ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 1,231 ಮಂದಿಗೆ ಕೋವಿಡ್ ಪಾಸಿಟಿವ್ ( Covid19 Positive ) ಎಂಬುದಾಗಿ ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಇಂದು ದಾಖಲೆಯ ಪ್ರಮಾಣದಲ್ಲಿ ಕೋವಿಡ್ ಸಂಖ್ಯೆ ಹೆಚ್ಚಳವಾಗಿದೆ.

ರಾಜ್ಯದ ‘ಸರ್ಕಾರಿ ನೌಕರ’ರಿಗೆ ಗುಡ್ ನ್ಯೂಸ್: ‘ಜೀವ ವಿಮಾ ಪಾಲಿಸಿ’ ಮೇಲೆ ‘ಸಾಲ ಮಂಜೂರಾತಿ’ಗೆ ‘ಆನ್ ಲೈನ್ ವ್ಯವಸ್ಥೆ’ ಜಾರಿ

ಈ ಕುರಿತು ರಾಜ್ಯ ಆರೋಗ್ಯ ಇಲಾಖೆ ಕೊರೋನಾ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಇಂದು ಬಾಗಲಕೋಟೆ, ಬೆಂಗಳೂರು ಗ್ರಾಮಾಂತರ, ಹಾಸನ ಮತ್ತು ಕೊಪ್ಪಳ ಜಿಲ್ಲೆಯಲ್ಲಿ ತಲಾ ಒಬ್ಬರಿಗೆ, ದಾವಣಗೆರೆ ಮತ್ತು ಶಿವಮೊಗ್ಗದಲ್ಲಿ ತಲಾ ಮೂವರಿಗೆ, ತುಮಕೂರು, ಉಡುಪಿ ಮತ್ತು ಕಲಬುರ್ಗಿ ಜಿಲ್ಲೆಯಲ್ಲಿ ತಲಾ 7 ಮಂದಿಗೆ ಕೊರೋನಾ ಪಾಸಿಟಿವ್ ( Corona Positive ) ಎಂಬುದಾಗಿ ದೃಢಪಟ್ಟಿದೆ ಎಂದು ತಿಳಿಸಿದೆ.

ಮಂಡ್ಯ ವಿವಿಗೆ ಇಡೀ ಜಿಲ್ಲೆ ವ್ಯಾಪ್ತಿ – ಸಚಿವ ಡಾ.ಸಿಎನ್ ಅಶ್ವತ್ಥನಾರಾಯಣ

ಬಳ್ಳಾರಿ 05, ಬೀದರ್ 04, ಚಿತ್ರದುರ್ಗ 04, ದಕ್ಷಿಣ ಕನ್ನಡ 09, ಧಾರವಾಡ 19,  ಕೋಲಾರ 11, ಮೈಸೂರು 13, ರಾಮನಗರ 5 ಮತ್ತು ಬೆಂಗಳೂರು ನಗರ 1,124 ಸೇರಿದಂತೆ 1,231 ಮಂದಿಗೆ ಹೊಸದಾಗಿ ಕೊರೋನಾ ದೃಢಪಟ್ಟಿರೋದಾಗಿ ಹೇಳಿದೆ.

‘ಶಿವಮೊಗ್ಗ ಜನತೆ’ಗೆ ಗುಡ್ ನ್ಯೂಸ್: ‘ಡಿಸೆಂಬರ್’ನಲ್ಲಿ ‘ವಿಮಾನ ನಿಲ್ದಾಣ’ ಲೋಕಾರ್ಪಣೆ

ಇಂದು 1231 ಜನರಿಗೆ ಕೊರೋನಾ ಸೋಂಕು ಪರೀಕ್ಷೆಯಲ್ಲಿ ದೃಢಪಟ್ಟ ಕಾರಣ ಸೋಂಕಿತರ ಸಂಖಅಯೆ 39,81,816ಕ್ಕೆ ಏರಿಕೆಯಾಗಿದೆ. ಇವರಲ್ಲಿ ಇಂದು 1047 ಸೇರಿದಂತೆ ಇದುವರೆಗೆ 39,35,088 ಸೋಂಕಿತರು ಗುಣಮುಖರಾಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಇದೀಗ 6,603 ಸಕ್ರೀಯ ಸೋಂಕಿತರು ಇರೋದಾಗಿ ಮಾಹಿತಿ ನೀಡಿದೆ.

Share.
Exit mobile version