ಕೆಎನ್ಎನ್ಡಿಜಿಟಲ್ ಡೆಸ್ಕ್ : ಕಳೆದ ವರ್ಷದಿಂದ ಆರ್ಥಿಕ ಹಿಂಜರಿತವನ್ನ ಪ್ರಪಂಚದಾದ್ಯಂತ ಚರ್ಚಿಸಲಾಗುತ್ತಿದೆ. ಒಂದರ ನಂತರ ಒಂದರಂತೆ ಅನೇಕ ಅಂತರರಾಷ್ಟ್ರೀಯ ಏಜೆನ್ಸಿಗಳು ಮತ್ತು ವಿಶ್ಲೇಷಕರು ಆರ್ಥಿಕ ಹಿಂಜರಿತದ ಬಗ್ಗೆ ಎಚ್ಚರಿಕೆ ನೀಡುತ್ತಿದ್ದಾರೆ. ಈಗ ಈ ಭಯ ನಿಜವಾಗ್ತಿದ್ದು, ದೊಡ್ಡ ಜಾಗತಿಕ ಆರ್ಥಿಕತೆಗಳನ್ನ ಆವರಿಸಲು ಪ್ರಾರಂಭಿಸಿದೆ. ಇದರರ್ಥ ಈಗ ಆರ್ಥಿಕ ಹಿಂಜರಿತ ಕೇವಲ ಆತಂಕ ಅಥವಾ ಊಹಾಪೋಹವಲ್ಲ, ವಾಸ್ತವವಾಗಿದೆ.
ಮೊದಲ ಬಲಿಪಶುವಾಯ್ತು ಜರ್ಮನಿ.!
ಈ ಬಾರಿ ಜಾಗತಿಕ ಆರ್ಥಿಕ ಹಿಂಜರಿತವು ಯುರೋಪಿನ ಅತಿದೊಡ್ಡ ಆರ್ಥಿಕತೆ ಜರ್ಮನಿಯನ್ನ ಮೊದಲ ಬಲಿಪಶುವನ್ನಾಗಿ ಮಾಡಿದೆ. ಜರ್ಮನಿಯ ಅಂಕಿ-ಅಂಶ ಕಚೇರಿ ಗುರುವಾರ ಆರ್ಥಿಕತೆ ಮತ್ತು ಆರ್ಥಿಕ ಬೆಳವಣಿಗೆಯ ಡೇಟಾವನ್ನ ಬಿಡುಗಡೆ ಮಾಡಿದೆ. ಅಂಕಿ-ಅಂಶಗಳ ಪ್ರಕಾರ, ಮಾರ್ಚ್ 2023ರ ತ್ರೈಮಾಸಿಕದಲ್ಲಿ ಜರ್ಮನಿಯ GDP ಶೇಕಡಾ 0.3ರಷ್ಟು ಕುಸಿದಿದೆ. ಇದಕ್ಕೂ ಮೊದಲು, ಕಳೆದ ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಅಂದ್ರೆ ಅಕ್ಟೋಬರ್’ನಿಂದ ಡಿಸೆಂಬರ್ 2022ರ ಅವಧಿಯಲ್ಲಿ ಜರ್ಮನಿಯ GDP ಶೇಕಡಾ 0.5ರಷ್ಟು ಕುಸಿದಿದೆ.
ಆರ್ಥಿಕ ಹಿಂಜರಿತ ಎಂದರೇನು.?
