ಸುಭಾಷಿತ :

Saturday, December 7 , 2019 7:00 PM

ನಿಮ್ಮ 7 ಸಮಸ್ಯೆಗಳಿಗೆ ಈ ಅ೦ಶದ ಕೊರತೆಯೇ ಕಾರಣ


Monday, December 2nd, 2019 9:25 am

ಸ್ಪೆಷಲ್‌ಡೆಸ್ಕ್‌: ಪ್ರೋಟೀನ್ ಆರೋಗ್ಯ ಮತ್ತು ಬೆಳವಣಿಗೆಯಲ್ಲಿ ಅತ್ಯಂತ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ.ಪ್ರೋಟೀನ್ ನಮ್ಮ ದೇಹಕ್ಕೆ ಬೇಕಾದ ಶಕ್ತಿಯನ್ನು ನೀಡುತ್ತದೆ.ಶರೀರವನ್ನು ಸುಸ್ಥಿಯಲ್ಲಿರಿಸಲು ಸಹಾಯ ಮಾಡುತ್ತದೆ. ಆದರೆ ನಮ್ಮ ದೇಹದಲ್ಲಿ ಪ್ರೋಟೀನ್ ಕಡಿಮೆಯಾದರೆ ಹಲವಾರು ಸಮಸ್ಯೆಗಳು ಉಂಟಾಗುತ್ತವೆ.

1.ಕೂದಲು ಮತ್ತು ತ್ವಚೆಯ ಸಮಸ್ಯೆ:
ತಲೆಬಾಚುವಾಗ ಕೂದಲು ಉದುರುವುದು ಸ್ವಾಭಾವಿಕ.ಆದರೆ ಸಾಮಾನ್ಯಕ್ಕಿ೦ತ ಹೆಚ್ಚಾಗಿ ಉದುರಿದರೆ ಅದು ಪ್ರೋಟೀನ್ ನ ಕೊರತೆ.ಇದರೊ೦ದಿಗೆ ಕೂದಲು ತೆಳುವಾಗುವುದು ,ಉಗುರಿನಲ್ಲಿ ಬಿಳಿ ಕಲೆಗಳು ಕ೦ಡು ಬ೦ದರೆ ಪ್ರೋಟೀನ್ ಅ೦ಶ ಕಡಿಮೆಯಾಗಿದೆ ಎಂದರ್ಥ.

2.ಮಸಲ್ಸ್ ಮತ್ತು ಗ೦ಟು ನೋವು:
ಪ್ರೋಟೀನ್ ಕಡಿಮೆಯಾಗುವುದರಿ೦ದ ಮಸಲ್ಸ್ ಮತ್ತು ಗ೦ಟು ಬೇನೆ ಕಾಣಿಸಿಕೊಳ್ಳುತ್ತದೆ. ಮಸಲ್ಸ್ ಬಿಲ್ಡ್ ಅಪ್ ಮಾಡಲು ಪ್ರೋಟೀನ್ ಅತ್ಯವಶ್ಯಕವಾಗಿದೆ.

3.ಗಾಯ ಲೇಟ್ ಆಗಿ ಮಾಸುತ್ತದೆ:
ಗಾಯ ಬೇಗ ಮಾಸಲು ಪ್ರೋಟೀನ್ ಅಗತ್ಯ.ಇದು ಕಡಿಮೆಯಾದರೆ ಹೊಸ ಸೆಲ್ಸ್ ,ಟಿಶ್ಯೂ ಮತ್ತು ಸ್ಕಿನ್ ಡೆವಲಪ್ ಮೆ೦ಟ್ ಆಗುವ ಸಾಧ್ಯತೆ ಕಡಿಮೆ.ಈ ಸಂದರ್ಭದಲ್ಲಿ ಗಾಯವಾಗಿದ್ದರೆ ಮಾಸುವುದು ಪ್ರೋಟೀನ್ ಕೊರತೆಯಿಂದ ತಡವಾಗುತ್ತದೆ.

4.ತೂಕ ಹೆಚ್ಚಾಗುವುದು.
ಪ್ರೋಟೀನ್ ನಮ್ಮ ದೇಹದಲ್ಲಿ ಹಸಿವೆ ಹೆಚ್ಚಿಸುವ ಹಾರ್ಮೋನ್ ಗಳನ್ನು ಕಡಿಮೆ ಮಾಡುತ್ತದೆ.ಇದರಿಂದ ಹಸಿವೆ ಹೆಚ್ಚಾಗಿ ತೂಕ ಹೆಚ್ಚಾಗುತ್ತದೆ.

5.ದೇಹದಲ್ಲಿ ನೀರು ತು೦ಬುವುದು
ಪ್ರೋಟೀನ್ ಕಡಿಮೆಯಾದರೆ ದೇಹದಲ್ಲಿ ನೀರು ಹೆಚ್ಚಾಗುತ್ತದೆ.

6.ಹೆಚ್ಚಾಗಿ ರೋಗಕ್ಕೆ ತುತ್ತಾಗುವುದು:
ರೋಗನಿರೋಧಕ ಸೆಲ್ ಗಳು ಪ್ರೋಟೀನ್ ನಿ೦ದ ಉ೦ಟಾಗುತ್ತದೆ. ಪ್ರೋಟೀನ್ ಕಡಿಮೆಯಾಗಿದ್ದರೆ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಇದರಿ೦ದ ವ್ಯಕ್ತಿ ಮತ್ತೆ ಮತ್ತೆ ರೋಗಕ್ಕೆ ತುತ್ತಾಗುತ್ತಾನೆ

7.ಯೋಚನೆ ಮಾಡುವ ಶಕ್ತಿ ಕಡಿಮೆ:
ಪ್ರೋಟೀನ್ ಕೊರತೆಯಿಂದ ಯೋಚನೆ ಮಾಡುವ ಶಕ್ತಿ ಕಡಿಮೆಯಾಗುತ್ತದೆ,ಆಗಾಗ ಗೊಂದಲಕ್ಕೆ ಒಳಪಡುತ್ತಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions