ತಿರುಪತಿ ತಿಮ್ಮಪ್ಪನ ಭರ್ಜರಿ ಕಲೆಕ್ಷನ್ : ಒಂದೇ ದಿನದಲ್ಲಿ ದೇವಾಲಯಕ್ಕೆ ಹರಿದು ಬಂದ ಆದಾಯವೆಷ್ಟು ಗೊತ್ತೇ..? – Kannada News Now


India

ತಿರುಪತಿ ತಿಮ್ಮಪ್ಪನ ಭರ್ಜರಿ ಕಲೆಕ್ಷನ್ : ಒಂದೇ ದಿನದಲ್ಲಿ ದೇವಾಲಯಕ್ಕೆ ಹರಿದು ಬಂದ ಆದಾಯವೆಷ್ಟು ಗೊತ್ತೇ..?

ತಿರುಪತಿ :  ಕೊರೊನಾ ಲಾಕ್‌ಡೌನ್ ಬಳಿಕ ತಿರುಪತಿ ತಿಮ್ಮಪ್ಪ ಭಕ್ತರಿಗೆ ದರ್ಶನ ನೀಡಲು ಆರಂಭ ಮಾಡಿದ್ದು, ದೇವಾಲಯದ ಬಾಗಿಲು ತೆಗೆದ ಒಂದೇ ದಿನದಲ್ಲಿ ತಿರುಮಲ ತಿರುಪತಿ ದೇವಸ್ಥಾನಕ್ಕೆ 1 ಕೋಟಿ ರೂ ಕಲೆಕ್ಷನ್ ಆಗಿದೆ.

ಟಿಟಿಡಿ ಅಧಿಕಾರಿಗಳ ಮಾಹಿತಿಯ ಪ್ರಕಾರ ಒಂದೇ ದಿನ ದೇಗುಲದ ಹುಂಡಿಯಲ್ಲಿ ರೂ.1.02 ಕೋಟಿ ಸಂಗ್ರಹವಾಗಿರುವುದಾಗಿ ತಿಳಿದು ಬಂದಿದೆ.

ಹೌದು. ಕೊರೊನಾ ಸೋಂಕಿನ ಹಿನ್ನೆಲೆ ಹಿನ್ನೆಲೆಯಲ್ಲಿ ದೇಗುಲಕ್ಕೆ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಇದೀಗ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಶನಿವಾರ ಒಂದೇ ದಿನ ದೇಗುಲಕ್ಕೆ 13,486 ಮಂದಿ ಭಕ್ತರು ಭೇಟಿ ನೀಡಿದ್ದಾರೆಂದು ದೇವಾಲಯದ ಆಡಳಿತ ಮಂಡಳಿ ಮಾಹಿತಿ ನೀಡಿದೆ.
error: Content is protected !!