ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಕೈಯಲ್ಲಿ ಹಣವಿಲ್ಲದಿದ್ದಾಗ ಅವಶ್ಯಕತೆ ಬಂದರೆ ಬೇರೆಯವರಿಂದ ಸಾಲ ಮಾಡಬೇಕಾಗುತ್ತೆ. ಆದ್ರೆ, ಇತ್ತಿಚಿಗೆ ಅನೇಕರು ಹೊರಗಿನ ಸಾಲ ಪಡೆಯುವುದನ್ನ ನಿಲ್ಲಿಸಿದ್ದು, ಸಾಲಕ್ಕಾಗಿ ಬ್ಯಾಂಕ್‌ಗಳ ಮೊರೆ ಹೋಗುತ್ತಿದ್ದಾರೆ. ಬ್ಯಾಂಕ್‌ಗಳು ಕೂಡ ಇಂದು ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುತ್ತಿವೆ. ಮೇಲಾಗಿ, ಒಳ್ಳೆ ಆಫರ್’ಗಳನ್ನ ಘೋಷಿಸಿ ಗ್ರಾಹಕರನ್ನ ಸೆಳೆಯುತ್ತಿವೆ. ಅಲ್ಲದೇ, ಸಾಲ ಪಡೆದ ಮೊತ್ತವನ್ನ ಕಂತುಗಳಲ್ಲಿ ಪಾವತಿಸಬೋದು.
ಸಾಲಗಾರರು ಕಂತು ವಿಧಾನದಲ್ಲಿ ಸ್ವಲ್ಪಮಟ್ಟಿಗೆ ಬ್ಯಾಂಕ್ ಸಾಲವನ್ನ ಮರುಪಾವತಿ ಮಾಡುತ್ತಿದ್ದಾರೆ. ಆದ್ರೆ, ಕೆಲವೊಮ್ಮೆ ಕೈಯಲ್ಲಿ ಹಣ ಇಲ್ಲದಿದ್ದಾಗ ಕೆಲವು ತಿಂಗಳು ಕಂತು ಕಟ್ಟಲು ಸಾಧ್ಯವಾಗೋದಿಲ್ಲ. ಆಗ ಕಂತು ಕಟ್ಟದಿದ್ದರೆ ಬ್ಯಾಂಕ್’ಗಳಲ್ಲಿ ಏಜೆಂಟರು ಬಂದು ಹಣ ಪಾವತಿಸಲು ತೊಂದರೆ ಕೊಡುವುದು ಮಾಮೂಲಿ. ಇನ್ನು ಹಣ ನೀಡದಿದ್ದರೆ ಮನೆಯ ವಾಹನಗಳನ್ನ ತೆಗೆದುಕೊಂಡು ಹೋದ ಘಟನೆಗಳೂ ಸಾಕಷ್ಟು ನಡೆದಿವೆ. ಆದರೆ ಇತ್ತೀಚೆಗಷ್ಟೇ ಪಾಟ್ನಾ ಹೈಕೋರ್ಟ್ ಈ ವಿಚಾರವಾಗಿ ಸಂವೇದನಾಶೀಲ ತೀರ್ಪು ನೀಡಿದೆ.
ಪ್ರಸ್ತುತ ಯುಗದಲ್ಲಿ ಸಾಲ ಪಡೆದ ವಾಹನಗಳ ಮಾಲೀಕರು ಸಾಲದ ಮೊತ್ತವನ್ನ ಪಾವತಿಸದಿದ್ದರೆ, ಬಲಶಾಲಿಗಳನ್ನ ಕಳುಹಿಸಿ ಸಾಲ ಪಡೆದವರ ವಾಹನಗಳನ್ನ ಜಪ್ತಿ ಮಾಡುತ್ತಾರೆ. ಆದ್ರೆ ಇದು ತಪ್ಪು ಎಂದು ನ್ಯಾಯಾಲಯ ಹೇಳಿದೆ. ಈ ಪದ್ಧತಿಯನ್ನ ಬದಲಾಯಿಸುವಂತೆ ಪಾಟ್ನಾ ಹೈಕೋರ್ಟ್ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳಿಗೆ ನಿರ್ದೇಶನ ನೀಡಿದೆ. ಸಂವಿಧಾನದ ಚೌಕಟ್ಟಿನಲ್ಲಿ ಕಾನೂನುಗಳ ಪ್ರಕಾರ ಸಾಲ ವಸೂಲಾತಿಯನ್ನ ನಿಭಾಯಿಸಬೇಕು ಎಂದು ಸೂಚಿಸಿದೆ. ಇನ್ನು ನಿಯಮ ಉಲ್ಲಂಘಿಸಿದಲ್ಲಿ ಆಯಾ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳಿಗೆ 50 ಸಾವಿರ ದಂಡ ವಿಧಿಸಲಾಗುವುದು ಎಂದು ನ್ಯಾಯಾಲಯ ಎಚ್ಚರಿಕೆ ನೀಡಿದೆ.
BREAKING NEWS: ಹೃದಯಾಘಾತದಿಂದ ಕನ್ನಡದ ‘ಖ್ಯಾತ ವಿಮರ್ಶಕ ಜಿ.ಹೆಚ್ ನಾಯಕ’ ನಿಧನ | G.H Nayaka No More
‘ಪ್ರಧಾನಿ ಮೋದಿ’ ಕೊಲ್ಲುವುದಾಗಿ ಬೆದರಿಕೆ, ಕರೆ ಪತ್ತೆಹಚ್ಚಿ, ಆರೋಪಿ ಬಂಧಿಸಿದ ಪೊಲೀಸರು
‘ಮೋದಿ’ ಪ್ರಧಾನಿಯಾಗಿದ್ದು ಕಾಂಗ್ರೆಸ್ ಭಿಕ್ಷೆಯಿಂದಲ್ಲ, ಜನಪ್ರಿಯ ಜನಾದೇಶದಿಂದ ; ಅಮಿತ್ ಶಾ