ಹಲ್ಲೆ ನಡೆಸಿದ್ದು, ತೀವ್ರವಾಗಿ ಗಾಯಗೊಂಡಿರುವ ಬಾರ್ ಮಾಲೀಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ದೇವದುರ್ಗದ ಅಂಜಳ ಗ್ರಾಮದ ಮೂವರು ಮದ್ಯವ್ಯಸನಿಗಳು, ನಿನ್ನೆ ಮದ್ಯ ಮಾರಾಟದ ಅವಧಿ ಮುಗಿದ ಬಳಿಕವೂ ಬಾರ್ ಮುಂದೆ ಜಮಾಯಿಸಿ ಮದ್ಯ ನೀಡುವಂತೆ ಒತ್ತಾಯಿಸಿದ್ದಾರೆ. ಆದರೆ ಬಾರ್ ಪರವಾನಗಿ ಸಿಎಲ್-7 ಹೊಂದಿದ್ದು, ಸರ್ಕಾರ ಬಾರ್ ಮತ್ತು ರೆಸ್ಟೋರೆಂಟ್ ತೆರೆಯಲು ಅನುಮತಿ ನೀಡಿಲ್ಲ. ಹೀಗಾಗಿ ಬಾರ್ ಅಂಗಡಿ ತೆರೆಯುವುದಿಲ್ಲ ಎಂದು ಮಾಲೀಕ ರವೀಂದ್ರ ಹೇಳಿದ್ದಾರೆ. ಆದರೆ, ಈ ವೇಳೆಗಾಗಲೇ ಕಂಠ ಪೂರ್ತಿ ಕುಡಿದು ಬಂದ ಮೂವರು, ರವೀಂದ್ರ ಜೊತೆ ಮದ್ಯ ನೀಡುವಂತೆ ವಾಗ್ವಾದಕ್ಕೆ ಇಳಿದಿದ್ದಾರೆ. ಮದ್ಯ ಮಾರಾಟ ಮಾಡಲು ಸರ್ಕಾರ ಅನುಮತಿ ನೀಡಿಲ್ಲ. ಅಬಕಾರಿ ಇಲಾಖೆ ಬಾರ್‌ಗೆ ಸೀಲ್ ಹಾಕಿದೆ. ಹೀಗಾಗಿ ಮದ್ಯ ಮಾರಾಟ ಮಾಡುವುದಿಲ್ಲ ಎಂದು ರವೀಂದ್ರ ತಿಳಿಸಿದ್ದಾರೆ. ಆದರೆ, ಕಂಠಪೂರ್ತಿ ಕುಡಿದಿದ್ದ ಮೂವರು, ಮಾಲೀಕ ರವೀಂದ್ರಗೆ ಕಲ್ಲಿನಿಂದ ಹೊಡೆದಿದ್ದಾರೆ. ಹೀಗಾಗಿ ತೀವ್ರ ರಕ್ತಸ್ರಾವದಿಂದ ಗಾಯಗೊಂಡಿದ್ದ ರವೀಂದ್ರರನ್ನು  ಆಸ್ಪತ್ರೆಗೆ ದಾಖಲಿಸಿದ್ದು,  ಘಟನೆ ಹಿನ್ನೆಲೆಯಲ್ಲಿ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…
error: Content is protected !!