ಬೆಂಗಳೂರು: ಮೈಸೂರು ಬ್ಯಾಂಕ್ ( Mysore Bank ) ಸ್ಥಾಪನೆ ಮಾಡಿದ್ದು ಯಾರು? ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಥಾಪಿಸಿದ್ರು. ಈಗ ಮೈಸೂರು ಬ್ಯಾಂಕ್ ಇದ್ಯಾ? ಕೆನರಾ, ಸಿಂಡಿಕೇಟ್, ವಿಜಯಾ ಬ್ಯಾಂಕ್ ಇದ್ಯಾ? ಈ ನಾಲ್ಕೂ ಬ್ಯಾಂಕುಗಳನ್ನ ಬೇರೆಯವಕ್ಕೆ ಸೇರಿಸಿದ್ದಾರೆ. 317 ಕೋಟಿ ವಹಿವಾಟು ನಡೆಯುತ್ತೆ. 75 ಸಾವಿರ ಸಿಬ್ಬಂದಿಗಳು ಇಲ್ಲಿದ್ದಾರೆ. ಈ ನಾಲ್ಕು ಬ್ಯಾಂಕ್ ಕನ್ನಡಿಗರಿಗೆ ಕೆಲಸ ಕೊಡ್ತಿದ್ವು. ಈಗ ಕನ್ನಡಿಗರಿಗೆ ಉದ್ಯೋಗ ಕೊಡ್ತಿಲ್ಲ. ಬೇರೆ ಬ್ಯಾಂಕ್ ಗಳು ದಿವಾಳಿಯಾಗಿದ್ದವು. ಅವುಗಳಿಗೆ ಈ ಬ್ಯಾಂಕ್ ಮರ್ಜ್ ಮಾಡಿದ್ದಾರೆ. ಮರ್ಜ್ ಮಾಡೋದಕ್ಕೆ ಕಾರಣವೇನು. ಕರ್ನಾಟಕಕ್ಕೆ ಮಾಡಿರುವ ದೊಡ್ಡ ಅನ್ಯಾಯ. ಈ ಅನ್ಯಾಯ ಮಾಡಿದ್ದು ಮಿಸ್ಟರ್ ನರೇಂದ್ರ ಮೋದಿ ( Narendra Modi ) ಎಂಬುದಾಗಿ ಮಾಜಿ ಸಿಎಂ ಸಿದ್ಧರಾಮಯ್ಯ ( Ex CM Siddaramaiah ) ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದರು.
ಪ್ರಧಾನಿ ಪ್ರವಾಸ ಹಿನ್ನೆಲೆಯಲ್ಲಿ ಶಿಕ್ಷಣ ಸಂಸ್ಥೆಗಳಿಗೆ ರಜೆ ಖಂಡನೀಯ – ಡಿ.ಕೆ ಶಿವಕುಮಾರ್
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಕೋವಿಡ್ ವೇಳೆ ಆಕ್ಸಿಜನ್ ಕೊಟ್ರಾ? ಹೈಕೋರ್ಟ್ ಹೇಳಿದ ಮೇಲೆ ಆಕ್ಸಿಜನ್ ಕೊಟ್ರು? ಹೈಕೋರ್ಟ್ ಹೇಳಿದ್ರೂಆಕ್ಸಿಜನ್ ಕೊಟ್ಟಿರಲಿಲ್ಲ. ಸುಪ್ರೀಂಕೋರ್ಟ್ ಚಾಟಿಬೀಸಿದ ಮೇಲೆ ಕೊಟ್ರು. ಆಕ್ಸಿಜನ್ ಇಲ್ಲದೆ ಸಾವಿರಾರು ಜನ ಸತ್ರು. ಚಾಮರಾಜನಗರದಲ್ಲಿ 36 ಜನ ಸಾವನ್ನಪ್ಪಿದ್ರು. ರಾಜ್ಯದ ಬೇರೆಡೆಯೂ ಆಕ್ಸಿಜನ್ ಇಲ್ಲದೆ ಸತ್ರು. ಇದಕ್ಕೆಲ್ಲ ಯಾರು ಕಾರಣ ಇದೇ ಮೋದಿಯವರು ಎಂದು ಕಿಡಿಕಾರಿದರು.
ಆಕ್ಸಿಜನ್ ಕೊಡೋಕೆಆಗದವರು ಈಗ ಯೋಗ ಮಾಡೋಕೆ ಬಂದಿದ್ದಾರೆ. ಆಕ್ಸಿಜನ್ ಬಗ್ಗೆ ಪ್ರಧಾನಿಯವರು ಹೇಳಬೇಕು. 40% ಕಮೀಷನ್ ಬಗ್ಗೆ ದೂರು ಕೊಟ್ರು. ಗುತ್ತಿಗೆದಾರರ ಸಂಘ ಪ್ರಧಾನಿಗೆ ದೂರು ನೀಡಿತ್ತು. ಯಾಕೆಚೌಕಿದಾರ್ ಇಲ್ಲಿಯವರೆಗೆ ಉತ್ತರ ಕೊಟ್ಟಿಲ್ಲ. ಸಬರಬನ್ ಯೋಜನೆ ಹೇಳುತ್ತಲೇ ಬರ್ತಿದ್ದಾರೆ. ಅನಂತ್ ಕುಮಾರ್ ಕಾಲದಿಂದ ಹೇಳ್ತಿದ್ದಾರೆ. ಆದರೆ ಯೋಜನೆ ಮಾತ್ರ ಏನೂ ಆಗಿಲ್ಲ. ಮೋದಿಯವರಿಂದ ರಾಜ್ಯಕ್ಕೆದೊಡ್ಡ ಅನ್ಯಾಯವಾಗಿದೆ. ಅವರ ಸರ್ಕಾರ ಕರ್ನಾಟಕದಲ್ಲಿದೆ. ಲೂಟಿ ಹೊಡೆಯುತ್ತಿದೆ, ಭ್ರಷ್ಟಾಚಾರ ಹೆಚ್ಚಾಗಿದೆ. ಇದಕ್ಕೆಲ್ಲ ಪ್ರಧಾನಿಯವರು ಅನುಮತಿ ಕೊಟ್ಟಿದ್ದಾರಾ? ಈ ನಮ್ಮ ಪ್ರಶ್ನೆಗೆ ಅವರು ಉತ್ತರ ಕೊಡಲಿ ಎಂದರು.
ವಿವಿಧ ಯೋಜನೆಗಳಡಿ ಸ್ವ ಉದ್ಯೋಗ ಕೈಗೊಳ್ಳಲು ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ
ನಿರುದ್ಯೋಗದ ಬಗ್ಗೆ ಇಲ್ಲಿಮಾತನಾಡಲ್ಲ. ಬೆಲೆ ಏರಿಕೆ ಬಗ್ಗೆ ಮತ್ತೊಮ್ಮೆ ಹೇಳ್ತೇನೆ. ಈಗ ಕೇಳಿರುವ ಪ್ರಶ್ನೆಗೆ ಉತ್ತರ ಕೊಡಲಿ. ನೀವು ಕೇಳಬೇಕು, ನಾನುಕೇಳ್ತೇನೆ ಎಂದು ಹೇಳಿದರು.