ಜಿನೇವಾ: ಮುಂದಿನ ದಿನಗಳಲ್ಲಿ ಕೋವಿಡ್ ಗಿಂತಲೂ ಭಯಾನಕವಾದ ಸಾಂಕ್ರಾಮಿಕತೆ ಕಾಡುವ ಅಪಾಯವಿದೆ ಎಂಬುದಾಗಿ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.
ಈ ಬಗ್ಗೆ ಮಾಹಿತಿ ನೀಡಿರುವಂತ ಡಬ್ಲ್ಯೂಹೆಚ್ಓ ಮುಖ್ಯಸ್ಥ ಟೆಡ್ರೋಸ್ ಅಧಾನಂ ಘೇಬ್ರಿಯೆಸಸ್, ಕೋವಿಡ್ ಗಿಂತ ಡೇಂಜರ್ ಆದಂತ ವೈರಸ್ ವಿಶ್ವವನ್ನು ಮುಂದಿನ ದಿನಗಳಲ್ಲಿ ಕಾಡಿಸಲಿದೆ. ಜಗತ್ತು ಅದನ್ನು ಎದುರಿಸಲು ಸಜ್ಜಾಗಬೇಕು ಎಂಬುದಾಗಿ ಕರೆ ನೀಡಿದ್ದಾರೆ.
ಮುಂದೆ ಕಾಡಲಿರುವಂತ ಸಾಂಕ್ರಾಮಿಕ ರೋಗಗಳು ಮತ್ತು ಸಾವಿನ ಹೊಸ ಅಲೆಗೆ ಈ ತಳಿ ಕಾರಣವಾಗುವ ಸಾಧ್ಯತೆ ಇದೆ. ಹೆಚ್ಚು ಮಾರಕ ವೈರಾಣು ವಿಶ್ವದೆಲ್ಲೆಡೆ ಕಂಡು ಬರುವ ಅಪಾಯವಿದೆ ಎಂದಿದ್ದಾರೆ.
ಎಲ್ಲಾ ರಾಷ್ಟ್ರಗಳು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳಿಗೆ ಈಗಿನಿಂದಲೇ ಸಿದ್ಧತೆಯನ್ನು ಮಾಡಿಕೊಳ್ಳಬೇಕು. ವೈರಸ್ ವಿರುದ್ಧ ನಿರ್ಣಾಯಕ ಗೆಲುವು ದಾಖಲಿಸಬೇಕಾದರೆ, ಈಗಿನಿಂದಲೇ ಸಿದ್ಧತೆ ಅತ್ಯಗತ್ಯ ಎಂಬುದಾಗಿ ಮುನ್ನೆಚ್ಚರಿಕೆಯ ಸೂಚನೆ ನೀಡಿದ್ದಾರೆ.
ಅಂದಹಾಗೇ 76ನೇ ವಿಶ್ವ ಆರೋಗ್ಯ ಅಸೆಂಬ್ಲಿಯಲ್ಲಿ ಮಂಡಿಸಿದಂತ ವರದಿಯಲ್ಲಿ ಟೆಡ್ರೋಸ್ ಈ ಭೀಕರ ಸಾಂಕ್ರಾಮಿಕತೆಯ ಅಪಾಯದ ಬಗ್ಗೆ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. ಕೋವಿಡ್ ಆರೋಗ್ಯ ತುರ್ತು ಪರಿಸ್ಥಿತಿ ಕೊನೆಯಾದರೂ, ಅದು ಕೋವಿಡ್ ನ ಜಾಗತಿಕ ಆರೋಗ್ಯ ಬೆದರಿಕೆಯ ಅಂತ್ಯವಲ್ಲ ಎಂಬುದಾಗಿ ತಿಳಿಸಿದ್ದಾರೆ.
Good News : ರಾಜ್ಯದ ಶಾಲಾ ವಿದ್ಯಾರ್ಥಿಗಳಿಗೆ ಮತ್ತೊಂದು ಗುಡ್ ನ್ಯೂಸ್ : ಶಾಲಾ ಆರಂಭದ ದಿನವೇ ಸಿಗಲಿದೆ `ಸಮವಸ್ತ್ರ’
BREAKING NEWS : `ಜೆಡಿಎಸ್ ಯುವ ಘಟಕದ ಅಧ್ಯಕ್ಷ’ ಸ್ಥಾನಕ್ಕೆ ನಿಖಿಲ್ ಕುಮಾರಸ್ವಾಮಿ ರಾಜೀನಾಮೆ