ಹಾವೇರಿ: ರಾಜ್ಯದಲ್ಲಿ ಬಿಜೆಪಿ ಪರ ಜನರ ಅಲೆಯಿದೆ. ಕಾಂಗ್ರೆಸ್ ಪಕ್ಷ ( Congress Party ) ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಗ್ಯಾರಂಟಿಯೇ ಇಲ್ಲ. ಹೀಗಿದ್ದೂ ಅವರು ನೀಡುತ್ತಿರುವಂತ ಗ್ಯಾರಂಟಿ ಕಾರ್ಡ್ ಅನ್ನೋದು ಒಂದು ಜೆರಾಕ್ಸ್ ಕಾಪಿ ಅಷ್ಟೇ ಎಂಬುದಾಗಿ ಕೃಷಿ ಸಚಿವ ಬಿ.ಸಿ ಪಾಟೀಲ್ ( Minister BC Patil ) ಹೇಳಿದ್ದಾರೆ.
ಹಾವೇರಿಯ ಹಿರೇಕೆರೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಕಾಂಗ್ರೆಸ್ ಪಕ್ಷ ನೀಡುತ್ತಿರುವ ಗ್ಯಾರಂಟಿಗೆ ಯಾವುದೇ ಬೆಲೆ ಇಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಗ್ಯಾರಂಟಿಯೇ ಇಲ್ಲ. ಗ್ಯಾರಂಟಿ ಕಾರ್ಡ್ ಅನ್ನೋದು ಒಂದು ಜೆರಾಕ್ಸ್ ಕಾಪಿ ಅಷ್ಟೇ ಎಂದರು.
ಸಿದ್ಧರಾಮಯ್ಯ ಎಲ್ಲಿ ಸ್ಪರ್ಧಿಸುತ್ತಾರೆ ಅನ್ನೋದೇ ಗ್ಯಾರಂಟಿ ಇಲ್ಲ. ಇನ್ನೂ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಯಾವ ಗ್ಯಾರಂಟಿ? ಅಭಿವೃದ್ಧಿ ಪಕ್ಷವಾದ ಬಿಜೆಪಿಗೆ ಜನರು ಮತ ನೀಡುತ್ತಾರೆ. ರಾಜ್ಯದಲ್ಲಿ ಬಿಜೆಪಿ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬುದಾಗಿ ತಿಳಿಸಿದರು.
ಬಿ.ಸಿ ಪಾಟೀಲ್ ಮನೆ ಮೇಲೆ ಐಟಿ ದಾಳಿಯ ಬಗ್ಗೆ ಸಿದ್ಧರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದಂತ ಅವರು, ನನ್ನ ಮನೆಯ ಮೇಲೆ ದಾಳಿ ಮಾಡಿದ್ರೇ 1 ಸಾವಿರ ಕೋಟಿ ಸುಗ್ತತದೆ. ಒಂದೇ ಡೀಲ್ ನಲ್ಲಿ ರಿಡೋ ಮೂಲಕ ಸಿದ್ಧರಾಮಯ್ಯ 8 ಸಾವಿರ ಕೋಟಿ ಮಾಡಿದ್ದಾರೆ. 8 ಲಕ್ಷ ಕೋಟಿ ರೂಪಾಯಿಯೂ ಮಾಡಿರಬಹುದು ಎಂಬುದಾಗಿ ತಿರುಗೇಟು ನೀಡಿದರು.
BREAKING NEWS : ತಜಕಿಸ್ತಾನದಲ್ಲಿ 4.4 ತೀವ್ರತೆಯ ಭೂಕಂಪ | Earthquake in Tajikistan
ʻಅಮೃತಪಾಲ್ ಸಿಂಗ್ʼಗಾಗಿ ಮುಂದುವರೆದ ಶೋಧ; ಪಂಜಾಬ್‌ನಲ್ಲಿ ಇಂಟರ್ನೆಟ್, SMS ಸೇವೆ ಸ್ಥಗಿತ