ಧಾರವಾಡ: ಹುಬ್ಬಳ್ಳಿಯಲ್ಲಿ ಐಟಿ-ಬಿಟಿ ಇಲಾಖೆಯ ಅಡಿ ನಡೆದ ಬಿಯೋಂಡ್ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಭಾಗಿಯಾಗಿದ್ದರು. ಈ ವೇಳೆ ಅವರು ಮಾತನಾಡಿದ ಅವರು, ಯೋಜನೆಯ ವಿಚಾರ ಕೇವಲ ಭಾಷಣಕ್ಕೆ ಸೀಮಿತವಾಗುತ್ತಿದೆ. ಕಾರ್ಯಕ್ರಮಗಳು ಅನುಷ್ಠಾನ ಆಗುತ್ತಿಲ್ಲ. ಇದಕ್ಕೆ ಸಂಬಂಧಿಸಿದ ಸಚಿವರು ಮತ್ತು ಅಧಿಕಾರಿಗಳು ಕೆಲಸ‌ ಮಾಡಬೇಕು ಎಂದು ಹೇಳಿದರು.

BIGG NEWS: ನಮ್ಮ ಬಗ್ಗೆ ಬಿಜೆಪಿ ಏಕೆ ಅಷ್ಟು ಕಾಳಜಿ?; ಮೊದಲು ಕಣ್ಣೀರು ಹಾಕುತ್ತಿರುವ ಪಾಪ ಈಶ್ವರಪ್ಪ ಸಂತೈಸಲಿ; ಡಿಕೆಶಿ ತಿರುಗೇಟು

ಕೈಗಾರಿಕೆಗಳನ್ನು ಸ್ಥಾಪಿಸುವ ವಿಚಾರದಲ್ಲಿ ಸರ್ಕಾರದಿಂದ ಸಹಕಾರ ಸಿಗುತ್ತಿಲ್ಲ ಎಂದು ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.
ಫಿಲ್ಡ್ ನಲ್ಲಿ ಅಧಿಕಾರಿಗಳು ಸರಿಯಾಗಿ ಕೆಲಸ‌ ಮಾಡುತ್ತಿಲ್ಲ. ಕೈಗಾರಿಕಾ ಸ್ಥಾಪನೆಗೆ ಪೂರಕ ವಾತಾವರಣ ಮಾತಿನಲ್ಲಿ ಮಾಡಿದರೆ ಸಾಲದು, ಕಾರ್ಯ ಆಗಬೇಕು. ಎಂದು ಪರೋಕ್ಷವಾಗಿ ಮುರುಗೇಶ್ ನಿರಾಣಿ ವಿರುದ್ಧ ಶೆಟ್ಟರ್ ಅಸಮಾಧಾನ ಹೊರ ಹಾಕಿದ್ದಾರೆ.
ವಿಶೇಷ ಹೂಡಿಕೆ ವಲಯ ಬಗ್ಗೆಯೂ ಘೋಷಣೆ ಆಗಿದೆ. ಅದು ಕೂಡ ಕಾರ್ಯಗತವಾಗಿಲ್ಲ. ಕೂಡಲೇ ಸಚಿವ ಸಂಪುಟದಲ್ಲಿ ಚರ್ಚಿಸಿ ಕಾರ್ಯಗತಗೊಳಿಸಿ. ಸಚಿವ ಅಶ್ವತ್ಥ್​ ನಾರಾಯಣ ಈ ಕೆಲಸವನ್ನ ಮಾಡಬೇಕು ಎಂದು ಒತ್ತಾಯಿಸಿದರು.

BIGG NEWS: ನಮ್ಮ ಬಗ್ಗೆ ಬಿಜೆಪಿ ಏಕೆ ಅಷ್ಟು ಕಾಳಜಿ?; ಮೊದಲು ಕಣ್ಣೀರು ಹಾಕುತ್ತಿರುವ ಪಾಪ ಈಶ್ವರಪ್ಪ ಸಂತೈಸಲಿ; ಡಿಕೆಶಿ ತಿರುಗೇಟು

ಚೆನ್ನಮ್ಮ ಕಿತ್ತೂರು ಬಳಿ ಇಂಟರ್ನ್ಯಾಷನಲ್ ಏರ್ಪೋರ್ಟ್ ​ಸ್ಥಾಪಿಸುವುದಾಗಿ ಸಚಿವರು ಹೇಳಿದ್ದರು. ಇದು ಸಾದ್ಯನಾ? ಯಾವುದಾದರು ತಂಡ ಭೇಟಿ‌ ನೀಡಿದೆಯಾ? ಭೂಮಿ ಮಂಜೂರು ಮಾಡಲು ಎರಡು ಮೂರು ವರ್ಷಗಳಾಗುತ್ತಿದೆ. ಏರ್​​ಪೋರ್ಟ್ ಸಾಧ್ಯತೆ ಬಗ್ಗೆ ಈವರೆಗೂ ಚರ್ಚೆ ಆಗಿದೆಯಾ? ಎಂದು ಶೆಟ್ಟರ್ ಪ್ರಶ್ನಿಸಿದರು.

Share.
Exit mobile version