ಕೆಎನ್ಎನ್ ಡಿಜಿಟಲ್ ಡೆಸ್ಕ್ : ಕೂದಲು ಉದುರಲು ಹಲವು ಕಾರಣಗಳಿವೆ. ಮಾಲಿನ್ಯ, ಕಳಪೆ ಆಹಾರ, ಬದಲಾಗುತ್ತಿರುವ ಜೀವನಶೈಲಿಯಿಂದ ನೆತ್ತಿ ಸಂಬಂಧಿತ ಸಮಸ್ಯೆಗಳು ಸಾಮಾನ್ಯವಾಗಿದೆ. ಕೂದಲು ಉದುರುವುದನ್ನು ತಡೆಯಲು ಮಾರುಕಟ್ಟೆಯಲ್ಲಿ ಸಾಕಷ್ಟು ಉತ್ಪನ್ನಗಳಿವೆ. ಇವು ಕೂದಲಿನ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಾಗಿಸಬಹುದು. ಅದರ ಬದಲು ಹೋಮ್ ಹೇರ್ ಪ್ಯಾಕ್ ಬಳಸಬಹುದು. ಇದು ಕೂದಲಿಗೆ ಯಾವುದೇ ಅಡ್ಡ ಪರಿಣಾಮಗಳನ್ನು ಉಂಟುಮಾಡುವುದಿಲ್ಲ, ಕೂದಲು ಉದುರುವಿಕೆಯನ್ನು ನಿಯಂತ್ರಿಸಬಹುದು.
ಜೇನು ಮತ್ತು ಪಪ್ಪಾಯಿ ಹೇರ್ ಪ್ಯಾಕ್
ಪಪ್ಪಾಯಿ ಮತ್ತು ಜೇನು ಎರಡೂ ಕೂದಲಿಗೆ ಬಲವನ್ನು ನೀಡುತ್ತದೆ. ಇವುಗಳನ್ನು ಬಳಸುವುದರಿಂದ ಕೂದಲು ಉದುರುವುದನ್ನು ನಿಯಂತ್ರಿಸಬಹುದು. ಇದನ್ನು ಮಾಡಲು ಒಂದು ಬಟ್ಟಲಿನಲ್ಲಿ 3-4 ಚಮಚ ಆಲಿವ್ ಎಣ್ಣೆಯನ್ನು ತೆಗೆದುಕೊಳ್ಳಬೇಕು. ಅದಕ್ಕೆ ಮಾಗಿದ ಪಪ್ಪಾಯಿಯನ್ನು ಮ್ಯಾಶ್ ಮಾಡಿ ಸೇರಿಸಿಕೊಳ್ಳಬೇಕು. ಈ ಮಿಶ್ರಣಕ್ಕೆ ಒಂದು ಅಥವಾ ಎರಡು ಚಮಚ ಜೇನುತುಪ್ಪವನ್ನು ಸೇರಿಸಿ. ಪ್ಯಾಕ್ ಅನ್ನು ಕೂದಲು, ನೆತ್ತಿಗೆ ಹಚ್ಚಿ ಸುಮಾರು 30 ನಿಮಿಷಗಳ ನಂತರ ನೀರಿನಿಂದ ತೊಳೆಯಿರಿ.
ಮೊಟ್ಟೆ ಮತ್ತು ಮೊಸರು ಪ್ಯಾಕ್
ಮೊಸರು ಮತ್ತು ಮೊಟ್ಟೆಯನ್ನು ಬಳಸಿ ಕೂದಲನ್ನು ಸ್ಟ್ರಾಂಗ್ ಮಾಡಬಹುದು. ಇದು ಕೂದಲಿಗೆ ನೈಸರ್ಗಿಕ ಕಂಡಿಷನರ್ ಆಗಿ ಕಾರ್ಯನಿರ್ವಹಿಸುತ್ತದೆ. ಒಂದು ಬೌಲ್‌ನಲ್ಲಿ ಎರಡು ಚಮಚ ಮೊಸರನ್ನು ತೆಗೆದುಕೊಳ್ಳಿ, ಅದಕ್ಕೆ ಮೊಟ್ಟೆಯ ಬಿಳಿಭಾಗವನ್ನು ಸೇರಿಸಿ. ಈ ಪೇಸ್ಟ್ ಅನ್ನು ಕೂದಲಿಗೆ ಹಚ್ಚಿ, ಒಣಗಿದ ನಂತರ ನೀರಿನಿಂದ ತೊಳೆಯಿರಿ.
ಗ್ರೀನ್ ಮತ್ತು ತೆಂಗಿನ ಎಣ್ಣೆ ಪ್ಯಾಕ್
ಈ ಹೇರ್ ಪ್ಯಾಕ್ ಬಳಸಿ ಕೂದಲು ಉದುರುವುದನ್ನು ನಿಲ್ಲಿಸಬಹುದು. ಇದಕ್ಕಾಗಿ ಒಂದು ಬಟ್ಟಲಿನಲ್ಲಿ ಗ್ರೀನ್ ಟೀ ತೆಗೆದುಕೊಳ್ಳಿ, ಅದರಲ್ಲಿ ತೆಂಗಿನ ಎಣ್ಣೆಯನ್ನು ಮಿಶ್ರಣ ಮಾಡಿ. ಈ ಪ್ಯಾಕ್ ಅನ್ನು ನೆತ್ತಿಯ ಮೇಲೆ ಅನ್ವಯಿಸಿ, ಸುಮಾರು 20-30 ನಿಮಿಷಗಳ ನಂತರ ನೀರಿನಿಂದ ತೊಳೆಯಿರಿ.
ಬಾಳೆಹಣ್ಣಿನ ಹೇರ್ ಪ್ಯಾಕ್
ಈ ಹೇರ್ ಪ್ಯಾಕ್ ಕೂದಲಿಗೆ ಆಳವಾದ ಕಂಡೀಷನಿಂಗ್ ಆಗಿ ಕಾರ್ಯನಿರ್ವಹಿಸುತ್ತದೆ. ಇದಕ್ಕಾಗಿ, 2-3 ಮಾಗಿದ ಬಾಳೆಹಣ್ಣುಗಳನ್ನು ಮ್ಯಾಶ್ ಮಾಡಿ, ಅದಕ್ಕೆ ಒಂದು ಚಮಚ ಜೇನುತುಪ್ಪವನ್ನು ಸೇರಿಸಿ ಮತ್ತು ಕೂದಲಿನ ಬೇರುಗಳಿಗೆ ಅನ್ವಯಿಸಿ. ಸುಮಾರು 30 ನಿಮಿಷಗಳ ನಂತರ ನೀರಿನಿಂದ ತೊಳೆಯಿರಿ.
BREAKING NEWS : ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾಗಿ ಆರ್.ಅಶೋಕ್ ನೇಮಕ |R.Ashok
BREAKING NEWS : ಬೆಂಗಳೂರಿನಲ್ಲಿ ಬೈಕ್ ಗೆ ಕ್ಯಾಂಟರ್ ಡಿಕ್ಕಿಯಾಗಿ ಯುವತಿ ಸ್ಥಳದಲ್ಲೇ ದುರ್ಮರಣ
2 ವರ್ಷಗಳ ಮೊದ್ಲೇ ವ್ಯಕ್ತಿಯ ಸಾವು ಊಹಿಸ್ಬೋದು ; ‘ಹೊಸ ಸಂಶೋಧನೆ’ಯಿಂದ ಶಾಕಿಂಗ್ ಸಂಗತಿ ಬಹಿರಂಗ