ಬೆಂಗಳೂರು: ಜಾತಿ, ಧರ್ಮಗಳನ್ನು ( Caste, religion ) ಮೀರಿದ್ದು ಮಾನವೀಯತೆ. ನಮ್ಮೆಲ್ಲರ ಜಾತಿ ಒಂದೇ. ಅದುವೇ ಮನುಷ್ಯ ಜಾತಿ ಎಂದು ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ( MLA Zameer Ahamad Khan ) ಅಭಿಪ್ರಾಯ ಪಟ್ಟರು.
ತಾಳಿ ಕಟ್ಟುವಾಗಲೇ ವಧು ಕುಸಿದು ಬಿದ್ದು ಹೈಡ್ರಾಮ: ಆಸ್ಪತ್ರೆಗೆ ಕರೆದೊಯ್ಯೋಕೆ ಹೋದ್ರೇ.. ಹೇಳಿದ್ದೇನ್ ಗೊತ್ತಾ.?
ಪಾದರಾಯನಪುರದ ಅಲ್ ಅಜರ್ ಫೌಂಡೇಶನ್ ಶಾಲೆಯಲ್ಲಿ ಇಂದು ಡಾ.ಅಂಬೇಡ್ಕರ್ ಜಯಂತಿ ಮತ್ತು ಈದ್ ಮಿಲಾದ್ ಪ್ರಯುಕ್ತ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ, ಬಿಬಿಎಂಪಿಯ ಪೌರ ಕಾರ್ಮಿಕರಿಗೆ ತಮ್ಮ ಕೈಯ್ಯಾರೆ ಭೋಜನ ಉಣಬಡಿಸಿದ ಅವರು, ದಲಿತ ಮತ್ತು ಇಸ್ಲಾಂ ಧರ್ಮ ಗುರುಗಳ ತಟ್ಟೆಯಿಂದ ತುತ್ತು ತೆಗೆದುಕೊಂಡು ಸ್ವೀಕರಿಸಿ, ನಾವೆಲ್ಲರೂ ಮನುಷ್ಯ ಜಾತಿಗೆ ಸೇರಿದವರು ಎಂದರು.
ನೀವು ಲ್ಯಾಪ್ ಟಾಪ್, ಮೊಬೈಲ್ ರಿಪೇರಿಗೆ ಕೊಡ್ತಾ ಇದ್ದೀರಾ.? ಅದಕ್ಕೂ ಮುನ್ನಾ ಈ ಸುದ್ದಿ ಓದಿ.!
ಮನುಷ್ಯರಾಗಿ ಬಾಳುವುದೇ ನಿಜವಾದ ಧರ್ಮ. ಮನುಷ್ಯ ಸಂಬಂಧಗಳಿಗೆ ಜಾತಿ, ಧರ್ಮ ಎಂದಿಗೂ ಅಡ್ಡಿಯಾಗದು. ನಾವೆಲ್ಲರೂ ಸಹೋದರರಂತೆ ಬಾಳಬೇಕು ಎಂದು ಹೇಳುವ ಮೂಲಕ ಸಹೋದರತ್ವದ ಸಂದೇಶ ಸಾರಿದರು.
ಇದೇ ಸಂದರ್ಭದಲ್ಲಿ ದಲಿತ ನಾರಾಯಣ ಸ್ವಾಮೀಜಿಗೆ ಕೈತುತ್ತು ತಿನ್ನಿಸಿದಂತ ಶಾಸಕ ಜಮೀರ್ ಅಹ್ಮದ್ ಖಾನ್, ಅವರ ಬಾಯಿಯಲ್ಲಿನ ಎಂಜಲು ಅನ್ನವನ್ನು ತಾವು ತಿಂದು, ಇದು ಕಣ್ರೀ ಸಹೋದರತ್ವ.. ಬಂಧುತ್ವ ಎಂಬುದಾಗಿ ಹೇಳುವ ಮೂಲಕ, ಸಹೋದರತೆಯ ತತ್ವವನ್ನು ಸಾರಿ ಗಮನ ಸೆಳೆದರು. ಆ ವೀಡಿಯೋ ಈ ಕೆಳಗಿದೆ.. ನೀವು ನೋಡಿ..