ಬಾಗಲಕೋಟೆ: ನಾನು ಹಿಂದೂ ವಿರೋಧಿ ಅಲ್ಲ, ಆದ್ರೆ ಹಿಂದುತ್ವದ ವಿರೋಧಿ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಸುಬುಧೇಂದ್ರ ತೀರ್ಥ ಶ್ರೀಗಳು ತೀರುಗೇಟು ನೀಡಿದ್ದಾರೆ.
ಅವರು ನೀಡಿರುವ ದ್ವಂದ್ವ ಹೇಳಿಕೆಯಲ್ಲಿ ಅರ್ಥವೇ ಇಲ್ಲ. ನಾನು ಹಿಂದೂ ಅಂತಾ ಆದ್ಮೇಲೆ ಹಿಂದುತ್ವವನ್ನು ಗೌರವಿಸಲೇಬೇಕು ಎಂದು ಕಿಡಿಕಾರಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಹಿಂದುತ್ವ ವಿಚಾರದಲ್ಲಿ ಅವರಿಗೆ ಸ್ವಲ್ಪ ಭೇದ ಇರಬಹುದು. ಆದರೆ ಹಿಂದೂಗಳೆಲ್ಲರೂ ಹಿಂದುತ್ವ ಗೌರವಿಸಲೇಬೇಕು. ಹಿಂದೂ ಎಂದು ಹಿಂದುತ್ವ ವಿರೋಧಿಸ್ತೇನೆ ಅನ್ನೋದು ಅರ್ಥಹೀನ ಎಂದರು.
BIGG NEWS: ಬೆಂಗಳೂರು ಜನರೇ ಗಮನಿಸಿ…!; ನಗರದ ಹಲವು ಕಡೆ ಫೆ 9ರವರೆಗೆ ವಿದ್ಯುತ್ ವ್ಯತ್ಯಯ
ಹಿಂದುಗಳಲ್ಲಿ ಇರುವಂತಹದ್ದು ಹಿಂದುತ್ವ. ನನ್ನ ತಾಯಿ ಅನ್ನೋದು, ಅವಳು ನಿಸ್ಸಾಂತಾನ ಉಳ್ಳುವಳು ಅನ್ನೋದು ಎಷ್ಟು ಅಪಹಾಸ್ಯ. ತಾಯಿ ಎಂದ ಮೇಲೆ, ಅವಳಿಗೆ ಸಂತಾನ ನೀನು ಅಂತಾ ಆಯ್ತಲ್ಲ ಎಂದರು. ಯಾವುದಾದ್ರೂ ವಿಚಾರದಲ್ಲಿ ಭಿನ್ನಾಭಿಪ್ರಾಯಗಳಿದ್ದರೆ ವಿಚಾರ ವಿನಿಮಯ ಮಾಡಿಕೊಂಡು ಅದನ್ನ ಪರಿಸಿಕೊಳ್ಳಬೇಕು. ಅದುಬಿಟ್ಟು ಹಿಂದೂ ಎಂದು ಹಿಂದುತ್ವ ವಿರೋಧಿಸ್ತೇನೆ ಅನ್ನೋದು ಅರ್ಥಹೀನ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
BIGG NEWS : ಕೆಲವೇ ದಿನಗಳಲ್ಲಿ ಜೆಡಿಎಸ್ ಪಕ್ಷ ಎರಡು ಭಾಗವಾಗಲಿದೆ : ಶಾಸಕ ರೇಣುಕಾಚಾರ್ಯ ವಾಗ್ದಾಳಿ