ಬೆಂಗಳೂರು: ಯೆಮೆನ್‌ ದೇಶದಲ್ಲಿ ಸಂಭವಿಸಿದ್ದ ಬಾಂಬ್‌ ಬ್ಲಾಸ್ಟ್‌ನಿಂದ ತನ್ನ ಬಲಗಾಲನ್ನು ಸಂಪೂರ್ಣ ಕಳೆದುಕೊಂಡರೂ, ಆ ಕಾಲಿನಲ್ಲಿ ಉಂಟಾಗುತ್ತಿದ್ದ “ಫ್ಯಾಂಟಮ್ ಲಿಂಬ್” ಎಂಬ ನೋವಿನಿಂದ ಬಳಲುತ್ತಿದ್ದ 22 ವರ್ಷದ ಯುವಕನಿಗೆ ಫೋರ್ಟಿಸ್‌ ಆಸ್ಪತ್ರೆ ವೈದ್ಯರ ತಂಡ ದೇಶದಲ್ಲೇ ಮೊದಲ ನ್ಯೂರೋಮಾಡ್ಯುಲೇಷನ್ ಕಾರ್ಯ ವಿಧಾನದ ಮೂಲಕ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದೆ.

ಫೋರ್ಟಿಸ್‌ ಆಸ್ಪತ್ರೆಯ ನರಶಸ್ತ್ರಚಿಕಿತ್ಸಾ ವಿಭಾಗದ ಹೆಚ್ಚುವರಿ ನಿರ್ದೇಶಕ ಡಾ. ರಘುರಾಮ್ ಜಿ. ಅವರ ತಂಡ ಈ ಶಸ್ತ್ರಚಿಕಿತ್ಸೆ ನಡೆಸಿದೆ. ಈ ಕುರಿತು ಮಾತನಾಡಿದ ಅವರು, ೨ ವರ್ಷದ ಹಿಂದೆ ಯೆಮೆನ್‌ ದೇಶದಲ್ಲಿ ಸಂಭವಿಸಿದ್ದ ಬಾಂಬ್‌ ಬ್ಲಾಸ್ಟ್‌ನಿಂದ 22 ವರ್ಷದ ಯಾಸೀರ್ (ಹೆಸರು ಬದಲಾಯಿಸಲಾಗಿದೆ) ಎಂಬ ಯುವಕ ತನ್ನ ಬಲಗಾಲನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದರು. ಆದರೆ, ಆ ಬಲಗಾಲು ಹೋದ ಬಳಿಕವೂ ತುಂಡಾದ ಭಾಗದಲ್ಲಿ ಫ್ಯಾಂಟಮ್ ಲಿಂಬ್ ಎಂಬ ನೋವು ಆ ಯುವನನ್ನು ಕಾಡುತ್ತಿತ್ತು. ಫ್ಯಾಂಟಮ್‌ ಲಿಂಬ್‌ ಎಂದರೆ ಅನುಭವಿಸಲು ಅಸಾಧ್ಯವಾದ ನೋವನ್ನೇ ಫ್ಯಾಂಟಮ್‌ ಲಿಂಬ್‌ ಎನ್ನಲಾಗುತ್ತದೆ.

ಸಂಪೂರ್ಣವಾಗಿ ಕಾಲಿನ ಗಾಯ ವಾಸಿಯಾಗಿದ್ದರೂ ಸಹ ಕಟ್ಟಾದ ಜಾಗದಲ್ಲಿ ಬಟ್ಟೆ ತಗುಲಿದರೂ, ಗಾಳಿ ಸೋಕಿದರೂ ಸಹ ಅವರಿಗೆ ಅತಿಯಾದ ನೋವು ಕಾಡುತ್ತಿತ್ತು. ಈ ನೋವಿಗೆ ದೇಶ-ವಿದೇಶದೆಲ್ಲೆಡೆ ಚಿಕಿತ್ಸೆಗೆ ಆಸ್ಪತ್ರೆಗಳನ್ನು ಸುತ್ತಿದರೂ ಸೂಕ್ತ ಚಿಕಿತ್ಸೆ ಲಭ್ಯವಾಗಲಿಲ್ಲ. ನಂತರ ಅವರು ಬನ್ನೇರುಘಟ್ಟದ ಫೋರ್ಟಿಸ್‌ ಆಸ್ಪತ್ರೆಗೆ ದಾಖಲಾದರು, ಇವರ ನೋವಿನ ತೀವ್ರತೆಯನ್ನು ಪರೀಕ್ಷಿಸಿದೆವು. ಇವರಿಗೆ “ನ್ಯೂರೋಮಾಡ್ಯುಲೇಷನ್ ಪ್ರೊಸೀಜರ್” ಮೂಲಕ ಶಸ್ತ್ರಚಿಕಿತ್ಸೆ ನಡೆಸಿದೆವು. ಇದು ದೇಶದಲ್ಲೇ ಮೊದಲ ಬಾರಿಗೆ ನಡೆಸಿದ ಶಸ್ತ್ರಚಿಕಿತ್ಸೆಯಾಗಿದ್ದು, ಯಶಸ್ವಿಯಾಗಿದೆ ಎಂದು ವಿವರಿಸಿದರು.

ಈ ಶಸ್ತ್ರಚಿಕಿತ್ಸೆಯಾದ ಒಂದು ವಾರದಲ್ಲಿಯೇ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು, ಸಾಮಾನ್ಯವಾಗಿ ಕೆಲವರಿಗೆ ಕೆಲವು ಅಂಗ ಕಳೆದುಕೊಂಡ ಬಳಿಕ ಹಾಗೂ ಗಾಯ ಮಾಗಿದ ಮೇಲೂ ಸಹ ಆ ಭಾಗದಲ್ಲಿ ಚುಚ್ಚಿದ ರೀತಿಯಲ್ಲಿ ನೋವು ಹೆಚ್ಚಾಗಿ ಕಾಡುತ್ತದೆ. ಇದನ್ನು ಸಹಿಸಿಕೊಂಡೇ ಜೀವನ ನಡೆಸುತ್ತಿರುತ್ತಾರೆ. ಇದಕ್ಕೆ ಇದೀಗ ಸೂಕ್ತ ಶಸ್ತ್ರಚಿಕಿತ್ಸೆ ಲಭ್ಯವಿದೆ ಎಂದು ಹೇಳಿದರು.

ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಚುನಾವಣೆ ವೇಳೆ ಅಕ್ರಮ ಮತದಾನ : MLC ಎಂಟಿಬಿ ನಾಗರಾಜ್ ಗಂಭೀರ ಆರೋಪ

Teacher Jobs: ‘ಶಿಕ್ಷಕರ ಹುದ್ದೆ’ ಆಕಾಂಕ್ಷಿಗಳೇ ಗಮನಿಸಿ: ಈ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

Share.
Exit mobile version