ನವದೆಹಲಿ: ಭಾರತ ಸರಕಾರಕ್ಕೆ ʻಹಿಂದೂ ರಾಷ್ಟ್ರೀಯವಾದಿʼ ಎಂಬ ವಿಶೇಷಣಗಳನ್ನು ಮೀಸಲಿಟ್ಟಿರುವ ವಿದೇಶಿ ಪತ್ರಿಕೆಗಳಿಗೆ ವಿದೇಶಾಂಗ ಸಚಿವ ಎಸ್ ಜೈಶಂಕರ್(S Jaishankar) ಶನಿವಾರ ಛೀಮಾರಿ ಹಾಕಿದ್ದಾರೆ.
”ಬಹುತೇಕ ವಿದೇಶಿ ಪತ್ರಿಕೆಗಳನ್ನು ಓದಿದರೆ ಅದರಲ್ಲಿ ಭಾರತ ಸರ್ಕಾರವನ್ನು ʻಹಿಂದೂ ರಾಷ್ಟ್ರವಾದಿ ಸರ್ಕಾರʼ ಎಂಬ ಪದಗಳನ್ನು ಬಳಸುತ್ತಾರೆ. ಆದರೆ, ಅಮೆರಿಕ, ಯೂರೋಪ್ ರಾಷ್ಟ್ರಗಳ ಸರ್ಕಾರಗಳನ್ನು ಅವರೇಕೆ ʻಕ್ರಿಶ್ಚಿಯನ್ ನ್ಯಾಶನಲಿಸ್ಟ್ʼ ಎಂದು ಕರೆಯುವುದಿಲ್ಲ ಎಂದು ನಮಗೆ ತಿಳಿಯುತ್ತಿಲ್ಲ ಎಂದಿದ್ದಾರೆ.
ಈ ವಿಶೇಷಣಗಳು ನಮಗೆ ಮೀಸಲಾಗಿವೆಯೇ?. ನಮ್ಮ ದೇಶ ಇಡೀ ವಿಶ್ವಕ್ಕಾಗಿ ಹೆಚ್ಚಿನದನ್ನು ಮಾಡಲು ಬಯಸುತ್ತದೆ ಎಂಬುದು ಅವರಿಗೆ ಅರ್ಥವೇ ಆಗುತ್ತಿಲ್ಲ ಎಂದು ಜೈಶಂಕರ್ ಕಿಡಿಕಾರಿದ್ದಾರೆ.
ಪುಣೆಯಲ್ಲಿ ತಮ್ಮ ಇಂಗ್ಲಿಷ್ ಪುಸ್ತಕ “ದಿ ಇಂಡಿಯಾ ವೇ: ಸ್ಟ್ರಾಟಜೀಸ್ ಫಾರ್ ಆನ್ ಅನ್ಸರ್ಟೈನ್ ವರ್ಲ್ಡ್” ಬಿಡುಗಡೆ ಕಾರ್ಯಕ್ರಮದಲ್ಲಿ ಈ ಮಾತುಗಳನ್ನಾಡಿದ್ದಾರೆ. ಈ ಪುಸ್ತಕವನ್ನು ಮರಾಠಿಗೆ ‘ಭಾರತ್ ಮಾರ್ಗ’ ಎಂದು ಅನುವಾದಿಸಲಾಗಿದೆ. ಜೈಶಂಕರ್ ಅವರ ಪುಸ್ತಕದ ಮರಾಠಿ ಆವೃತ್ತಿಯನ್ನು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಬಿಡುಗಡೆ ಮಾಡಿದರು.
BIG NEWS : ʻಜೀನ್ಸ್ ಪ್ಯಾಂಟ್ʼ ಧರಿಸಿ ವಿಚಾರಣೆಗೆ ಬಂದಿದ್ದ ವಕೀಲನನ್ನು ಹೊರ ಕಳುಹಿಸಿದ ನ್ಯಾಯಾಧೀಶರು!
BIG NEWS : ʻಜೀನ್ಸ್ ಪ್ಯಾಂಟ್ʼ ಧರಿಸಿ ವಿಚಾರಣೆಗೆ ಬಂದಿದ್ದ ವಕೀಲನನ್ನು ಹೊರ ಕಳುಹಿಸಿದ ನ್ಯಾಯಾಧೀಶರು!