ಕೆಎನ್‌ಎನ್ ಡಿಜಿಟಲ್ ಡೆಸ್ಕ್ : ಕ್ಯಾನ್ಸರ್‌ನಿಂದ ಬಳಲುತ್ತಿದ್ದ ತಾಯಿಯ ಕೊನೆ ಆಸೆಯನ್ನು ಮಗ ಪೂರೈಸಿದ್ದಾನೆ. ಇದನ್ನು ಕಂಡ ತಾಯಿ ಭಾವೋದ್ವೇಗಕ್ಕೆ ಒಳಗಾಗಿರುವ ಹೃದಯಸ್ಪರ್ಶಿ ವಿಡಿಯೋ ವೈರಲ್ ಆಗಿದೆ.
ಈ ವಿಡಿಯೋವನ್ನು ಐಎಎಸ್ ಅಧಿಕಾರಿ ಅವನೀಶ್ ಶರಣ್ ಹಂಚಿಕೊಂಡಿದ್ದಾರೆ. ಇದರಲ್ಲಿ ತನ್ನ ತಾಯಿಯ ಕೊನೆಯ ಆಸೆಯನ್ನು ಪೂರೈಸುವ ಮಗನ ಕ್ಲಿಪ್ ಅನ್ನು ನೋಡಬಹುದು.
ಸ್ಟೆಫನಿ ನಾರ್ತ್ಕಾಟ್ ಎರಡು ವರ್ಷಗಳ ಹಿಂದೆ ಟರ್ಮಿನಲ್ ಕ್ಯಾನ್ಸರ್‌ಗೆ ತುತ್ತಾಗಿದ್ದಾರೆ. ಮಗನ ಪದವಿಯನ್ನು ನೋಡಬೇಕೆಂಬುದು ಆಕೆಯ ಕೊನೆಯ ಆಸೆಯಾಗಿತ್ತು. ಆದ್ದರಿಂದ, ಮಗ ಡಾಲ್ಟನ್ ಆ ಆಸೆಯನ್ನು ಅತ್ಯಂತ ವಿಶಿಷ್ಟ ರೀತಿಯಲ್ಲಿ ಪೂರೈಸಿದನು. ಸ್ನೇಹಿತರು, ಕುಟುಂಬ ಮತ್ತು ಅವರ ಶಿಕ್ಷಕರ ಸಹಾಯದಿಂದ, ಡಾಲ್ಟನ್ ತನ್ನ ತಾಯಿಗೆ ಆಸ್ಪತ್ರೆಯ ಪ್ರಾರ್ಥನಾ ಮಂದಿರದಲ್ಲಿ ಸಣ್ಣ ಪದವಿ ಸಮಾರಂಭವನ್ನು ಆಯೋಜಿಸಿದ್ದನು. ನಂತ್ರ ಕೊನೆಯಲ್ಲಿ ಅವನು ತನ್ನ ತಾಯಿಯೊಂದಿಗೆ ನೃತ್ಯ ಮಾಡುವುದನ್ನು ನೋಡಬಹುದು.
This MOTHER had just one FINAL WISH. pic.twitter.com/PVA9tK2X0p
— Awanish Sharan (@AwanishSharan) June 26, 2022
ಆನ್‌ಲೈನ್‌ನಲ್ಲಿ ಹಂಚಿಕೊಂಡ ನಂತರ ವೀಡಿಯೊವನ್ನು 90 ಸಾವಿರ ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.