ಗಾಳಿ ಸುದ್ದಿಗಳಿಗೆ ಗವಾಕ್ಷಿಗಳಾಗದೆ ಸತ್ಯಕ್ಕೆ ಕಿಟಕಿಗಳಾಗಬೇಕಿದೆ: ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್

ಚಿತ್ರದುರ್ಗ: ಮಾಧ್ಯಮಗಳು ಗಾಳಿ ಸುದ್ದಿಗಳಿಗೆ ಗವಾಕ್ಷಿಗಳಾಗದೆ ಸತ್ಯಕ್ಕೆ ಕಿಟಕಿಗಳಾಗಬೇಕಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ನುಡಿದರು. ಚಿತ್ರದುರ್ಗ ಪತ್ರಕರ್ತರ ಸಂಘ ಆಯೋಜಿಸಿದ್ದ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಮೊದಲೆಲ್ಲಾ ಸಮಾಜದಲ್ಲಿ ಗಾಳಿ ಸುದ್ದಿಗಳು ವ್ಯಾಪಿಸಿದಾಗ ಸತ್ಯ ತಿಳಿಯಲು ಜನರು ಮಾಧ್ಯಮಗಳನ್ನು ಗಮನಿಸುತ್ತಿದ್ದರು. ಈಗ ಮಾಧ್ಯಮಗಳೇ ಗಾಳಿ ಸುದ್ದಿಗಳಿಗೆ ಮನಸೋತಿರುವುದರಿಂದ ಜನರಿಗೆ ಸತ್ಯ ಮತ್ತು ಸುಳ್ಳಿನ ನಡುವೆ ವ್ಯತ್ಯಾಸವೇ ಗೊತ್ತಿಲ್ಲದಂತಾಗಿದೆ ಎಂದರು. ಪತ್ರಿಕಾ ವೃತ್ತಿಯ ಆದ್ಯತೆಗಳೇ ಈಗ ತಲೆ ಕೆಳಗಾಗಿದ್ದು, ಅಭಿವೃದ್ಧಿ-ತನಿಖಾ ಪತ್ರಿಕೋದ್ಯಮ ಹೋಗಿ ಹೇಳಿಕೆ ಪತ್ರಿಕೋದ್ಯಮ ಮಾತ್ರ … Continue reading ಗಾಳಿ ಸುದ್ದಿಗಳಿಗೆ ಗವಾಕ್ಷಿಗಳಾಗದೆ ಸತ್ಯಕ್ಕೆ ಕಿಟಕಿಗಳಾಗಬೇಕಿದೆ: ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್