ಜನವರಿಯಿಂದ ಮಾರ್ಚ್ 2023ರ ಅವಧಿಯಲ್ಲಿ ಆರ್ಥಿಕತೆಯ ಸಂಕೋಚನದ ದರವು ಕಳೆದ ವರ್ಷದ ಕೊನೆಯ ತ್ರೈಮಾಸಿಕಕ್ಕಿಂತ ಕಡಿಮೆಯಿರಬಹುದು. ಆದ್ರೆ, ಇದು ಅಪಾಯಕಾರಿ. ಯಾಕಂದ್ರೆ, ಈ ರೀತಿಯಾಗಿ ಜರ್ಮನಿಯ ಆರ್ಥಿಕತೆಯು ಈಗ ಅಧಿಕೃತವಾಗಿ ಹಿಂಜರಿತದ ಹಿಡಿತದಲ್ಲಿದೆ. ಅರ್ಥಶಾಸ್ತ್ರದ ಜನಪ್ರಿಯ ವ್ಯಾಖ್ಯಾನದ ಪ್ರಕಾರ, ಆರ್ಥಿಕತೆಯು ಸತತ ಎರಡು ತ್ರೈಮಾಸಿಕಗಳಲ್ಲಿ ಕುಗ್ಗಿದರೆ, ಸಂಬಂಧಪಟ್ಟ ಆರ್ಥಿಕತೆಯು ಆರ್ಥಿಕ ಹಿಂಜರಿತದ ಬಲಿಪಶುವಾಗಿದೆ ಎಂದು ಹೇಳಲಾಗುತ್ತದೆ.
ಹಿನ್ನಡೆ ಅನುಭವಿಸುತ್ತಲೇ ಇದೆ ಆರ್ಥಿಕತೆ.!
ಕಳೆದ ಕೆಲವು ವರ್ಷಗಳಿಂದ ಇಡೀ ಜಗತ್ತು ಒಂದರ ಹಿಂದೆ ಒಂದರಂತೆ ಹಲವಾರು ಹಿನ್ನೆಡೆಗಳನ್ನ ಎದುರಿಸುತ್ತಿದೆ. ಮೊದಲನೆಯದಾಗಿ, ಕೊರೊನಾ ಸಾಂಕ್ರಾಮಿಕದಿಂದ ಆರ್ಥಿಕ ಪ್ರಗತಿ ಹಳಿತಪ್ಪಿತು. ನಂತ್ರ ಯುಎಸ್-ಚೀನಾ ವ್ಯಾಪಾರ ಯುದ್ಧ, ಪೂರೈಕೆ ಸರಪಳಿ ಅಡಚಣೆಗಳು ಮತ್ತು ಚಿಪ್ ಕೊರತೆಗಳು ಜಗತ್ತನ್ನ ದಂಗುಬಡಿಸಿದವು. ಈ ಸಮಸ್ಯೆಗಳ ಪರಿಣಾಮವು ಇನ್ನೂ ಕಡಿಮೆಯಾಗಿಲ್ಲ, ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧವು ಪೂರ್ವ ಯುರೋಪಿನಲ್ಲಿ ಪ್ರಾರಂಭವಾಯಿತು. ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧವು ಯುರೋಪಿಯನ್ ಆರ್ಥಿಕತೆಗಳಿಗೆ, ವಿಶೇಷವಾಗಿ ಜರ್ಮನಿಗೆ ಸಾಕಷ್ಟು ಹಾನಿಯನ್ನುಂಟುಮಾಡಿದೆ.
ವಿಪಕ್ಷಗಳ ಬಹಿಷ್ಕಾರದ ನಡುವೆಯೇ ‘ಸಂಸತ್ ಭವನ’ ಉದ್ಘಾಟನೆಗೆ 24 ಪಕ್ಷಗಳು ಭಾಗಿ, JDS-BSP ಕೂಡ ಸೇರ್ಪಡೆ
“ನೂತನ ಸಂಸತ್ ಭವನ ದೇಶದ ಆಸ್ತಿ, ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗ್ತೇನೆ” ; ಮಾಜಿ ಪ್ರಧಾನಿ ಹೆಚ್. ಡಿ ದೇವೇಗೌಡ
JOB ALERT : ಉದ್ಯೋಗಾಂಕ್ಷಿಗಳ ಗಮನಕ್ಕೆ : ಮೇ 29 ರಂದು ಉಡುಪಿಯಲ್ಲಿ ‘ಉದ್ಯೋಗ ಮೇಳ ಆಯೋಜನೆ