ಚಿಕನ್ ರೋಲ್ ಕೊಡದಿದ್ದಕ್ಕೆ ಹೋಟೆಲ್ ಗೆ ಬೆಂಕಿ ಇಟ್ಟ ಪುಂಡರು ಅಂದರ್

ಬೆಂಗಳೂರು : ಚಿಕನ್ ರೋಲ್ ಕೊಡದಿದ್ದಕ್ಕೆ ಪುಂಡರು ಹೋಟೆಲ್ ಗೆ ಬೆಂಕಿ ಇಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಹನುಮಂತನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ದೇವರಾಜ್ ಹಾಗೂ ಈತನ ಗ್ಯಾಂಗ್ ಹೋಟೆಲ್ ವೊಂದರಲ್ಲಿ ದಾಂಧಲೆ ನಡೆಸಿದೆ. ಚಿಕನ್ ರೋಲ್ ವಿಚಾರಕ್ಕೆ ಗಲಾಟೆ ನಡೆದಿದ್ದು, ಪುಂಡರ ಗ್ಯಾಂಗ್ ಹೋಟೆಲ್ ಗೆ ಬೆಂಕಿ ಇಟ್ಟಿದ್ದಾರೆ. ಘಟನೆ ಸಂಬಂಧ ದೇವರಾಜ್ , ಗಣೇಶ್ ಎಂಬಾತನನ್ನು ಬಂಧಿಸಲಾಗಿದ್ದು, ಮತ್ತೋರ್ವ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಘಟನೆ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. … Continue reading ಚಿಕನ್ ರೋಲ್ ಕೊಡದಿದ್ದಕ್ಕೆ ಹೋಟೆಲ್ ಗೆ ಬೆಂಕಿ ಇಟ್ಟ ಪುಂಡರು ಅಂದರ್