ನವದೆಹಲಿ: ಗುಜರಾತ್ನ ನರ್ಮದಾ ನದಿಗೆ ಅಡ್ಡಲಾಗಿ ಸರ್ದಾರ್ ಸರೋವರ್ ಅಣೆಕಟ್ಟು ನಿರ್ಮಾಣವನ್ನು ಹಲವಾರು ವರ್ಷಗಳಿಂದ ನಗರ ನಕ್ಸಲರು ಮತ್ತು ಅಭಿವೃದ್ಧಿ ವಿರೋಧಿ ಶಕ್ತಿಗಳು ರಾಜಕೀಯ ಬೆಂಬಲದೊಂದಿಗೆ ತಡೆದಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಆರೋಪಿಸಿದ್ದಾರೆ. ಗುಜರಾತ್ ನಲ್ಲಿ ನಡೆದ ಪರಿಸರ ಸಚಿವರ ಸಮಾವೇಶವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು ಈ ವಿಷಯ ತಿಳಿಸಿದರು. ಇದೇ ವೇಳೆ ಅವರು ಮಾತನಾಡಿ, ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರು ಪ್ರಾರಂಭಿಸಿದ ಕೆಲಸವನ್ನು ತಾವು ಪೂರ್ಣಗೊಳಿಸಿರುವುದಾಗಿ ಅವರು ಹೇಳಿದರು.

ಪ್ರಧಾನಿ ಮೋದಿ ಅವರು ಪರಿಸರದ ಸೋಗಿನಲ್ಲಿ ದೇಶದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಿಲ್ಲಿಸುವ ಪ್ರಯತ್ನ ಹೇಗೆ ನಡೆದಿದೆ ಎಂದು ತಿಳಿಸಿದರು. “ಆಧುನಿಕ ಮೂಲಸೌಕರ್ಯಗಳಿಲ್ಲದೆ, ದೇಶದ ಅಭಿವೃದ್ಧಿಯಿಲ್ಲದೆ, ದೇಶವಾಸಿಗಳ ಜೀವನ ಮಟ್ಟವನ್ನು ಸುಧಾರಿಸುವ ಪ್ರಯತ್ನಗಳು ಯಶಸ್ವಿಯಾಗಲು ಸಾಧ್ಯವಿಲ್ಲ. ಆದರೆ ದೇಶದಲ್ಲಿ ಆಧುನಿಕ ಮೂಲಸೌಕರ್ಯಗಳ ನಿರ್ಮಾಣವು ಪರಿಸರ ಅನುಮತಿಗಳ ಹೆಸರಿನಲ್ಲಿ ಹೇಗೆ ಸಿಕ್ಕಿಹಾಕಿಕೊಂಡಿದೆ ಎಂಬುದನ್ನು ನಾವು ನೋಡಿದ್ದೇವೆ ಅಂತ ತಿಳಿಸಿದರು.

ನಗರ ನಕ್ಸಲರು, ಅಭಿವೃದ್ಧಿ ವಿರೋಧಿ ವಿರೋಧಿಗಳು ಸರ್ದಾರ್ ಸರೋವರ್ ಅಣೆಕಟ್ಟನ್ನು ಹೇಗೆ ನಿಲ್ಲಿಸಿದ್ದರು ಅಂತ ಅವರು ಕಿಡಿಕಾರಿದರು. ನೀವು ಇಲ್ಲಿ ದೊಡ್ಡ ಜಲಾಶಯವನ್ನು ನೋಡಿರಬಹುದು. ಸ್ವಾತಂತ್ರ್ಯಾನಂತರ ಅದರ ಶಂಕುಸ್ಥಾಪನೆ ನೆರವೇರಿತು. ಸರ್ದಾರ್ ವಲ್ಲಭಭಾಯಿ ಪಟೇಲರು ಇದರಲ್ಲಿ ಬಹಳ ದೊಡ್ಡ ಪಾತ್ರ ವಹಿಸಿದರು ಮತ್ತು ಪಂಡಿತ್ ನೆಹರು ಶಂಕುಸ್ಥಾಪನೆ ನೆರವೇರಿಸಿದರು. ಆದರೆ ಎಲ್ಲಾ ನಗರ ನಕ್ಸಲರು ಪ್ರಪಂಚದ ಜನರು ಇಲ್ಲಿಗೆ ಬಂದರು, ಇದು ಪರಿಸರ ವಿರೋಧಿ ಎಂದು ಸುಳ್ಳು ಪ್ರಚಾರ ಮಾಡಿದರು, ಈ ಯೋಜನೆಯನ್ನು ಪದೇ ತಡೆಯಲಾಯಿತು. ಇದರಿಂದ ದೇಶದ ಎಷ್ಟು ಹಣ ವ್ಯರ್ಥವಾಗಿದೆ ಅಂತ ಪ್ರಶ್ನೆ ಮಾಡಿದರು. ನೆಹರು ಅವರು ಪ್ರಾರಂಭಿಸಿದ ಕೆಲಸವು ನಾನು ಬಂದ ನಂತರ ಪೂರ್ಣಗೊಂಡಿತು.

BIGG NEWS : ‘ಬೆಂಕಿ ಪೊಟ್ಟಣ’ ಬಳಸಿ ಬಾಂಬ್‌ ಬ್ಲಾಸ್ಟ್‌ ನಡೆಸಿದ್ದ ಶಂಕಿತ ಉಗ್ರ : ಪೊಲೀಸರ ತನಿಖೆ ವೇಳೆ ಸ್ಪೋಟಕ ಮಾಹಿತಿ ಬಹಿರಂಗ

BIGG NEWS: BMS ಟ್ರಸ್ಟ್‌ ನಿಂದ ಒಂದು ಕುಟುಂಬಕ್ಕೆ ವರ್ಗಾವಣೆ; ಹೆಚ್.ಡಿ ಕುಮಾರಸ್ವಾಮಿ ಆರೋಪ

ಅಸ್ಸಾಂನ ಕಾಜಿರಂಗಾ ಪಾರ್ಕ್ ಬಳಿ ʻ ಸೈಕ್ಲಿಸ್ಟ್ ಮೇಲೆ ಚಿರತೆ ದಾಳಿ ʼ : ಮುಂದೆನಾಯ್ತು ಗೊತ್ತಾ? ಅಘಾತಕಾರಿ ವಿಡಿಯೋ ವೈರಲ್ | Watch

Share.
Exit mobile version